Wednesday, June 23 , 2021
ಶಾಸಕ ಎನ್ ಮಹೇಶ್ ಹುಟ್ಟು ಹಬ್ಬದ ಪ್ರಯುಕ್ತ ಕೋವಿಡ್ ಸಂತ್ರಸ್ತರಿಗೆ ಊಟ ವಿತರಣೆ

 

ರಾಮನಗರ (02-06-2021): ಮಾಜಿ ಶಿಕ್ಷಣ ಸಚಿವ ಹಾಗೂ ಹಾಲಿ ಕೊಳ್ಳೇಗಾಲದ ಶಾಸಕ ಎನ್ ಮಹೇಶ್ ಹುಟ್ಟು ಹಬ್ಬದ ಪ್ರಯುಕ್ತ ಕನಕಪುರ ಹಾಗೂ ಚನ್ನಪಟ್ಟಣದಲ್ಲಿ ಕೋವಿದ್ ಸಂತ್ರಸ್ತರಿಗೆ ಊಟವನ್ನು ವಿತರಣೆ ಮಾಡಲಾಯಿತು.

ಭಾರತೀಯ ಪರಿವರ್ತನಾ ಸಂಘ- BPS, ಭಾರತೀಯ ವಿಧ್ಯಾರ್ಥಿ ಸಂಘ-BVS, ಅಣ್ಣ ಎನ್ ಮಹೇಶ್ ಅಭಿಮಾನಿ ಬಳಗ ಹಾಗೂ ಅಂಬೇಡ್ಕರ್ ಕ್ರಾಂತಿ ಸೇನೆಯ ಸಹಯೋಗದೊಂದಿಗೆ ಕರೋನಾ ವಾರಿಯರ್ಸ್‌, ಕೋವಿದ್ ಸಂತ್ರಸ್ತರಿಗೆ ಹಾಗೂ ವಸತಿ ರಹಿತರಿಗೆ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕನಕಪುರದಲ್ಲಿ ಸುಮಾರು 600 ಹಾಗೂ ಚನ್ನಪಟ್ಟಣದಲ್ಲಿ ಸುಮಾರು 300 ಜನರಿಗೆ ಊಟ ಹಂಚಲಾಯಿತು.

BVS ನ ಜಿಲ್ಲಾ ಸಂಯೋಜಕರಾದ ಲೋಕೇಶ್ ಮೌರ್ಯ BPS ನ ಜಿಲ್ಲಾ ಮುಖಂಡರಾದ ನವೀನ್ ಕುಮಾರ್ ಹಾಗೂ ಅಂಬೇಡ್ಕರ್ ಕ್ರಾಂತಿ ಸೇನೆಯ ಅಧ್ಯಕ್ಷರಾದ ಬಾಬು ಅವರ ನೇತೃತ್ವದಲ್ಲಿ ಕನಕಪುರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಚನ್ನಪಟ್ಟಣದಲ್ಲಿ BPS ನ ಜಿಲ್ಲಾ ಸಂಯೋಜಕರಾದ ಎಸ್ ಕುಮಾರ್ ಹಾಗೂ BVS ನ ಜಿಲ್ಲಾ ಮುಖಂಡರಾದ ಭರತ್ ಕುಮಾರ್ ಎಸ್ ಇವರ ನೇತೃತ್ವದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ನಟರಾಜ್, ಜೀವನ್ ಸಂದೀಪ್ ಮತ್ತು ವಕೀಲರಾದ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]