Friday, January 15 , 2021
ಸರ್ಕಾರದ ಬಹುದೊಡ್ಡ ನಿರ್ಧಾರ : ಹಲವಾರು ಕಾಯ್ದೆಗಳ ರದ್ದು, ಯಾಕೆ?

ಬೆಂಗಳೂರು (04.12.2020) : ಹಲವು ಕಾನೂನುಗಳು ಕಾಲಾಂತರದಲ್ಲಿ ಬಳಕೆಯಾಗದೇ ಅನಗತ್ಯವಾಗಿ ಜಾರಿಯಲ್ಲಿರುತ್ತವೆ. ಇಂತಹ ಹಳೆಯ ಕಾನೂನುಗಳನ್ನು ರದ್ದುಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕ ನಿರ್ದಿಷ್ಟ ಶಾಸನಗಳು ಹಾಗೂ ಪ್ರಾದೇಶಿಕ ಕಾನೂನುಗಳ ರದ್ದುಗೊಳಿಸುವಿಕೆ ಕಾಯ್ದೆ-2020ಅನ್ನು ಜಾರಿಗೆ ತಂದಿದೆ.

ರಾಜ್ಯ ಸರ್ಕಾರ ಒಟ್ಟು 174 ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿದೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕದ ಅತ್ಯಂತ ಪುರಾತನ ಕಾಯ್ದೆಯನ್ನು ಸರ್ಕಾರ ತೆಗೆದುಹಾಕಿದೆ.

175 ವರ್ಷದಷ್ಟು ಹಳೆಯದಾದ ಕಂದಾಯ ಬಾಕಿಗಾಗಿ ಭೂಮಿ ಮಾರಾಟ ಕಾಯ್ದೆ 1984ಯನ್ನು ರದ್ದುಗೊಳಿಸಲಾಗಿದೆ. ರಾಜ್ಯ ಸರ್ಕಾರ ಒಟ್ಟು 15 ಬ್ರಿಟಿಷರ ಕಾಲದ ಶಾಸನಗಳನ್ನು ರದ್ದುಗೊಳಿಸಲು ಮುಂದಾಗಿದೆ. ಈ ಮೂಲಕ ಸರ್ಕಾರ ಒಟ್ಟು 174 ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿದೆ.

ಪ್ರಮುಖ ಕಾಯ್ದೆಗಳು:
ರಾಜ್ಯ ಸರ್ಕಾರ ಬಾಡಿಗೆ ವಸೂಲಾತಿ ಕಾಯ್ದೆ 1853, ಲಸಿಕಾ ಕಾಯ್ದೆ 1877 ಸೇರಿದಂತೆ ಹಲವು ಬ್ರಿಟಿಷರ ಕಾಲದ ಕಾಯ್ದೆಗಳನ್ನು ರದ್ದುಗೊಳಿಸಿದೆ. ರದ್ದುಪಡಿಸಿದ ಆರು ಕಾಯ್ದೆಗಳು ಇಡೀ ರಾಜ್ಯಕ್ಕೆ ಅನ್ವಯವಾಗಿದ್ದವು. ಇನ್ನು 9 ಕಾಯ್ದೆಗಳು ಅಂದಿನ ಬಾಂಬೆ, ಹೈದರಾಬಾದ್, ಮೈಸೂರು, ಮದ್ರಾಸ್, ಕೇರಳ ಮತ್ತು ಕೂರ್ಗ್ ರಾಜ್ಯಗಳಿಗೆ ಸಂಬಂಧ ಪಟ್ಟಿದ್ದಾಗಿದ್ದವು.

ನಿರಸನಗೊಂಡ ಸುಮಾರು 96 ಕಾನೂನುಗಳನ್ನು ಮೈತ್ರಿ ಸರ್ಕಾರ ಜಾರಿಗೆ ತಂದಿತ್ತು. ಅದರಲ್ಲಿ ಪ್ರಮುಖವಾಗಿ ಅರಣ್ಯ ಅಭಿವೃದ್ಧಿ ತೆರಿಗೆ ಸಂಗ್ರಹ ಸಂಬಂಧಿತ ಪರಿಷ್ಕೃತ ಕಾನೂನು, ಪ್ರಶ್ನೆ ಪತ್ರಿಕೆ ಸೋರಿಕೆ ನಿಯಂತ್ರಣ ಕಾನೂನು, ಬೆಂಗಳೂರು ಕೆರೆ ಸಂರಕ್ಷಣೆ ಸಂಬಂಧಿತ ಅನಗತ್ಯ ಕಾನೂನುಗಳು ಸೇರಿವೆ.ರದ್ದುಗೊಳಿಸಿದ ಹಲವು ಕಾನೂನುಗಳಲ್ಲಿ ಹಿಂದಿನ ವರ್ಷಗಳಲ್ಲಿನ ಹಣಕಾಸು ಮಸೂದೆ‌ ಮತ್ತು 2019ರಲ್ಲಿ ಯಡಿಯೂರಪ್ಪ ಅವರು ಮಂಡಿಸಿದ್ದ ಲೇಖಾನುದಾನ ಕಾಯ್ದೆಯನ್ನು ಸಹ ರದ್ದುಗೊಳಿಸಲಾಗಿದೆ.

ಕರ್ನಾಟಕ ಕಾನೂನು ಆಯೋಗ ತನ್ನ 53ನೇ ವರದಿಯಲ್ಲಿ ಈ ಹಿಂದಿನ ಬೆಳಗಾವಿ, ಕೂರ್ಗ್, ಮಂಗಳೂರು, ಕೊಳ್ಳೆಗಾಲ, ಕಲಬುರಗಿ ಮತ್ತು ಮೈಸೂರು ಪ್ರದೇಶಕ್ಕೆ ಸಂಬಂಧಿತ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಲಾಗಿತ್ತು. ಅದೇ ರೀತಿ 2016 ರಿಂದ 2019ರ ವರೆಗೆ ಜಾರಿಗೆ ತರಲಾಗಿದ್ದ 96 ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಲಾಗಿದೆ. ಅದರಲ್ಲಿ ಮೋಟಾರು ವಾಹನ ತೆರಿಗೆ ಕಾಯ್ದೆ, ಲೇಖಾನುದಾನ ಕಾಯ್ದೆ, ಹಣಕಾಸು ಮಸೂದೆ ಸೇರಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]