Monday, July 26 , 2021
ಮಹೇಶ್ ಚಂದ್ರ ಗುರುಗಳೇ… ಕಾನ್ಷೀರಾಮ್ ಎಂಬ ಕನಸುಗಣ್ಣಿನ ನಾಯಕ ಕಟ್ಟಿದ ಅಭೇಧ್ಯ ಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು…!?
ಕಾಂಗ್ರೆಸ್ ಮತ್ತು ಬಿಜೆಪಿಯ ಒಳ ಒಪ್ಪಂದದ ಬಗ್ಗೆ ನಿಮಗೆಂದು ಅರಿವಾಗುತ್ತದೆ..

ಓದುಗರ ಲೇಖನ

-ಜನಾ ನಾಗಪ್ಪ

ಒಮ್ಮೆ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಭೇಟಿಯಾಗಲು ಅಸ್ಪೃಶ್ಯ ಸಮುದಾಯದ ಕಾಂಗ್ರೆಸ್ಸಿನ ಮುಖಂಡನೊಬ್ಬ ಬರುತ್ತಾನೆ. ಕುರ್ಚಿಯಲ್ಲಿ ಕೂತಿದ್ದ ಬಾಬಾ ಸಾಹೇಬರಿಗೆ ವಂದಿಸಿದ ಆ ಕಾಂಗ್ರೆಸ್ ದಲಿತ ಮುಖಂಡ ಬಾಬಾ ಸಾಹೇಬರನ್ನು ಕುರಿತು ” ಬಾಬಾ ಇಂದು ನಾನು ಕಾಂಗ್ರೆಸ್ಸಿನಲ್ಲಿ ಒಳ್ಳೆಯ ಸ್ಥಾನಗಳನ್ನು ಪಡೆದು ಈ ಮಟ್ಟಿಗೆ ಇದ್ದೇನೆ ಎಂದರೆ ಅದಕ್ಕೆ ಪ್ರಮುಖ ಕಾರಣ ನೀವೇ. ಏಕೆಂದರೆ ನಾನು ನಿಮ್ಮ ವಿರುದ್ಧ ಮಾತನಾಡಿದಾಗ ಮತ್ತು ನಿಮ್ಮನ್ನು ವಿರೋಧಿಸಿದಾಗಲೆಲ್ಲಾ ಕಾಂಗ್ರೆಸ್ ಪಕ್ಷ ನನ್ನ ಭುಜ ತಟ್ಟಿ ನನಗೆ ಒಳ್ಳೆಯ ಸ್ಥಾನಮಾನಗಳನ್ನು ಕೊಡುತ್ತಾ ಬಂದಿದೆ. ಹಾಗಾಗಿ ನಿಮ್ಮಿಂದಲೇ ಇಂದು ನಾನು ಕಾಂಗ್ರೆಸ್ ಪಕ್ಷದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದೇನೆ. ಅದಕ್ಕಾಗಿಯೇ ನಿಮಗೆ ವಂದನೆಗಳನ್ನು ತಿಳಿಸಲು ಬಂದಿದ್ದೇನೆ” ಎಂದು ಹೇಳುತ್ತಾನೆ.

ಬಾಬಾ ಸಾಹೇಬರು ಆ ಕಾಂಗ್ರೆಸ್ಸಿನ ದಲಿತ ಮುಖಂಡನನ್ನು ಒಮ್ಮೆ ಮೇಲಿಂದ ಕೆಳಗೆ ದಿಟ್ಟಿಸಿ ನೋಡುತ್ತಾರೆ. ಆತನನ್ನು ಕುರಿತು ” ಕಾಂಗ್ರೆಸ್ ಹಾಕುವ ಬಿಸ್ಕೆಟ್ ಅನ್ನು ಚೆನ್ನಾಗಿ ತಿನ್ನುತ್ತೀಯ. ಹೇಗೆ ನಾಯಿ ತನಗೆ ಬಿಸ್ಕೆಟ್ ಹಾಕಿದ ಮಾಲಕನಿಗೆ ವಿಶ್ವಾಸದಿಂದ ಇರುತ್ತದೆಯೋ ಅದೇ ರೀತಿ ನೀನು ಕೂಡ ಕಾಂಗ್ರೆಸ್ ನಲ್ಲಿ ವಿಶ್ವಾಸದಿಂದ ಇರು. ನಿನ್ನಂತವರಿಗೆ ಅದೇ ಸೂಕ್ತ ಹೋಗಿ ಬಾ ” ಎಂದು ಹೇಳುತ್ತಾರೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗದ ಆ ಕಾಂಗ್ರೆಸ್ ದಲಿತ ಮುಖಂಡ ಮುಗುಳ್ನಗುತ್ತಾ ಅಲ್ಲಿಂದ ಹೊರಡುತ್ತಾನೆ.  ಆಗ ಬಾಬಾ ಸಾಹೇಬರು ತಮ್ಮ ಅನುಯಾಯಿಯಾದ ಶಂಕರಾನಂದ ಶಾಸ್ತ್ರಿಯವರನ್ನು ಕರೆದು ” ಆ ವ್ಯಕ್ತಿಯನ್ನು ನೋಡಿ! ಕಾಂಗ್ರೆಸ್ ಹಾಕುವ ಎಂಜಲು ಕಾಸಿಗೆ ತನ್ನ ಸಮಾಜವನ್ನೇ ಬಲಿಕೊಡಲು ಸಿದ್ಧನಾಗಿದ್ದಾನೆ. ಇಂತಹ ವ್ಯಕ್ತಿಗಳಿಂದ ಏನಾದರೂ ಪ್ರಯೋಜನವಿದೆಯೇ?. ಕಾಂಗ್ರೆಸಿಗೆ ಬೇಕಿರುವುದು ಇಂತಹ ಸ್ವಾರ್ಥಿಗಳೇ ಅಲ್ಲವೇ!” ಎಂದು ಹೇಳುತ್ತಾರೆ.

