Saturday, October 17 , 2020
ಎಬಿಡಿ ಅಬ್ಬರಕ್ಕೆ ರಾಜಸ್ಥಾನ್​ ತತ್ತರ: ಆರ್​ಸಿಬಿಗೆ 7 ವಿಕೆಟ್​ಗಳ ಭರ್ಜರಿ ಜಯ

ದುಬೈ(17.10.2020): ವಿಲಿಯರ್ಸ್​ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಆರ್​ಸಿಬಿ 7 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ರಾಜಸ್ಥಾನ್​ ರಾಯಲ್ಸ್ ನೀಡಿದ 178 ರನ್​ಗಳ ಗುರಿಯನ್ನ ಬೆನ್ನತ್ತಿದ ಬೆಂಗಳೂರು ತಂಡ ಎಬಿ ಡಿ ವಿಲಿಯರ್ಸ್ ಅವರ ನಿರ್ಣಾಯಕ ಅರ್ಧಶತಕ(55) ಹಾಗೂ ನಾಯಕ ಕೊಹ್ಲಿ ಅವರ 43 ರನ್​ಗಳ ನೆರವಿನಿಂದ ಇನ್ನು 2 ಎಸೆತಗಳು ಉಳಿದಿರುವಂತೆ 3 ವಿಕೆಟ್ ಕಳೆದುಕೊಂಡು ತಲುಪಿತು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೊಹ್ಲಿ ಬಳಗ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು, ಆಸೀಸ್ ದಾಂಡಿಗ ಆ್ಯರೋನ್ ಫಿಂಚ್​ ಕೇವಲ 14 ರನ್​ಗಳಿಸಿ ಗೋಪಾಲ್​ಗೆ ವಿಕೆಟ್​ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್ ನಾಯಕ ಕೊಹ್ಲಿ ಜೊತೆ 79 ರನ್​ಗಳ ಜೊತೆಯಾಟ ನಡೆಸಿದರಾದರೂ ನಿಧಾನಗತಿ ಆಟ ಪ್ರದರ್ಶಿಸಿದರು. ಒತ್ತಡದಿಂದ ಬ್ಯಾಟ್​ ಬೀಸಿದ ಯುವ ಬ್ಯಾಟ್ಸ್​ಮನ್​ 37 ಎಸೆತಗಳಲ್ಲಿ ಕೇವಲ 2 ಬೌಂಡರಿ ಸಹಿತ 35 ರನ್​ಗಳಿಸಿ ಔಟಾದರು. ನಂತರದ ಎಸೆತದಲ್ಲೇ ಕೊಹ್ಲಿ ಕೂಡ 43 ರನ್​ಗಳಿಸಿ ಯುವ ಬೌಲರ್​ ತ್ಯಾಗಿಗೆ ವಿಕೆಟ್ ಒಪ್ಪಿಸಿದರು.



13.1 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 102 ರನ್​ಗಳಿಸಿ ಬೆಂಗಳೂರು ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಕ್ರೀಸ್ ಆಗತಾನೆ ಗುರ್ಕಿರಾತ್​ ರನ್​ಗಳಿಸಲು ಪರದಾಡಿದರು. ಆದರೆ ಎಬಿಡಿ ಕೆಲವು ಕೆಟ್ಟ ಎಸೆತಗಳನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ರನ್​ಗತಿ ಕಾಪಾಡಿಕೊಳ್ಳುತ್ತಿದ್ದರು. ಆದರೂ ಕೊನೆಯ 18 ಎಸೆತಗಳಲ್ಲಿ ಗೆಲ್ಲಲು 35 ರನ್​ಗಳ ಅಗತ್ಯವಿತ್ತು. ಉನ್ನಾದ್ಕಟ್ ಎಸೆದ ಆ ಓವರ್​ನಲ್ಲಿ ಎಬಿಡಿ 3 ಸಿಕ್ಸರ್​ ಸಿಡಿಸಿದರೆ, ಗುರುಕಿರಾತ್ ಒಂದು ಬೌಂಡರಿ ಬಾರಿಸುವ ಮೂಲಕ 25 ರನ್​ ಸೂರೆಗೈದರು. 12 ಎಸೆತಗಳಲ್ಲಿ 35 ಇದ್ದ ಪಂದ್ಯದ ಗತಿ ಕೊನೆ ಓವರ್​ಗೆ 10 ರನ್​ಗಳಿಗೆ ಬಂದು ನಿಂತಿತು. ಆರ್ಚರ್​ ಎಸೆದ 20 ಓವರ್​ನಲ್ಲಿ ಎಬಿಡಿ ಮತ್ತು ಗುರುಕಿರಾರ್​ 4 ಎಸೆತಗಳಲ್ಲಿ 10 ರನ್​ಗಳಿಸಿ ತಂಡಕ್ಕೆ 7 ವಿಕೆಟ್​ಗಳ ಜಯ ತಂದುಕೊಟ್ಟರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ವಿಲಿಯರ್ಸ್ ಕೇವಲ 22 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 55 ರನ್​ಗಳಿಸಿದರೆ, ಗುರ್ಕಿರಾತ್ ಸಿಂಗ್ ಮನ್ ಔಟಾಗದೆ 19 ರನ್​ಗಳಿಸಿದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]