
ಬಿಜಾಪುರ (08.04.2021) : ಛತ್ತೀಸ್ಗಢದಲ್ಲಿ ನಕ್ಸಲ್ ದಾಳಿ ವೇಳೆ ನಾಪತ್ತೆಯಾಗಿದ್ದ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರು ನಮ್ಮ ಒತ್ತೆಯಾಳಾಗಿದ್ದಾರೆ ಎಂದು ಹೇಳಿಕೊಂಡಿರುವ ನಕ್ಸಲರು ಯೋಧನ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ.
ಸರ್ಕಾರವು ಸಂಧಾನಕಾರರನ್ನು ಕಳುಹಿಸಿ ಕೊಟ್ಟರೆ ಯೋಧನನ್ನು ಹಸ್ತಾಂತರಿಸುವುದಾಗಿ ನಿಷೇಧಿತ ಸಂಘಟನೆಯ ದಂಡಕಾರಣ್ಯ ವಿಶೇಷ ವಲಯ ಸಮಿತಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಇನ್ನೊಂದೆಡೆ ಮಾತನಾಡಿರುವ ಸಿಆರ್ಪಿಎಫ್ ಮುಖ್ಯಸ್ಥ ಕುಲದೀಪ್ ಸಿಂಗ್, ಮನ್ಹಾಸ್ ನಕ್ಸಲರ ಒತ್ತೆಯಲ್ಲಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ. ನಾವು ಶೋಧ ಕಾರ್ಯ ನಡೆಸುತ್ತಿದ್ದೇವೆ. ಕಾರ್ಯಾಚರಣೆ ವೇಳೆ ಅವರು ಅಸ್ವಸ್ಥರಾಗಿ ಕುಳಿತಿದ್ದರು ಎಂಬ ಮಾಹಿತಿಯಷ್ಟೇ ಸಿಕ್ಕಿದೆ. ಆದರೆ, ನಕ್ಸಲರು ಅಪಹರಿಸಿರುವ ಕುರಿತು ಇನ್ನೂ ಮಾಹಿತಿ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.