Sunday, September 19 , 2021
ತಮ್ಮನ ಕಣ್ಣೆದುರೇ ನದಿಗೆ ಹಾರಿದ ಅಣ್ಣ

ಕೊಳ್ಳೇಗಾಲ (25.07.2021)   : ತಮ್ಮನ ಕಣ್ಣೆದುರೇ ಅಣ್ಣ  ನದಿಗೆ ಹಾರಿರುವ ದಾರುಣ ಘಟನೆ ತಾಲ್ಲೂಕಿನ ತಾಲ್ಲೂಕಿನ ದಾಸನಪುರ ಗ್ರಾಮದಲ್ಲಿ  ಜರುಗಿದೆ.  ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಕುರುಬಾರ ಹುಂಡಿ ಗ್ರಾಮದ ಬಸವರಾಜ ಆರಾಧ್ಯ (31) ಸಾವಿಗೀಡಾದವರು.

ದಾಸನಪುರ ಗ್ರಾಮದಲ್ಲಿರುವ ಸೇತುವೆಯಿಂದ ಏಕಾಏಕಿ ನದಿಗೆ ಹಾರಿದ್ದಾರೆ.  ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ನುರಿತ ಈಜುಗಾರರು ಮೂರು ಗಂಟೆಗೂ ಹೆಚ್ಚು ಕಾಲ ನದಿಯಲ್ಲಿ ಹುಡುಕಾಟ ನಡೆಸಿದ್ದು, ಬಸವರಾಜ ಅವರು ಪತ್ತೆಯಾಗಿಲ್ಲ.

ಬಸವರಾಜ ಅವರು ಎರಡು ಮೂರು ಬಾರಿ ಬೈಕ್‍ನಲ್ಲಿ ಅಪಘಾತವಾಗಿತ್ತು. ಆ ಕಾರಣ ವೈದ್ಯರ ಸಲಹೆಯಂತೆ ಪಿಸಿಯೋಥೆರಪಿ ಮಾಡಿಸಿಕೊಳ್ಳಲು ಕೊಳ್ಳೇಗಾಲಕ್ಕೆ ತಮ್ಮ ವಿವೇಕ್ ಆರಾಧ್ಯರ ಜೊತೆ ನಿತ್ಯವೂ ಬರುತ್ತಿದ್ದರು. ಶನಿವಾರ ದಾಸನಪುರ ಗ್ರಾಮದ ಸೇತುವೆ ಮೇಲೆ ಬೈಕ್‍ನಲ್ಲಿ ಬರುತ್ತಿದ್ದ ವೇಳೆ, ಬಸವರಾಜ ಅವರು ‘ವಾಂತಿ ಬರುತ್ತಿದೆ. ಬೈಕ್ ನಿಲ್ಲಿಸು’ ಎಂದು ತಮ್ಮನಿಗೆ ಹೇಳಿದ್ದಾರೆ. ಆಗ ಇದ್ದಕ್ಕಿದಂತೆ ಬಸವರಾಜ ಆರಾಧ್ಯ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]