Sunday, September 19 , 2021
ಜಯಂತಿ ಕುರಿತು ಮಾಜಿ ಸೊಸೆ ಅನುಪ್ರಭಾಕರ್ ಭಾವುಕ ನುಡಿ

ಬೆಂಗಳೂರು (26.07.2021) : ಅಭಿನಯ ಶಾರದೆ ಅಗಲಿಕೆಗೆ ಚಿತ್ರರಂಗದ ಗಣ್ಯರು ಮತ್ತು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಜಯಂತಿ ಅವರ ಮಾಜಿ ಸೊಸೆ ಹಾಗೂ ನಟಿ ಅನುಪ್ರಭಾಕರ್​ ಕೂಡ ಭಾವುಕವಾಗಿ ಟ್ವೀಟ್ವೊಂದನ್ನು ​ ಮಾಡಿದ್ದಾರೆ.

ನಿಮ್ಮ ಜೊತೆ ಕಳೆದಂತ ಪ್ರತಿ ಕ್ಷಣ ಸದಾ ನನ್ನ ಮನಸು ಹಾಗು ಹೃದಯದಲ್ಲಿ ಇರುತ್ತದೆ Mom. ನಿಮ್ಮಿಂದ ಕಲಿತ ಜೀವನದ ಪಾಠಗಳು ನಾನು ಎಂದು ಮರೆಯೋದಿಲ್ಲ. ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಆ ವಿಷಯದ ಬಗ್ಗೆ ಎಷ್ಟೋ ಸಾರಿ ನನ್ನ ಹತ್ತಿರ ಮಾತಾಡಿದ್ರಿ..ಅಮ್ಮಮ್ಮ ಜೊತೆ ನೆಮ್ಮದಿಯಿಂದ ಇರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಅನುಪ್ರಭಾಕರ್​ ಟ್ವೀಟ್​ ಮಾಡಿದ್ದಾರೆ.

ಜಯಂತಿ ಅವರ ಪುತ್ರ ಕೃಷ್ಣ ಪ್ರಸಾದ್​ ಜತೆ ಮದುವೆ ಆಗಿದ್ದ ಅನುಪ್ರಭಾಕರ್​ ಬಳಿಕ ವಿಚ್ಛೇದನ ಪಡೆದ ನಟ ರಘುಮುಖರ್ಜಿ ಅವರನ್ನು ವರಿಸಿದರು.

ಇನ್ನು ಜಗ್ಗೇಶ್​ ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದು, ನನ್ನ ಬಾಲ್ಯದಿಂದ ನಾನು ತುಂಬ ಇಷ್ಟಪಟ್ಟ ನಟಿಯರು ಭಾರತಿ ಅಮ್ಮ ಹಾಗೂ ಜಯಂತಿ ಅಮ್ಮ. ಭಾರತಿ ಅಮ್ಮನ ಜೊತೆ ನಟಿಸಲು ನನಗೆ ಅವಕಾಶ ಸಿಗಲಿಲ್ಲಾ ಆದರೆ ಜಯಂತಿ ಅಮ್ಮನ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ ಸಮಾಧಾನ ಸಂತೋಷ ನನ್ನ ಕಲಾಬದುಕಿಗಿದೆ ಎಂದಿದ್ದಾರೆ.

ಅವರಿಗೆ ನಾನು ರೇಗಿಸಿದೆ, ಜಯಮ್ಮ ದೊರದ ಬೆಟ್ಟ ಚಿತ್ರದಲ್ಲಿ ನಿಮ್ಮ ನೋಡಿ ಈಗ ಅನ್ನಿಸುತ್ತದೆ, ಅಯ್ಯೋ ದೇವರೆ ನಾನು ಇಂದು ನಾಯಕ ನಟ ಆಗುವ ಬದಲು ದೂರದ ಬೆಟ್ಟದ ಸಮಯ ಆಗಿದ್ದರೆ ಎಂಥ ಅದ್ಭುತ ಇರುತ್ತಿತ್ತು ಎಂದಾಗ, ನಾಚಿ ನೀರಾಗಿದ್ದರು ಹಾಗೂ ಕೋಲು ಹಿಡಿದು ಅಟ್ಟಾಡಿಸಿ ನಕ್ಕು, ಆನಂದಿಸಿ you are my favorite actor ಎಂದು ಮುತ್ತಿಕ್ಕಿದ್ದರು ಎಂದು ಸ್ಮರಿಸಿದರು .

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]