ಬಾಬಾ ಸಾಹೇಬರು ಹೇಳಿದ ಇಂತಹ ವ್ಯಕ್ತಿಗಳು, ಇಂತಹ ಸಮಾಜ ದ್ರೋಹಿಗಳು, ಸ್ವಾರ್ಥಿಗಳು ಇಂದಿಗೂ ಇದ್ದಾರೆ ಮತ್ತು ಮುಂದೆಯೂ ಇರುತ್ತಾರೆ. ಏಕೆಂದರೆ ಅಂದು ಮನುವಾದಿ ಕಾಂಗ್ರೆಸ್ ಮತ್ತು ಇತರ ಜಾತಿ ವಾದಿ ಪಕ್ಷಗಳಿಗೆ ಅಡ್ಡಗಾಲಾಗಿ ಇದ್ದದ್ದು ಬಾಬಾ ಸಾಹೇಬರು ಒಬ್ಬರೇ. ಹಾಗಾಗಿ ಈ ಮನುವಾದಿ ಕಾಂಗ್ರೆಸ್ ಮತ್ತು ಅಂದಿನ ಹಿಂದುತ್ವ ಸಂಘಟನೆಗಳು ಬಾಬಾ ಸಾಹೇಬರನ್ನು ಮತ್ತು ಅವರ ನಾಯಕತ್ವವನ್ನು ಸದಾ ಟೀಕಿಸುತ್ತಲೇ ಇದ್ದರೂ ಜೊತೆಗೆ ಒಂದಲ್ಲ ಒಂದು ರೀತಿಯ ಕಳಂಕವನ್ನು ಹಚ್ಚುತ್ತಲೇ ಇದ್ದರು.

