Friday, August 7 , 2020
ಲಾಕ್ ಡೌನ್ ಎಫೆಕ್ಟ್ | ಮುಗಿಬಿದ್ದು ಮದ್ಯ ಖರೀದಿಸುತ್ತಿರುವ ಮದ್ಯ ಪ್ರಿಯರು

ಬೆಂಗಳೂರು(13.07.2020): ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಳೆ ರಾತ್ರಿಯಿಂದ ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ, ಇತರ ಜಿಲ್ಲೆಗಳಿಗೂ ಲಾಕ್ ಡೌನ್ ಬಿಸಿ ತಟ್ಟಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಾಳೆ ರಾತ್ರಿಯಿಂದಲೇ ಲಾಕ್ ಡೌನ್ ಘೋಷಣೆಯಾಗಿರುವುದರಿಂದ ಇಂದು ವಿವಿಧ ಬಾರ್ ಗಳ ಮುಂದೆ ಜನರು ಮುಗಿಬಿದ್ದು ಮದ್ಯ ಖರೀದಿಗೆ ಮುಂದಾಗಿದ್ದಾರೆ.

ನಿನ್ನೆಯಿಂದಲೇ ಬಾರ್ ಮುಂದೆ ಸಂಜೆಯ ವೇಳೆಗೆ ಜನರು ಸಾಲು ನಿಂತು ಮದ್ಯ ಖರೀದಿ ಮಾಡುತ್ತಿದ್ದರು. ಇಂದು ಮದ್ಯ ಖರೀದಿಗೆ ಬಂದ ಜನರ ಸಂಖ್ಯೆ ಹೆಚ್ಚಾಗಿತ್ತು. ಲಾಕ್ ಡೌನ್ ಅವಧಿಯಲ್ಲಿ ಮದ್ಯ ಸಿಗದಿರುವ ಕಾರಣ ಜನರು ಈಗಲೇ ಮದ್ಯ ಸ್ಟಾಕ್ ಇಡಲು ಮುಂದಾಗಿದ್ದಾರೆ. ರಾಜ್ಯದ ಕೆಲವು ಬಾರ್ ಗಳ ಮುಂದೆಯಂತೂ ಜನರು ಕ್ಯೂ ನಿಂತು ವ್ಯಕ್ತಿ ಅಂತರವನ್ನೂ ಕಾಪಾಡಿಕೊಳ್ಳದೇ ಮದ್ಯ ಖರೀದಿಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಲಾಕ್ ಡೌನ್ ಎಫೆಕ್ಟ್ ಕೇವಲ ಬೆಂಗಳೂರಿಗೆ ಮಾತ್ರವಲ್ಲದೇ, ಇತರ ಜಿಲ್ಲೆಗಳಿಗೂ ವ್ಯಾಪಿಸಿದೆ. ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ಜನರು ತಮ್ಮ ಜಿಲ್ಲೆಯಲ್ಲಿ ಯಾವಾಗ ಲಾಕ್ ಡೌನ್ ಆಗಲಿದೆ ಎನ್ನುವ ಆತಂಕದಿಂದ ಈಗಲೇ ಬಾರ್ ಮುಂದೆ ಕ್ಯೂ ನಿಂತು ಮದ್ಯ ಖರೀದಿಗೆ ಮುಂದಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ವಾರಕ್ಕೆ ಬೇಕಾಗುವಷ್ಟು ಮದ್ಯವನ್ನು ಜನರು ಒಂದೇ ಬಾರಿಗೆ ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]