Sunday, January 24 , 2021
ವಿಶಿಷ್ಟ ಅನುಭವ ನೀಡುವ ACT-1978 ಚಿತ್ರ

ರಾಷ್ಟ್ರಧ್ವನಿ ಸಿನಿಡೆಸ್ಕ್:  ಸುಮಾರು ಎಂಟರಿಂದ ಒಂಭತ್ತು ತಿಂಗಳ ಲಾಕ್ ಡೌನ್ ವಿರಾಮದ ನಂತರ ಚಿತ್ರಮಂದಿರಗಳು ತೆರೆದಿವೆಯಾದರೂ ಯಾವುದೇ ಹೊಸ ಚಲನಚಿತ್ರಗಳು ತೆರೆಗೆ ಬಂದಿರಲಿಲ್ಲ. ಬದಲಾಗಿ ಹಳೆಯ ಚಿತ್ರಗಳನ್ನೇ ಮತ್ತೆ ರಿಲೀಸ್ ಮಾಡಲಾಗಿತ್ತು. ಇವೆಲ್ಲದರ ನಡುವೆ ತೆರೆಕಂಡ ಮೊಟ್ಟಮೊದಲ ಚಿತ್ರವೇ ಆಕ್ಟ್-1978.

                ಸಮಾಜದಲ್ಲಿ ಭ್ರಷ್ಟಾಚಾರದ ವಿರುದ್ಧ ಹಲವರು ಹಲವಾರು ರೀತಿಯ ಪ್ರತಿರೋಧಗಳನ್ನು ದಾಖಲು ಮಾಡಿರುವುದನ್ನು ನಾವು ಕಂಡಿರುತ್ತೇವೆ. ಆದರೆ ಈ ರೀತಿಯ ಪ್ರತಿರೋಧವನ್ನು ನೀವು ಎಂದಿಗೂ ಊಹಿಸಿರಲು ಸಾಧ್ಯವೇ ಇಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿತ್ಯವೂ ಲಂಚ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂತಹ ಹಿಂಸಾತ್ಮಕ ವ್ಯವಸ್ಥೆಯ ವಿರುದ್ಧ ತನ್ನದೇ ಆದ ಹೋರಾಟವನ್ನು ರೂಪಿಸುವ ಕಥಾನಾಯಕಿ ಯಾವ ರೀತಿ ಭ್ರಷ್ಟರಿಗೆ ಪಾಠ ಕಲಿಸಲು ಮುಂದಾಗುತ್ತಾಳೆ ಎಂಬುದು ಕಥಾಹಂದರ.
ಇಡೀ ಚಿತ್ರ ದಿನವೊಂದರಲ್ಲಿ ನಡೆಯುವ ಘಟನೆಯನ್ನು ಆಧರಿಸಿದ್ದು ಅತ್ಯುತ್ತಮ ನಿರೂಪಣೆಯೊಂದಿಗೆ ನೋಡುಗರನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಕಥಾನಾಯಕಿ ವಯಸ್ಸಾದ ಅಜ್ಜನ ಜೊತೆಗೂಡಿ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿ ಭ್ರಷ್ಟಾಚಾರದಿಂದ ತನ್ನನ್ನು ಘಾಸಿಗೊಳಿಸಿದ  ಕಛೇರಿಯ ಸಿಬ್ಬಂದಿಯನ್ನು ತನ್ನ ಹತೋಟಿಗೆ ತೆಗೆದುಕೊಂಡು ಯಾವ ರೀತಿ ಹೋರಾಡುತ್ತಾಳೆ, ಕೊನೆಗೆ ಆ ಹೋರಾಟದಲ್ಲಿ ಆಕೆ ಗೆಲ್ಲುತ್ತಾಳೋ, ಇಲ್ಲವೋ ಎಂಬ ಕುತೂಹಲ ಕಾಯ್ದುಕೊಂಡೇ ಚಿತ್ರ ಕೊನೆಯವರೆಗೂ ಸಾಗುತ್ತದೆ.
ನಾಯಕಿ ಪಾತ್ರದಲ್ಲಿ ಯಜ್ಞಾಶೆಟ್ಟಿ, ಅಜ್ಜನ ಪಾತ್ರದಲ್ಲಿ ಬಿ‌.ಸುರೇಶ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶೃತಿ, ಅಚ್ಯುತ್ ಕುಮಾರ್, ಶೋಭರಾಜ್, ಪ್ರಮೋದ್ ಶೆಟ್ಟಿ,  ಅವಿನಾಶ್, ಸುಧಾ ಬೆಳವಾಡಿ, ಸಂಚಾರಿ ವಿಜಯ್, ಭಾಸ್ಕರ್ ಪ್ರಸಾದ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

           ನಾತಿಚರಾಮಿ ನಿರ್ದೇಶಿಸಿ ಗೆದ್ದಿದ್ದ ಮಂಸೋರೆ ಈ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರದ ಸಂಕಲನ, ಹಿತವಾದ ಹಿನ್ನೆಲೆ ಸಂಗೀತದೊಂದಿಗೆ ವೀಕ್ಷಕರಿಗೆ ವಿಶಿಷ್ಟ ಅನುಭವವನ್ನು ಕಟ್ಟಿಕೊಡುವಲ್ಲಿ ಚಿತ್ರ ಗೆದ್ದಿದೆ. ವಿಭಿನ್ನ ಚಿತ್ರಗಳನ್ನು ನೋಡುವ ಆಸಕ್ತಿಯಿದ್ದವರು ಈ ಚಿತ್ರವನ್ನು ತಪ್ಪದೇ ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಬಹುದಾಗಿದೆ.

ರಾಷ್ಟ್ರಧ್ವನಿ ರೇಟಿಂಗ್    4/5

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]