Monday, July 26 , 2021
ರಾಜ್ಯ ರಾಜಕಾರಣದ ಮಹತ್ವದ ತಿರುವಿನ ಲೈವ್ ಅಪ್ಡೇಟ್ ನೀಡಿದ ಏಕೈಕ ಸುದ್ದಿ ಮಾಧ್ಯಮ ನಿಮ್ಮ ‘ರಾಷ್ಟ್ರಧ್ವನಿ’

ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೆ ಹೊಸ ತಿರುವುಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಿನ್ನೆ(ಮೇ 16)ರಂದು ರಾತ್ರಿ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯಪಾಲರು ಬಿಜೆಪಿಗೆ ಸರಕಾರ ರಚನೆಗೆ ಅವಕಾಶ ನೀಡಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ರಾತ್ರಿಯಿಂದ ಬೆಳಗ್ಗಿನವರೆಗೆ ವಿಚಾರಣೆ ನಡೆದಿತ್ತು.

ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಡೆಸಿದ ವಿಚಾರಣೆಯ ಕ್ಷಣ ಕ್ಷಣದ ಸುದ್ದಿಗಳನ್ನು ರಾಷ್ಟ್ರಧ್ವನಿ ಪ್ರಕಟಿಸಿದ್ದು, ಈ ಮೂಲಕ ಕರ್ನಾಟಕದ ರಾಜಕೀಯದ ಮಹತ್ವದ ತಿರುವನ್ನು ಪ್ರಕಟಿಸಿದ ಏಕೈಕ ಅಂತರ್ಜಾಲ ಪತ್ರಿಕೆಯಾಗಿ ರಾಷ್ಟ್ರಧ್ವನಿ ಹೊರಹೊಮ್ಮಿದೆ.

ಕಚೇರಿಯಿಂದ ಮನೆಗೆ ತಲುಪಿದ್ದ ರಾಷ್ಟ್ರಧ್ವನಿ ಸಿಬ್ಬಂದಿಗಳು ಸುಪ್ರೀಂ ಕೋರ್ಟ್ ನಲ್ಲಿ ರಾತ್ರೋ ರಾತ್ರಿ ಅರ್ಜಿ ವಿಚಾರಣೆ ನಡೆಯಲಿದೆ ಎನ್ನುವುದು ತಿಳಿದು ಬಂದ ತಕ್ಷಣ ಮತ್ತೆ ಕಚೇರಿಗೆ ಆಗಮಿಸಿದ್ದು, ರಾತ್ರಿ 1ರಿಂದ ಬೆಳಗ್ಗೆ 5:30ರವರೆಗೂ ನಿರಂತರ ಅಪ್ಡೇಟ್ ಗಳನ್ನು ನೀಡಿದ್ದಾರೆ. ಈ ಬಗ್ಗೆ ಹಲವು ಓದುಗರು ಕಚೇರಿಗೆ ಕರೆ ಮಾಡಿ ರಾಷ್ಟ್ರಧ್ವನಿ ಅಪ್ಡೇಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾತ್ರಿಯಿಂದ ಬೆಳಗ್ಗಿನವರೆಗೆ ಸಾವಿರಾರು ಓದುಗರು ರಾಷ್ಟ್ರಧ್ವನಿ ವೆಬ್ ಪೇಜ್ ಗೆ ಭೇಟಿ ನೀಡಿದ್ದಾರೆ. ಈ ಸುದ್ದಿಯು ಕರ್ನಾಟಕದ ಬೆರಳೆಣಿಕೆಯ ಸುದ್ದಿವಾಹಿನಿಗಳಲ್ಲಿ ಲೈವ್ ಆಗಿ ಬಂದಿತ್ತು. ಹಲವು ಸುದ್ದಿವಾಹಿನಿಗಳು ಈ ಸುದ್ದಿಯನ್ನು ನಿರ್ಲಕ್ಷಿಸಿದ್ದವು. ಮುದ್ರಣ ಮಾಧ್ಯಮದಲ್ಲೂ ಈ ಸುದ್ದಿ ಎಲ್ಲೂ ಸುದ್ದಿಯಾಗಲಿಲ್ಲ. ಇಂತಹ ಸಂದರ್ಭದಲ್ಲಿ ರಾಷ್ಟ್ರಧ್ವನಿ ಸಂಪಾದಕೀಯ ಬಳಗ, ಸಾಮಾಜಿಕ ಜಾಲತಾಣ ವಿಭಾಗ ಬೆಳಗ್ಗಿನವರೆಗೆ ಕರ್ತವ್ಯ ನಿರ್ವಹಿಸುವ ಮೂಲಕ ತಮ್ಮ ಕೆಲಸದಲ್ಲಿ ಬದ್ಧತೆ ತೋರಿಸಿದ್ದಾರೆ. ಇದಕ್ಕಾಗಿ ರಾಷ್ಟ್ರಧ್ವನಿಯು ಓದುಗರು ಮತ್ತು ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]