Sunday, October 18 , 2020
ಸೇತುವೆ ಕೊಚ್ಚಿ ಹೋಗಿ 30 ವರ್ಷವಾದರೂ ಸರ್ಕಾರ ನಿರ್ಮಿಸಲಿಲ್ಲ | ಸರ್ಕಾರಕ್ಕೆ ಮುಖಭಂಗವಾಗುವಂತೆ ತಾವೇ ಸೇತುವೆ ನಿರ್ಮಿಸಿದ ಗ್ರಾಮಸ್ಥರು
gaya

ಗಯಾ(19.09.2020):  30 ವರ್ಷಗಳಿಂದಲೂ ಸೇತುವೆಯ ಕಾಮಗಾರಿ  ಮಾಡಿಕೊಡಿ ಎಂದು ಗೋಗರೆದು ಸಾಕಾದ ಆ ಗ್ರಾಮಸ್ಥರು, 30 ವರ್ಷಗಳ ಕಾಲ ಸರ್ಕಾರ ಏನೋ ಮಾಡುತ್ತದೆ ಎಂದು ಕಾದು ಕುಳಿತಿದ್ದರು. ಆದರೆ ಸರ್ಕಾರ ಅಸಮರ್ಥ ಎಂದು ತಿಳಿದಾಗ ಇನ್ನೂ ಕಾದು ಪ್ರಯೋಜನವಿಲ್ಲ ಎಂದು ಅರಿತ ಗ್ರಾಮಸ್ಥರು, ತಾವೇ ಸೇತುವೆಯನ್ನು ನಿರ್ಮಿಸಿ, ಸರ್ಕಾರಕ್ಕೆ ಮರ್ಮಾಘಾತವನ್ನು ನೀಡಿದ್ದಾರೆ.


ಈ ಘಟನೆ ನಡೆದಿರುವುದು ಬಿಹಾರದ ಗಯಾದ ಪಿಥೋರಗ  ಜಿಲ್ಲೆಯ ಸಭಾ ಗಾರ್ಡಿ ಗ್ರಾಮದಲ್ಲಿ.  ಮಳೆಯ ಪರಿಣಾಮ ಇಲ್ಲಿನ 110 ಅಡಿ ಉದ್ದ ಮತ್ತು 12 ಅಡಿ ಅಗಲದ,  ವಾಜಿರ್‌ಗಂಜ್‌ನ ಬುಧೌಲ್ ಮತ್ತು ಅತ್ರಿ ಬ್ಲಾಕ್‌ನ ಮದರ್ದಿಹ್ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಕೊಚ್ಚಿಕೊಂಡು ಹೋಗಿತ್ತು. ಇದಾದ ಬಳಿಕ ಜನರು ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಹೋಗಲು ಮರದ ಸೇತುವೆಯನ್ನೇ ಆಶ್ರಯಿಸಿದ್ದರು. ಸೇತುವೆಯನ್ನು ನಿರ್ಮಿಸಿಕೊಡಿ ಎಂದು ರಾಜಕಾರಣಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ ಮನವಿ ನೀಡಿ ಜನರಿಗೆ ಸಾಕಾಗಿತ್ತು. ಇನ್ನು ಎಷ್ಟು ಸಹಿಸಿಕೊಳ್ಳುವುದು ಎನ್ನುವ ಪ್ರಶ್ನೆಗ ಬಂದಾಗ ಗ್ರಾಮಸ್ಥರೆಲ್ಲ ಸೇರಿ, ತಾವೇ ಚಂದ ಸಂಗ್ರಹಿಸಿ ನಿರ್ಮಾಣ ಕಾಮಗಾರಿಗೆ ಬೇಕಾಗುವ ಸರಕುಗಳನ್ನೆಲ್ಲ ಒಗ್ಗೂಡಿಸಿ,  ತಾವೇ ಕೆಲಸ ಮಾಡಿ ಕೊನೆಗೂ ಸೇತುವೆ ನಿರ್ಮಿಸಿದ್ದಾರೆ.


ಇನ್ನೂ ಸೇತುವೆ ನಿರ್ಮಾಣದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಗ್ರಾಮಸ್ಥರು, 1992ರಿಂದ ಬಾಕಿ ಇದ್ದ ಸೇತುವೆಯನ್ನು ಸರ್ಕಾರ ನಿರ್ಮಾಣ ಮಾಡಿಕೊಡಲೇ ಇಲ್ಲ. ನಮ್ಮ ಊರಿನ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಮೂವರು ನದಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕಾಳಿ ನದಿಯನ್ನು ದಾಡುವುದೆಂದರೆ ಪ್ರಾಣವನ್ನು ಅಂಗೈಯಲ್ಲಿ ಹಿಡಿದುಕೊಂಡು ದಾಟುತ್ತಿದ್ದೆವು. ಇದೀಗ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.


Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]