ಆದರೆ ಇದರಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೊಂದಿದೆ ಏನೆಂದರೆ ಬಾಬಾ ಸಾಹೇಬರನ್ನು ಟೀಕಿಸಲು ಮತ್ತು ಅವರನ್ನು ಸೋಲಿಸಲು ಬಳಸಿದ್ದು ಅಸ್ಪೃಶ್ಯರನ್ನೇ. ಕಾಲ ಕಾಲಕ್ಕೂ ಬಾಬಾ ಸಾಹೇಬರನ್ನು ಕಾಡಿದ್ದು ಹೇಗೆಂದರೆ ಇಂತಹ ಚಮಚಗಳನ್ನು ಬಳಸಿಕೊಂಡು. ಜೊತೆಗೆ ಇವರನ್ನು ಬಳಸಿಕೊಂಡು ಶೋಷಿತ ಸಮುದಾಯಗಳನ್ನು ರಾಜಕೀಯವಾಗಿ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದರು. ಬಾಬಾ ಸಾಹೇಬರ ಪರಿನಿಬ್ಬಾಣವಾದ ನಂತರ ಕಾಂಗ್ರೆಸ್ಸಿಗೆ ದಲಿತರ ಅಗತ್ಯತೆಯಾಗಲಿ, ಅಲ್ಪಸಂಖ್ಯಾತರ ಅಗತ್ಯತೆಯಾಗಲಿ ಬೇಕಿರಲಿಲ್ಲ. ಆದ್ದರಿಂದಲೇ ಬಾಬಾಸಾಹೇಬರ ಪರಿನಿಬ್ಬಾಣದ ನಂತರ ಕಾಂಗ್ರೆಸ್ಸಿನಲ್ಲಾಗಲಿ ಅಥವಾ ಇತರ ಯಾವುದೇ ಮನುವಾದಿ ಪಕ್ಷಗಳಲ್ಲಿ ಆಗಲಿ ಶೋಷಿತ ಸಮುದಾಯದ ದೊಡ್ಡ ನಾಯಕರನ್ನು ಈ ಪಕ್ಷಗಳು ಬೆಳೆಸಲೇ ಇಲ್ಲ. ಯಾಕೆಂದರೆ ಇವರ ಅಗತ್ಯತೆ ಈ ಪಕ್ಷಗಳಿಗಿದ್ದದ್ದು  ಅಂಬೇಡ್ಕರ್ ಅವರು ಬದುಕಿರುವವರೆಗೆ ಮಾತ್ರ. Use and through ಇದ್ದ ಹಾಗೆ. ಬಾಬಾ ಸಾಹೇಬರು ಬದುಕಿರುವವರೆಗೂ ಬಾಬು ಜಗಜೀವನ್ ರಾಮ್ ರನ್ನು ಬಳಸಿಕೊಂಡ ಕಾಂಗ್ರೆಸ್ ನಂತರ ಮೂಲೆಗುಂಪು ಮಾಡಿತು. ಕೊನೆಗೆ ಕಾಂಗ್ರೆಸ್ಸೇತರ ಪಕ್ಷ ಬಂದಾಗಲೇ ಉಪ ಪ್ರಧಾನಿಯಾಗಿ ಆಯ್ಕೆಯಾದರು. ಆದರೆ ಅಲ್ಲಿ ಕೂಡ ಯಾವುದೇ ಅಧಿಕಾರವಿರಲಿಲ್ಲ ಅಷ್ಟೇ.

ಕಾಂಗ್ರೆಸ್ ಮತ್ತು ಬಿಜೆಪಿ ಕಮ್ಯುನಿಸ್ಟರಿಗೆ ದಲಿತರನ್ನು ಬಳಸಿಕೊಳ್ಳುವುದು ಹೊಸದೇನೂ ಅಲ್ಲ. ಆದರೆ ಅಲ್ಪಸಂಖ್ಯಾತ ಹಿಂದುಳಿದ ಮತ್ತು ದಲಿತರ ಬಗ್ಗೆ ಈ ಪಕ್ಷಗಳಿಗೆ ಕಾಳಜಿ ಮತ್ತೆ ಹುಟ್ಟಿದ್ದು “ಬಹುಜನ ಸಮಾಜ ಪಕ್ಷ” ಉದಯಿಸಿದ ನಂತರ. ಏಕೆಂದರೆ ಬಾಬಾಸಾಹೇಬರ ನಂತರ ಬಹುಜನ ಸಮಾಜದಲ್ಲಿ ಅವರ ಆಶಯಗಳನ್ನು ತುಂಬುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದ ಏಕೈಕ ಪಕ್ಷ ಬಿಎಸ್ಪಿ. ಹಾಗಾಗಿ ಈ ಮೇಲಿನ ಮನುವಾದಿ ಪಕ್ಷಗಳಿಗೆ ಮತ್ತೆ ಶೋಷಿತ ಸಮುದಾಯದ ಒಳಗೆ ಬಿಎಸ್ಪಿ ವಿರುದ್ಧವಾಗಿ ನಾಯಕತ್ವವನ್ನು ಬೆಳೆಸಲು ಶುರು ಮಾಡಿದರು.

