Sunday, September 19 , 2021
ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆಯಿಂದ 900 ಕೋಟಿ ರೂ. ತೆರಿಗೆ ವಂಚನೆ

ನವದೆಹಲಿ  (25.07.2021) : ದೈನಿಕ ಭಾಸ್ಕರ್ ಆರು ವರ್ಷಗಳಿಂದ ಸುಮಾರು 900 ಕೋಟಿ ರೂ. ಮೊತ್ತದ ತೆರಿಗೆಯನ್ನು ಪಾವತಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ದೈನಿಕ್ ಭಾಸ್ಕರ್ ಕಚೇರಿ ಹಾಗೂ ಮಾಲೀಕರ ಮನೆ ಶೋಧ ಶೋಧ ಕಾರ್ಯಾಚರಣೆ ವೇಳೆಯಲ್ಲಿ ದೈನಿಕ್ ಭಾಸ್ಕರ್ ಅನೇಕ ಕಂಪನಿಗಳನ್ನು ಅವರ ಉದ್ಯೋಗಿಗಳ ಹೆಸರಿನಲ್ಲಿ ನಡೆಸುತ್ತಿದೆ. ಉದ್ಯೋಗಿಗಳ ಹೆಸರನ್ನು ನಕಲಿ ವೆಚ್ಚ ತೋರಿಸಲು ಬಳಸಲಾಗುತಿತ್ತು. ಅನೇಕ ಸಿಬ್ಬಂದಿಗಳ ಹೆಸರನ್ನು ಪಾಲುದಾರರು ಮತ್ತು ನಿರ್ದೇಶಕರಾಗಿ ಉಪಯೋಗಿಸಲಾಗಿದೆ.ಅಂತಹ ಕಂಪನಿಗಳ ಬಗ್ಗೆ ಅರಿವಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಐಟಿ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.

ಉತ್ತಮ ನಂಬಿಕೆಯಿಂದ ತಮ್ಮ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಸಹಿಯನ್ನು ಉದ್ಯೋಗದಾತರಿಗೆನೀಡಿದ್ದರು.ಅವರಲ್ಲಿ ಕೆಲವರು ಸಂಬಂಧಿಕರಿದ್ದಾರೆ. ಅವರು ಸ್ವಇಚ್ಚೆಯಿಂದ ಮತ್ತು ಉದ್ದೇಶಪೂರ್ವಕವಾಗಿ ಪತ್ರಿಕೆಗಳಿಗೆ ಸಹಿ ಹಾಕಿದ್ದರು. ಆದರೆ, ಕಂಪೆನಿಗಳ ವ್ಯವಹಾರ ಚಟುವಟಿಕೆಗಳ ಬಗ್ಗೆ ಯಾವುದೇ ಜ್ಞಾನ ಅಥವಾ ನಿಯಂತ್ರಣವನ್ನು ಹೊಂದಿರಲಿಲ್ಲ ಎಂದು ಐಟಿ ಮಾಹಿತಿ ನೀಡಿದೆ.

ಈವರೆಗೂ ಸುಮಾರು 900 ಕೋಟಿ ರೂ. ಮೊತ್ತದ ತೆರಿಗೆ ವಂಚನೆಯನ್ನು ದೈನಿಕ್ ಭಾಸ್ಕರ್ ಮಾಡಿದೆ.  ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಬೆಳಕಿಗೆ ಬಾರದ ಹಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]