Friday, December 4 , 2020
1,300 ವರ್ಷಗಳ ಹಿಂದೆ ಕಟ್ಟಿದ್ದ ವಿಷ್ಣು ದೇವಸ್ಥಾನ ಪಾಕಿಸ್ತಾನದಲ್ಲಿ ಪತ್ತೆ!

ಇಸ್ಲಾಮಾಬಾದ್ (21-11-2020)​: ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತವೊಂದರಲ್ಲಿ 1,300 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಹಿಂದೂ ದೇವಾಲಯವನ್ನು ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಪತ್ತೆ ಹಚ್ಚಿದ್ದಾರೆ. ಬಾರಿಕೋಟ್ ಗುಂಡೈನಲ್ಲಿ ನಡೆದ ಉತ್ಖನನದ ವೇಳೆ ಈ ದೇಗುಲ ಕಂಡುಬಂದಿದೆ.

ಖೈಬರ್ ಪಖ್ತುಂಖ್ವಾ ಪುರಾತತ್ವ ಇಲಾಖೆಯ ಫಝಲ್ ಖಾಲಿಕ್ ಮಾತನಾಡಿ, ಈ ದೇವಾಲಯವು ವಿಷ್ಣು ದೇವರಿಗೆ ಸಮರ್ಪಿತವಾಗಿತ್ತು. ಸುಮಾರು 1,300 ವರ್ಷಗಳ ಹಿಂದೆ ಹಿಂದೂ ಶಾಹಿ ಕಾಲದಲ್ಲಿ ಹಿಂದೂಗಳು ಇದನ್ನು ನಿರ್ಮಿಸಿದ್ದರು ಎಂದು ಹೇಳಿದರು.

ಹಿಂದೂ ಶಾಹಿಗಳು ಅಥವಾ ಕಾಬುಲ್ ಷಾಹಿಗಳು ಕಾಬೂಲ್ ಕಣಿವೆ (ಪೂರ್ವ ಆಫ್ಘಾನಿಸ್ತಾನ), ಗಾಂಧಾರ (ಇಂದಿನ ಪಾಕಿಸ್ತಾನ) ಮತ್ತು ಈಗಿನ ವಾಯವ್ಯ ಭಾರತವನ್ನು ಆಳಿದ ಒಂದು ಹಿಂದೂ ರಾಜವಂಶವಾಗಿತ್ತು. ಉತ್ಖನನದ ವೇಳೆ ಪುರಾತತ್ವ ಶಾಸ್ತ್ರಜ್ಞರು ದೇವಾಲಯದ ಸ್ಥಳದ ಬಳಿ ಕಂಟೋನ್​ಮೆಂಟ್ ಮತ್ತು ಕಾವಲು ಗೋಪುರಗಳ ಕುರುಹುಗಳನ್ನು ಸಹ ಪತ್ತೆ ಹಚ್ಚಿದರು.

ಹಿಂದೂಗಳು ಪೂಜೆಗೂ ಮುನ್ನ ಸ್ನಾನ ಮಾಡಲು ಬಳಸುತ್ತಿದ್ದರು ನೀರಿನ ಟ್ಯಾಂಕ್ ಕೂಡ ದೇವಸ್ಥಾನ ಬಳಿ ಇವೆ. ಸ್ವಾತ್ ಜಿಲ್ಲೆ ಸಾವಿರ ವರ್ಷಗಳಷ್ಟು ಪುರಾತನ ಪುರಾತತ್ವ ನೆಲೆಗಳನ್ನು ಹೊಂದಿದೆ. ಈ ಪ್ರದೇಶದಲ್ಲಿ ಮೊದಲ ಬಾರಿಗೆ ಹಿಂದೂ ಶಾಹಿ ಕಾಲದ ಕುರುಹುಗಳು ಪತ್ತೆಯಾಗಿವೆ ಎಂದು ಖಾಲಿಕ್ ಹೇಳಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]