ಬಹುಜನ ಸಮಾಜ ಪಕ್ಷದ ನಾಯಕಿಯಾದ  ಮಾಯಾವತಿಯವರ ನಾಯಕತ್ವವನ್ನುಶೋಷಿತ ಸಮುದಾಯಗಳಿಂದ ಮರೆಮಾಚಲು ಬಾಬು ಜಗಜೀವನ್ ರಾಮ್ ರವರ ಮಗಳಾದ ಮೀರಾ ಕುಮಾರಿಯವರನ್ನು ಸಂಸದರನ್ನಾಗಿ ಮಾಡಿದರು. ಅಷ್ಟೇ ಅಲ್ಲದೆ ಮೀರಾ ಕುಮಾರಿಯವರನ್ನು ಸದನದ ಅಧ್ಯಕ್ಷರನ್ನಾಗಿ ಮಾಡಿದರು. ಇದರಲ್ಲಿ ಇರುವ ತಂತ್ರವನ್ನು ಅರಿಯಬೇಕಿದೆ. ಏಕೆಂದರೆ ಕಾಂಗ್ರೆಸ್ ಪಕ್ಷವು ಮೀರಾ ಕುಮಾರಿ ಅವರನ್ನು ಅಷ್ಟರಮಟ್ಟಿಗೆ ಕೊಂಡೊಯ್ದಿದ್ದು ಅವರ ತಂದೆಯ ಮೇಲಿನ ಪ್ರೀತಿಯಿಂದಲ್ಲ ಅಥವಾ ಅಭಿಮಾನದಿಂದಲ್ಲ.  ಬದಲಾಗಿ ಮಾಯಾವತಿಯವರಿಗೆ ಪರ್ಯಾಯವಾಗಿ ಶೋಷಿತ ಸಮುದಾಯಗಳಿಗೆ ಕಾಂಗ್ರೆಸ್ಸಿನ ಪರವಾದ ನಾಯಕರನ್ನು ಸೃಷ್ಟಿಸುವ ದುರುದ್ದೇಶದಿಂದ. ಅಂದು ಬಾಬು ಜಗಜೀವನರಾಮ್ ರನ್ನು ಹೇಗೆ ಕಾಂಗ್ರೆಸ್ ಬಳಸಿಕೊಂಡು ಮೂಲೆಗುಂಪು ಮಾಡಿದರೋ ಅದೇ ರೀತಿ ಮೀರಾ ಕುಮಾರಿ ಅವರನ್ನು ಕೂಡ ಬಳಸಿಕೊಂಡು ಇಂದು ಮೂಲೆಗುಂಪು ಮಾಡಿದೆ. ಕಾಂಗ್ರೆಸ್ಸಿನ ಜಾತಿವಾದಿ ಬುದ್ಧಿಗೆ ಇದಕ್ಕಿಂತಲೂ ನಿದರ್ಶನ ಬೇಕೆ?

ಈಗ 2019 ರ ಲೋಕಸಭಾ ಚುನಾವಣೆ ಸನಿಹದಲ್ಲಿದೆ. ಕಾಂಗ್ರೆಸ್ ಬಿಜೆಪಿ ಎಂಬ ಮನುವಾದಿ ಪಕ್ಷಗಳನ್ನು ಮಣಿಸುವ ಶಕ್ತಿ ಮತ್ತು ಸಮರ್ಥ ನಾಯಕತ್ವವನ್ನು ಹೊಂದಿರುವ ಬಹುಜನ ಸಮಾಜ ಪಕ್ಷ ವನ್ನು ಹೇಗಾದರೂ ಮಾಡಿ ಸೋಲಿಸಬೇಕೆಂಬ ಸಮಾನವಾದ ನಿಲುವನ್ನು ಈ ಎರಡು ಪಕ್ಷಗಳು ಹೊಂದಿವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿಯ ಒಳ ಒಪ್ಪಂದ. ಅಧಿಕಾರದಲ್ಲಿ ಕಾಂಗ್ರೆಸ್ ಇರಬೇಕು ಅಥವಾ ಬಿಜೆಪಿ ಮಾತ್ರ ಇರಬೇಕು ಎಂಬುದು ಎರಡು ಪಕ್ಷಗಳ ಆಂತರಿಕ ಒಪ್ಪಂದ. ಒಂದು ಹೆಡೆಯೆತ್ತಿದ ಹಾಗೂ ಮತ್ತೊಂದು ಪೊದೆಯೊಳಗಿನ ಹಾವು. ಇಂದು ಬಹುಜನ ಸಮಾಜಕ್ಕೆ ರಾಜಕೀಯವಾಗಿ ಜಾಗೃತಿಯನ್ನು ಮೂಡಿಸಿ ಪ್ರಜಾಪ್ರಭುತ್ವದ ಆಸೆಗಳನ್ನು ಈಡೇರಿಸಲು ಅಧಿಕಾರವನ್ನು ಹಿಡಿಯಲು ಸಮರ್ಥವಾಗಿ ನಿಂತಿರುವ ಬಿ ಎಸ್ ಪಿ ಪಕ್ಷ ವನ್ನು ಹೇಗಾದರೂ ಮಾಡಿ ಸೋಲಿಸುವ ಉದ್ದೇಶದಿಂದ ಕೆಲವು ಚಮಚಗಳನ್ನು ಎರಡು ಪಕ್ಷಗಳು ಸೃಷ್ಟಿಸಿಕೊಂಡಿವೆ.

