Friday, December 4 , 2020
ಆರ್​ಆರ್​ನಗರದಲ್ಲಿ ಉಪಚುನಾವಣೆ : ಮುನಿರತ್ನ ಆಸ್ತಿ ಎಷ್ಟಿದೆ ಗೊತ್ತಾ!?

ಬೆಂಗಳೂರು (15.10.2020) : ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಆಸ್ತಿ ಬಗ್ಗೆ ಕೇಳಿದ್ರೆ ನೀವು ಅಚ್ಚರಿ ಪಡುತ್ತೀರ.

ಹೌದು, ಮುನಿರತ್ನ 89 ಕೋಟಿ ರೂ.ಗಳ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇವೆ ಮೇಲೆ 5 ಕ್ರಿಮಿನಲ್ ಪ್ರಕರಣಗಳು ಕೂಡ ಇವೆ. ಮುನಿರತ್ನ ಒಟ್ಟು 89,13,47,877 ಮೌಲ್ಯದ ಆಸ್ತಿ ಹೊಂದಿದ್ದಾರೆ. 62,61,34,400 ಮೌಲ್ಯದ ಸ್ಥಿರಾಸ್ತಿ, 26,52,13,477 ಮೌಲ್ಯದ ಚರಾಸ್ತಿ ಹೊಂದಿದ್ದು,1,23,99,000 ಮೌಲ್ಯದ ಚಿನ್ನಾಭರಣ, 3,930 ಗ್ರಾಂ ಚಿನ್ನ, 40.94 ಕೆ.ಜಿ ಬೆಳ್ಳಿ, ಪತ್ನಿ ಹೆಸರಲ್ಲಿ 4,40,000 ರೂ. ಮೌಲ್ಯದ 360 ಗ್ರಾಂ ಚಿನ್ನ ಹೊಂದಿರುವ ಬಗ್ಗೆ ವಿವರ ಸಲ್ಲಿಕೆ ಮಾಡಿದ್ದಾರೆ. ಮುನಿರತ್ನ ಹೆಸರಲ್ಲಿ 111.27 ಕ್ಯಾರೆಟ್ ಡೈಮಂಡ್ ಇದ್ದು, 1,31,68,666 ಮೌಲ್ಯದ ವಾಹನ ಹೊಂದಿದ್ದಾರೆ.

ಕುರುಕ್ಷೇತ್ರ ಸಿನಿಮಾ ನಿರ್ಮಾಣ ಮಾಡಿದ್ದ ಮುನಿರತ್ನ ಅದರಿಂದ ಬಂದ ಆದಾಯ, ಹೂಡಿಕೆಗಳ ಬಗ್ಗೆ ಮಾಹಿತಿ ನೀಡಿದ್ದು, ಸಾಲದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಪತ್ನಿಯ ಹೆಸರಲ್ಲಿ 4.38 ಕೋಟಿ ಸೇರಿ ಒಟ್ಟು 46,42,61,785 ರೂ. ಸಾಲವಿದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಮುನಿರತ್ನ ತಮ್ಮ ವಿವರದಲ್ಲಿ 5 ಕ್ರಿಮಿನಲ್ ಕೇಸ್​​ಗಳು ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ.


ಇನ್ನು ಆರ್​ಆರ್​ ನಗರ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಕೂಡ ತನ್ನ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿ. ಕೃಷ್ಣಮೂರ್ತಿ 2.66 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಚುನಾವಣಾಧಿಕಾರಿಗೆ ಇಂದು ಸಲ್ಲಿಸಿರುವ ಆಸ್ತಿ ವಿವರದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು ಯಾವುದೇ ಸಾಲವನ್ನು ಹೊಂದಿಲ್ಲ ಎಂದು ತಿಳಿಸಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕುಸುಮ ಹನುಮಂತರಾಯಪ್ಪ ಲಕ್ಷಾಧೀಶೆಯಾಗಿದ್ದು, ಸ್ವಲ್ಪ ಸಾಲ ಕೂಡ ಹೊಂದಿದ್ದಾರೆ. ಇವರು ನಗದು ರೂಪದಲ್ಲಿ 1,41,050 ರೂ ಹೊಂದಿದ್ದಾರೆ. ಕೆನರಾ ಬ್ಯಾಂಕ್, ನಾಗರಭಾವಿ ಬ್ರ್ಯಾಂಚ್​​​ನಲ್ಲಿ 1,76,670.85 ರೂ, ಆಕ್ಸಿಸ್ ಬ್ಯಾಂಕ್ ಐಟಿಐ ಲೇಔಟ್- 57,775ರೂ., ಬ್ಯಾಂಕ್ ಆಫ್ ಬರೋಡಾ, ಕುಮಾರಸ್ವಾಮಿ ಲೇ ಔಟ್_ 3,27,765.29 ರೂ., ಬ್ಯಾಂಕ್ ಆಫ್ ಬರೋಡಾ ಸೌತ್ ಎಂಡ್ ರಸ್ತೆ- 1,000ರೂ, ಎಸ್ ಬಿಐ ನಾಗರಭಾವಿ ಬ್ಯಾಂಕ್ – 41,620. 24 ರೂ. ಹೊಂದಿದ್ದು, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಮುಂತಾದ ಹೂಡಿಕೆ ಹೊಂದಿದ್ದಾರೆ. ಸುಮಾರು 2,45, 000 ರು ವಿವಿಧ ಬಾಂಡ್, ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಯಾವುದೇ ಸ್ವಂತ ವಾಹನ ಹೊಂದಿಲ್ಲ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]