Sunday, May 9 , 2021
ಮೈಸೂರಿನಲ್ಲಿ ಪ್ರತಿಷ್ಟಿತ ಅಕ್ಕಾ IAS  ಅಕಾಡೆಮಿಯ ಶಾಖೆ ಆರಂಭ

ಮೈಸೂರು (19-04-2021): ರಾಜಧಾನಿ ದೆಹಲಿ ಮತ್ತು ಬೆಂಗಳೂರು ನಗರದಲ್ಲಿ ಜನಪ್ರಿಯತೆ ಪಡೆದಿರುವ ಪ್ರತಿಷ್ಟಿತ ‘ಅಕ್ಕಾ ಐಎಎಸ್ ಅಕಾಡೆಮಿಯು’ ಮೈಸೂರಿನಲ್ಲಿ ತನ್ನ ನೂತನ ಶಾಖೆಯನ್ನು ಪ್ರಾರಂಭಿಸಿದೆ. ನೆನ್ನೆ ನಗರದ ನ್ಯೂ ಕಾಂತರಾಜ್ ರಸ್ತೆಯಲ್ಲಿ ಅಕ್ಕಾ ಐಎಎಸ್ ಅಕಾಡೆಮಿಯ ನೂತನ ಶಾಖೆಯನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಹೇಮಂತ್ ಕುಮಾರ್ ಅವರು ಉದ್ಘಾಟನೆ ಮಾಡಿದರು.

‌ ‌‌     ಉದ್ಘಾಟನೆ ಮಾಡಿ ಮಾತನಾಡಿದ ಅವರು ಕಳೆದ ಏಳೆಂಟು ವರ್ಷಗಳಿಂದ ಅಕ್ಕ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಅನೇಕ ಅಭ್ಯರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರತಿವರ್ಷ ಸಂಸ್ಥೆಯಿಂದ ತರಬೇತಿ ಪಡೆದ ಬಹಳಷ್ಟು ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಈ ಯಶಸ್ಸು ಸಂಸ್ಥೆಯ ಸಂಸ್ಥಾಪಕರಾದ ಡಾ.ಶಿವಕುಮಾರ್ ಗೆ ಸಲ್ಲಬೇಕು ಎಂದರು. ಇಂತಹ ಯಶಸ್ವಿ ಸಂಸ್ಥೆಯ ಶಾಖೆಯೊಂದು ಮೈಸೂರಿನಲ್ಲಿ ಪ್ರಾರಂಭವಾಗುತ್ತಿರುವುದರಿಂದ ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ, ಯುವಕರಿಗೆ ಪರೀಕ್ಷಾ ಸಿದ್ದತೆಗೆ ಅನುಕೂಲವಾಗಲಿದೆ ಎಂದರು.

ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಾ.ಶಿವಕುಮಾರ್ ಮಾತನಾಡಿ ದೆಹಲಿಯಲ್ಲಿದ್ದ ನಮ್ಮ ಸಂಸ್ಥೆಯ ಕೇಂದ್ರ ಕಛೇರಿಯನ್ನು ರಾಜ್ಯದ ಯುವಜನತೆಗಾಗಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಮೈಸೂರಿನ ಯುವಕರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿಕೊಂಡು ದೆಹಲಿ, ಹೈದರಾಬಾದ್ ಕಡೆಗಳಲ್ಲಿ ತರಬೇತಿಗೆ ಬರುತ್ತಿದ್ದರು, ಆದ ಕಾರಣ ನಮ್ಮ ಊರಿನ ಯುವಕರಿಗೆ ನಮ್ಮಲ್ಲಿಯೇ ಉನ್ನತ ಮಟ್ಟದ ತರಬೇತಿ ನೀಡುವ ಬಯಕೆಯಿಂದ ಶಾಖೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಧರಣಿದೇವಿ ಮಾಲಗತ್ತಿ, ಲೆಕ್ಕಪತ್ರ ಇಲಾಖೆಯ ಮಹದೇವ ನಾಯಕ, ಸೋಸಲೆ ಸಿದ್ದರಾಜು, ಸಂದೀಪ್ ರಾವಣೀಕರ್, ಸೋಸಲೆ ಗಂಗಾಧರ್, ಡಾ.ನವೀನ್ ಮೌರ್ಯ ಮುಂತಾದವರು ಹಾಜರಿದ್ದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]