Wednesday, June 23 , 2021
ಪಾಪಿ ಕೊರೊನಾ: ಕೊರೊನಾ ಸೋಂಕಿತೆ ಹೆಂಡತಿಯನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಮುಂದಾದ ಪತಿ

ವಿಜಯವಾಡ (08.05.2021) : ಕೊರೊನಾ ಸೋಂಕಿತ ಪತ್ನಿಯನ್ನು ಪತಿ ಕೊಲೆ ಮಾಡಿರುವ ಅಮಾನವೀಯ ಘಟನೆ ನೆಲ್ಲೂರು ಜಿಲ್ಲೆಯ ಕಾವಲಿಯಲ್ಲಿ ಜರುಗಿದೆ.

ಆರೋಪಿ ಪತಿ ಮಲ್ಯಾದ್ರಿ ತನ್ನ ಪತ್ನಿಯೊಂದಿಗೆ ಕಾವಲಿ ಪೊಲೀಸ್​ ಠಾಣೆ ಬಳಿಯ ವಯನಂದನಾ ಪ್ರೆಸ್​ ರಸ್ತೆಯಲ್ಲಿ ಸಣ್ಣ ಹೋಟೆಲ್​ ತೆರೆದು ಜೀವನ ಮಾಡುತ್ತಿದ್ದರು. ಕಳೆದ 10 ದಿನಗಳ ಹಿಂದೆ ಮಲ್ಯಾದ್ರಿ ಹಾಗೂ ಆತನ ಪತ್ನಿ ಅನುರಾಧಗೆ ಕೊರೊನಾ ಸೋಂಕು ತಗುಲಿತ್ತು. ಇಬ್ಬರು ಸಹ 10 ದಿನಗಳ ಕಾಲ ಪ್ರತ್ಯೇಕವಾಗಿದ್ದರು. ಆದಾಗ್ಯು ಅನುರಾಧ ಆರೋಗ್ಯ ಸ್ಥಿತಿ ಹದಗೆಡಲು ಆರಂಭಿಸಿ ಉಸಿರಾಡಲು ತೊಂದರೆ ಶರುವಾಗಿತ್ತು. ಇದಾದ ಬಳಿಕ ಮಲಗಿರುವ ಸಮಯದಲ್ಲಿ ಪತ್ನಿಯ ಕೈ ಕುಯ್ದಿದ್ದಾನೆ. ಮೊದಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅನುರಾಧನ ಆರೋಗ್ಯ ಸ್ಥಿತಿ ತೀವ್ರ ರಕ್ತಸ್ರಾವದಿಂದ ಮತ್ತಷ್ಟು ಹದಗೆಡತೊಡಗಿತು. ಕೊನೆಗೆ ಆಕೆ ಮರಣ ಹೊಂದಿದ್ದಾಳೆ.

ಈ ಬಗ್ಗೆ ಪೊಲೀಸ್​ ವಿಚಾರಣೆ ವೇಳೆ ಮಾತನಾಡಿರುವ ಮಲ್ಯಾದ್ರಿ, ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೆವು. ಮೊದಲು ಪತ್ನಿ ಕೈ ಕುಯ್ದುಕೊಂಡಳು. ಬಳಿಕ ನಾನು ವಿಷ ಕುಡಿಯಲು ಮುಂದಾದೆ. ಆದರೆ, ಧೈರ್ಯ ಸಾಕಾಗಲಿಲ್ಲ ಎಂದಿದ್ದಾನೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]