
ಬೆಂಗಳೂರು (13.01.2021) : ಬಿಬಿಎಂಪಿ ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದೆ.
ಬೆಂಗಳೂರಿನ ರಸ್ತೆಯ ಮೇಲ್ಭಾಗದಲ್ಲಿ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ದೊಡ್ಡದಾಗಿ ಕಾಣುವಂತೆ ರಸ್ತೆಯ ಹೆಸರುಗಳನ್ನು ಬರೆಸಲು ಯೋಜನೆ ರೂಪಿಸಿದೆ. ಕೆಂಪೇಗೌಡ ರಸ್ತೆ, ಜಯಚಾಮರಾಜೇಂದ್ರ ರಸ್ತೆ, ಮಹಾತ್ಮಾ ಗಾಂಧಿ ರಸ್ತೆ, ಡಾ. ರಾಜ್ ಕುಮಾರ್ ರಸ್ತೆ, ಅಂಬೇಡ್ಕರ್ ವೀಧಿ ಸೇರಿದಂತೆ ನಗರದ ಮೊದಲಾದ ರಸ್ತೆಗಳಿಗೆ ಮಹಾನ್ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಹೆಸರುಗಳನ್ನು ರಸ್ತೆ ಮೇಲೆ ಬರೆಯುವುದರಿಂದ ಅವರ ಗೌರವಕ್ಕೆ ಧಕ್ಕೆಯುಂಟಾಗುತ್ತದೆ ಎನ್ನುವ ಆಕ್ಷೇಪ ಕೂಡ ವ್ಯಕ್ತವಾಗಿವೆ.
ಈ ಹಿಂದೆ ರಸ್ತೆಯ ಮೇಲೆ ರಸ್ತೆಯ ಹೆಸರು ಬರೆಯುವ ಕುರಿತು ಈ ಹಿಂದಿನ ಕಾರ್ಯದರ್ಶಿ ವಿಜಯಭಾಸ್ಕರ್ ಸಲಹೆ ನೀಡಿದ್ದರು. ಈ ಹಿನ್ನೆಲೆ ನಗರದ 1400 ಕಿ.ಮೀ ಉದ್ದದ 470 ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳ ಮೇಲೆ ಹೆಸರು ಬರೆಸುವುದಕ್ಕೆ ಸಿದ್ಧತೆ ನಡೆಸಲಾಗಿದೆ.
ಎಲ್ಲೆಲ್ಲಿ ವೈಟ್ ಟಾಪಿಂಗ್ ನಡೆದಿದೆಯೇ ಅಲ್ಲಿ ಮೊದಲ ಹಂತದಲ್ಲಿ ಹೆಸರು ಬರೆಯುವ ಕೆಲಸ ಆರಂಭವಾಗಲಿದೆ.ರಸ್ತೆಗಳ ಹೆಸರು ಏನು ಇದೆಯೋ ಅದೇ ಹೆಸರನ್ನು ರಸ್ತೆಯ ಮೇಲೆ ಬರೆಯಲಾಗುತ್ತದೆ. ಯಾವುದೇ ರೀತಿಯ ಆಕ್ಷೇಪ ವ್ಯಕ್ತವಾಗುವುದಿಲ್ಲ ಎಂದು ತಿಳಿಸಿದಿದ್ದೇನೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿ ಹೇಳಿದ್ದಾರೆ.