
ನವದೆಹಲಿ (30.03.2021): ಭಾರತದ ಮಹಿಳಾ ಟಿ-20 ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಕೊರೊನಾಗೆ ಕೊರೊನಾ ವಕ್ಕರಿಸಿದೆ.
32 ವರ್ಷದ ಹರ್ಮನ್ಪ್ರೀತ್ ಕೌರ್, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಐದು ಏಕದಿನ ಪಂದ್ಯದ ತಂಡದಲ್ಲಿದ್ದರು. ಐದನೇ ಪಂದ್ಯದಲ್ಲಿ ಗಾಯಗೊಂಡ ಹರ್ಮನ್ಪ್ರೀತ್ ಕೌರ್, ಟಿ-20 ತಂಡದಿಂದ ಹೊರ ಬಿದ್ದಿದ್ದರು. ಇವರಿಗೆ ಈಗ ಕೊರೊನಾ ಲಕ್ಷಣಗಳು ಕಂಡು ಬಂದಿವೆ.
ಪಾಸಿಟಿವ್ ಬಂದ ಕಾರಣ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆಂದು ಆರೋಗ್ಯ ಇಲಾಖೆ ಹೇಳಿದೆ.