
ಬೆಂಗಳೂರು (09.01.2021) : ಬಹು ಕಾತುರದ ಚಿತ್ರ ಕೆಜಿಎಫ್ ಚಾಪ್ಟರ್-2 ನ ಟೀಸರ್ ವಿಶ್ವದಾಖಲೆ ಬರೆದಿದೆ.
ಕೆಜಿಎಫ್ ಚಾಪ್ಟರ್-2 ನ ಟೀಸರ್ ವಿಶ್ವ ದಾಖಲೆಯೊಂದಿಗೆ ಈವರೆಗೆ 100 ಮಿಲಿಯನ್ ವೀಕ್ಷಣೆ ಯಾಗಿದೆ. ಈ ಹಿನ್ನೆಲೆ ಯಶ್ ಮುಂದಿನ ದಿನಗಳಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗುತ್ತಾರೆ ಎಂಬ ಗುಸು ಗುಸು ಸುದ್ದಿ ಹರಿದಾಡುತ್ತಿದೆ.
ಇನ್ನು ರಾಕಿಂಗ್ ಸ್ಟಾರ್ ಅಭಿನಯದಲ್ಲಿ ಮೂಡಿಬರಲಿರುವ ಮುಂದಿನ ಸಿನಿಮಾ ಅವರ ಬ್ಯಾನರ್ ಅಡಿಯಲ್ಲಿಯೇ ನಿರ್ಮಾಣಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.