Monday, July 26 , 2021
ಒಂದು ರೂ. ಪರಿಹಾರ ಕೋರಿ ಶಿವರಾಂ ಹೆಬ್ಬಾರ್‌ ವಿರುದ್ಧ ಕೇಸ್ ಹಾಕಿದ ಚೇತನ್!

ಬೆಂಗಳೂರು (29.06.2021)  : ಕಾರ್ಮಿಕ ಸಚಿವ ಅರೆಬೈಲ್‌ ಶಿವರಾಂ ಹೆಬ್ಬಾರ್‌ವಿರುದ್ಧ ನಟ ಚೇತನ್‌ ಕುಮಾರ್‌ ಪ್ರಕರಣ ಮಾನನಷ್ಟ ಪ್ರಕರಣ ದಾಖಲು ಮಾಡಿದ್ದಾರೆ. ಪರಿಹಾರ ರೂಪದಲ್ಲಿ 1 ರುಪಾಯಿ ಕೇಳಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕೋರಿದ್ದಾರೆ.

ಈ ಪ್ರಕರಣ ಸಂಬಂಧ ಪ್ರತಿವಾದಿ ಹೆಬ್ಬಾರ್‌ ಅವರಿಗೆ ನೋಟಿಸ್ ನೀಡಿದ್ದು, ಜುಲೈ 14ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.  ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯವನ್ನು ಟೀಕಿಸುವ ಟ್ವೀಟ್‌ ಮಾಡಿದ್ದ ನಟ ಚೇತನ್ ಅಹಿಂಸಾರ ಟ್ವೀಟ್ ಗೆ ಪ್ರತಿಯಾಗಿ ಜೂನ್ 11ರಂದು ಸಚಿವ ಶಿವರಾಂ ಹೆಬ್ಬಾರ್ ಅವರು ಸರಣಿ ಟ್ವೀಟ್ ಮಾಡಿ, ಸಮಾಜ ವಿರೋಧಿ, ಹಣಕ್ಕಾಗಿ ಪ್ರಚಾರ ಬಯಸುವ ವ್ಯಕ್ತಿ, ಕೂಡಲೇ ಚೇತನ್ ಬಂಧನವಾಗಬೇಕು ಎಂಬರ್ಥದಲ್ಲಿ ಹೇಳಿದ್ದರು. ಈ ಟ್ವೀಟ್ ಆಧಾರವಾಗಿಟ್ಟುಕೊಂಡು ”ಮಂಜು ಅಂಡ್‌ ಮಂಜು ಅಸೋಸಿಯೇಟ್ಸ್‌” ನ್ಯಾಯವಾದಿ ಸಂಸ್ಥೆ ಮೂಲಕ ಚೇತನ್‌ ಮೊಕದ್ದಮೆ ಹೂಡಿದ್ದಾರೆ.

ನಟ ಚೇತನ್‌ ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಂನಲ್ಲಿ ನೀಡಿರುವ ಹೇಳಿಕೆಗಳು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ, ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿರುವ ವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್‌ ಕುಮಾರ್‌ ಶರ್ಮಾ,  ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಐಪಿಸಿ ಸೆಕ್ಷನ್ 153 ಬಿ ಮತ್ತು 295 ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಪೊಲೀಸರು ಚೇತನ್‌ ವಿರುದ್ಧ ಪ್ರಕರಣ ದಾಖಲಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]