Wednesday, June 23 , 2021
ಬೆಂಗಳೂರು: ಜ್ಯೋತಿಷಿ ಆ ಮಾತು ಹೇಳಿದ್ದೇ ತಡ ತಂದೆ ತಾಯಿಯನ್ನೇ ಕೊಂದುಬಿಟ್ಟ ಬಾಲಕ !

ಬೆಂಗಳೂರು (08.05.2021) : ಪಾಪಿ ಜ್ಯೋತಿಷಿಯೋರ್ವನ ಮಾತು ನಂಬಿ ದಡ್ಡ ಮಗನೋರ್ವ ತನ್ನ ಹೆತ್ತವರನ್ನೇ ಬಲಿ ಕೊಟ್ಟಿದ್ದಾನೆ.

ನಿನಗೆ ಪಿತೃದೋಷವಿದೆ ಎಂದು ಬಾಲಕನೊಬ್ಬನಿಗೆ ಜೋತಿಷಿಯೊಬ್ಬ ಭವಿಷ್ಯ ನುಡಿದಿದ್ದ ನಿನ್ನ ತಂದೆ-ತಾಯಿ ಇರುವವರೆಗೂ ನಿನಗೆ ಒಳ್ಳೆಯ ಕಾಲವಿಲ್ಲ ಎಂದು ಉಪದೇಶ ಮಾಡಿದ್ದ ಡೋಂಗಿ ಜೋತಿಷಿ ಮಾತು ಕೇಳಿದ 14 ವರ್ಷದ ಬಾಲಕ ಈ ಕೃತ್ಯ ಎಸಗಿದ್ದಾನೆ.

ಪೀಣ್ಯದ ಕರಿಹೋಬನಹಳ್ಳಿಯ ಕೆಎಎಸ್ ಅಧಿಕಾರಿ ಕಚೇರಿಯಲ್ಲಿನ ಸೆಕ್ಯುರಿಟಿ ದಂಪತಿಯೇ ಈ ಜ್ಯೋತಿಷಿಯ ಮೌಢ್ಯಕ್ಕೆ ಬಲಿಯಾದವರು.
ಜ್ಯೋತಿಷಿಯ ಮಾತು ಕೇಳಿದ ಯುವಕ ತನಗೆ ಒಳ್ಳೆಯ ಕಾಲ ಬರಬೇಕು ಎಂದರೆ ತಂದೆ-ತಾಯಿಯನ್ನು ಮುಗಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಇದೇ ಕಾರಣಕ್ಕೆ ಅಪ್ಪ- ಅಮ್ಮನ ತಲೆ ಮೇಲೆ ಕಲ್ಲು ಎತ್ತಿಹಾಕಿ, ಭೀಕರವಾಗಿ ಕೊಲೆ ಮಾಡಿದ್ದಾನೆ. ಪ್ರಕರಣ ಸಂಬಂಧ ಮಗನ ಮೇಲೆಯೇ ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಜ್ಯೋತಿಷಿಯನ್ನು ಬಂಧಿಸಿರುವ ಪೀಣ್ಯ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]