Monday, July 26 , 2021
ಕೊರೊನಾಗೆ ಹೆದರಿ 1ವರ್ಷಕ್ಕೂ ಹೆಚ್ಚು ಮನೆಯಿಂದ ಹೊರಬಾರದ ಕುಟುಂಬ..!

ಆಂಧ್ರಪ್ರದೇಶ(22.07.2021) : ಕೊರೊನಾ ತಗಲುತ್ತದೆ ಎಂಬ ಭಯದಲ್ಲಿ ಕುಟುಂಬವೊಂದು 15 ತಿಂಗಳುಗಳ ಕಾಲ ಪ್ರತ್ಯೇಕ ಟೆಂಟ್​ನಲ್ಲೇ ವಾಸವಾಗಿದ್ದು, ಈ ಕುಟುಂಬವನ್ನ ಬುಧವಾರ ಪೊಲೀಸರು ಕೊನೆಗೂ ರಕ್ಷಿಸಿದ್ದಾರೆ.

ಆಂದ್ರ ಪ್ರದೇಶದ ಕಡಾಲಿ ಎಂಬ ಗ್ರಾಮದಲ್ಲಿ ಈ ಘಟನೆ ಜರಗಿದೆ. ಈ ವೇಳೆ ವಿಚಾರಿಸಿದಾಗ, ಕೊರೊನಾ ವೈರಸ್​ ತಗಲುತ್ತೆ ಎಂಬ ಭಯದ ಹಿನ್ನೆಲೆಯಲ್ಲಿ ತಾವು ಈ ರೀತಿ ವಾಸವಿದ್ದಿದ್ದಾಗಿ ಹೇಳಿಕೊಂಡಿದೆ.

ಕಡಲಿ ಗ್ರಾಮದ ಸರಪಂಚ್​ ಚೊಪ್ಪಲ ಗುರುನಾಥ್​ ನೀಡಿರುವ ಮಾಹಿತಿಯ ಪ್ರಕಾರ 50 ವರ್ಷದ ರತ್ನಮಾಲಾ, 32 ವರ್ಷದ ಕಾಂತಾಮಣಿ ಹಾಗೂ 30 ವರ್ಷದ ರಾಣಿ ಎಂಬವರು 15 ತಿಂಗಳ ಹಿಂದೆ ಟೆಂಟ್​ ಒಂದರಲ್ಲಿ ತಮ್ಮನ್ನ ತಾವು ಲಾಕ್​ ಮಾಡಿಕೊಂಡಿದ್ದರು. 15 ತಿಂಗಳ ಹಿಂದೆ ಇವರ ನೆರೆಮನೆಯವರು ಕೋವಿಡ್​ 19ನಿಂದ ಮೃತರಾದ ಹಿನ್ನೆಲೆ ಈ ಕುಟುಂಬ ಕಠಿಣ ನಿರ್ಧಾರ ಕೈಗೊಂಡಿತ್ತು.

ಇನ್ನು ಈ ವಿಚಾರವಾಗಿ ಮಾತನಾಡಿದ ಸರಪಂಚ್​ ಗುರುನಾಥ್​, ಚುಟ್ಟುಗಲ್ಲಾ ಬೆನ್ನಿ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಈ ಮನೆಯಲ್ಲಿ ವಾಸವಿದ್ದಾರೆ. ಕೊರೊನಾದಿಂದ ಹೆದರಿಕೊಂಡು ಕಳೆದ 15 ತಿಂಗಳಿನಿಂದ ಇವರು ಮನೆಬಿಟ್ಟು ಆಚೆಯೇ ಬಂದಿಲ್ಲ. ಆಶಾ ಕಾರ್ಯಕರ್ತೆಯೊಬ್ಬರು ಇವರ ಮನೆಗೆ ಭೇಟಿ ನೀಡಿದ್ದ ವೇಳೆ ಯಾರೂ ಪ್ರತಿಕ್ರಿಯೆ ನೀಡದ್ದನ್ನ ಗಮನಿಸಿ ನಮಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಅವರ ಸಂಬಂಧಿಗಳು ಈ ಮನೆಯಲ್ಲಿ ಮೂವರು ತಮ್ಮನ್ನ ತಾವು ಲಾಕ್​ ಮಾಡಿಕೊಂಡಿದ್ದು ಮೂವರ ಆರೋಗ್ಯ ಸ್ಥಿತಿಯು ಹದಗೆಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಈ ಎಲ್ಲಾ ವಿಚಾರಗಳು ನಮಗೆ ತಿಳಿಯುತ್ತಿದ್ದಂತೆ ನಾವು ಆ ಸ್ಥಳಕ್ಕೆ ಭೇಟಿ ನೀಡಿದ್ದು ಮಾತ್ರವಲ್ಲದೇ ಪೊಲೀಸರಿಗೂ ಮಾಹಿತಿ ನೀಡಿದೆವು. ಪೊಲೀಸರು ಮನೆಯ ಸದಸ್ಯರನ್ನ ಹೊರಗೆ ಕರೆಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]