Friday, March 5 , 2021
ಗಲ್ವಾನ್ ಘರ್ಷಣೆಯಲ್ಲಿ ಚೀನಾ ಸೈನಿಕರು ಸಾವು: ಕೊನೆಗೂ ಒಪ್ಪಿಕೊಂಡ ಚೀನಾ

ಬೀಜಿಂಗ್ (19/02/2021) : ಕಳೆದ ವರ್ಷ ಪೂರ್ವ ಲಡಾಕ್‍ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ಐವರು ಸೇನಾಧಿಕಾರಿಗಳು ಹಾಗೂ ಸೈನಿಕರು ಸಾವಿಗೀಡಾಗಿರುವ ಸತ್ಯವನ್ನು ಕೊನೆಗೂ ಚೀನಾ ಒಪ್ಪಿಕೊಂಡಿದೆ

ಪ್ರಥಮ ಬಾರಿಗೆ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಅಧಿಕೃತವಾಗಿ ಅಂಗೀಕರಿಸಿದೆ. ರಷ್ಯಾ ದೇಶ ಸೇರಿದಂತೆ ಇತರ ರಾಷ್ಟ್ರಗಳು ಗಲ್ವಾನ್‍ನಲ್ಲಿ ಭಾರತ ಮತ್ತು ಚೀನಾದ ದೇಶದ ಸೈನಿಕರ ನಡುವೆ ತಿಕ್ಕಾಟದಲ್ಲಿ ಚೀನಾದ ಸುಮಾರು 40ಕ್ಕೂ ಹೆಚ್ಚು ಸೈನಿಕರು ಮರಣಿಸಿದ್ದರು ಎಂದು ತನಿಖಾ ವರದಿ ನೀಡಿದ್ದನ್ನು, ಅಲ್ಲಗೆಳೆದಿದ್ದ ಪಿಎಲ್‍ಎ ಅಂತಿಮವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ.

ಕಾರಕೋರಂ ಪರ್ವತಗಳಲ್ಲಿ ಬೀಡುಬಿಟ್ಟಿದ್ದ ಚೀನಾದ ಐದು ಗಡಿನಾಡಿನ ಅಧಿಕಾರಿಗಳು ಹಾಗೂ ಸೈನಿಕರನ್ನು ಚೀನಾ ಕೇಂದ್ರ ಮಿಲಿಟರಿ ಆಯೋಗ (ಸಿಎಂಸಿ) ಗುರುತಿಸಿದೆ. ಇವರು ಭಾರತದ ಗಡಿ ರಕ್ಷಣೆಯಲ್ಲಿ ನಿರತರಾಗಿದ್ದ ಸೇನೆಯ ನಡುವೆ ತಿಕ್ಕಾಟ ನಡೆಸಿ, ಮುಖಾಮುಖಿ ಎದುರಿಸಲು ಯತ್ನಿಸುವ ಸಂದರ್ಭದಲ್ಲಿ ಜೀವ ತೆತ್ತಿದ್ದಾರೆ. ಇದು 2020ರ ಜೂನ್‍ನಲ್ಲಿ ಗಲ್ವಾನ್ ಕಣಿವೆಯ ಭಾಗದಲ್ಲಿ ನಡೆದಿತ್ತು ಎಂದು ಚೀನಾದ ಮಿಲಿಟರಿ ಪತ್ರಿಕೆ (ಪಿಎಲ್‍ಎ) ವರದಿ ಮಾಡಿದೆ.

ಘರ್ಷಣೆಯಲ್ಲಿ ಮಡಿದವರಲ್ಲಿ ಪಿಎಲ್‍ಎ ರೆಜಿಮೆಂಟಲ್ ಕಮಾಂಡರ್ ಕ್ಯೂಇ ಫ್ಯಾಬೌ ಇತರರು ಸೇರಿದ್ದಾರೆ ಎಂದು ಯುಎನ್ ಗ್ಲೋಬಲ್ ಟೈಮ್ಸ್ ಗುರುತಿಸಿದೆ. ಈ ಘಟನೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಇದ್ದೇ ಇದೆ. ಪ್ಯಾಂಗೋಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಎರಡೂ ಕಡೆಯಿಂದ ಸೈನ್ಯವನ್ನು ನಿಯೋಜಿಸುವುದರೊಂದಿಗೆ ಸಾವು, ನೋವುಗಳು ಸಂಭವಿಸುತ್ತಿವೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]