ಈ ಗುಲಾಮರ ಮಾತುಗಳು ಹೇಗಿದೆ ಎಂದರೆ, ಇತ್ತ ಕಾಂಗ್ರೆಸ್ ಪಕ್ಷದ ಗುಲಾಮ ಹೇಳುತ್ತಾನೆ… ಬಿಎಸ್ಪಿ ಮತ್ತು ಬಿಜೆಪಿ ಒಂದೇ ಎಂದು. ಅತ್ತ ಬಿಜೆಪಿ ಗುಲಾಮ ಹೇಳುತ್ತಾನೆ ಬಿಎಸ್ಪಿ ಮತ್ತು ಕಾಂಗ್ರೆಸ್ ಒಂದೇ ಎಂದು. ಅಂದು ಬಾಬಾ ಸಾಹೇಬರನ್ನು ವಿರೋಧಿಸಿದರೆ ಒಳ್ಳೆಯ ಸ್ಥಾನಮಾನಗಳು ಸಿಗುತ್ತಿತ್ತು. ಇಂದು ಬಾಬಾ ಸಾಹೇಬರ ಆಸೆಯನ್ನು ಈಡೇರಿಸುವ ಬಿಎಸ್ಪಿಯನ್ನು ವಿರೋಧಿಸಿದರೆ ಒಳ್ಳೆಯ ಸ್ಥಾನಮಾನಗಳು ಈ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನೀಡುತ್ತವೆ. ಹಾಗಾಗಿ ಕೆಲವರು ಪ್ರಗತಿಪರರು ಎಂಬ ಹಣೆಪಟ್ಟಿಯೊಂದಿಗೆ ಕಾಂಗ್ರೆಸ್ಸಿಗೆ ವಕಾಲತ್ತು ವಹಿಸಿಕೊಂಡಿದ್ದಾರೆ. ಚುನಾವಣೆಗೆ ಮುಂಚೆ ಇವರು ಅಂಬೇಡ್ಕರ್ ವಾದಿ ಗಳಾಗಿ ಬಿಡುತ್ತಾರೆ. ಚುನಾವಣೆ ಬಂದರೆ ಪಕ್ಕಾ ಕಾಂಗ್ರೆಸ್ಸಿನ ಗುಲಾಮರಾಗಿ ಬಿಡುತ್ತಾರೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ಸಿಗೆ ಮತ ನೀಡಬೇಕು ಎಂದು ಹೇಳುತ್ತಾರೆ. ಆದರೆ ಬಾಬಾಸಾಹೇಬರು ಬರೆದ ಸಂವಿಧಾನವನ್ನೇ ಜೀವಾಳವಾಗಿ ಮುನ್ನಡೆಯುತ್ತಿರುವ ಬಿಎಸ್ಪಿ ಪಕ್ಷಕ್ಕೆ ಮಾತ್ರ ಮತ ಹಾಕಬಾರದೆಂದು ಹೇಳುತ್ತಾರೆ. ಇಂತಹಾ ಕಾಂಗ್ರೆಸಿನ ಗುಲಾಮರೇ ಅಲ್ಲವೇ ನಿಜವಾದ ಸಂವಿಧಾನ ವಿರೋಧಿಗಳು?

ಸಂವಿಧಾನವನ್ನು ಒಪ್ಪುವುದಿಲ್ಲ ಮತ್ತು ಸಂವಿಧಾನವನ್ನು ಬದಲಿಸುವುದಕ್ಕೇ ನಾವು ಬಂದಿರುವುದು ಎನ್ನುವ ಬಿಜೆಪಿ ಸಂವಿಧಾನ ವಿರೋಧಿ ಪಕ್ಷ ಎಂಬುದು ಎಷ್ಟು ಸತ್ಯವೋ ಸಂವಿಧಾನವನ್ನು ತನ್ನ ಅಧಿಕಾರವಧಿಯಲ್ಲಿ ವಿರೂಪಗೊಳಿಸಿ ದ್ರೋಹ ಮಾಡಿದ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತಲೂ ಅತಿ ದೊಡ್ಡ ಸಂವಿಧಾನ ವಿರೋಧಿ ಪಕ್ಷ ಎಂಬುದು ಅಷ್ಟೇ ಸತ್ಯ. ಇಂತಹ ಸಂವಿಧಾನ ವಿರೋಧಿ ಪಕ್ಷಗಳಿಗೆ ವೋಟು ಹಾಕಿ ಎಂದು ಕೇಳುವ ಪ್ರಗತಿಪರರಾಗಲಿ ಅಥವಾ ಪಂಡಿತರಾಗಲಿ ಸಂವಿಧಾನ ವಿರೋಧಿಗಳೇ ಆಗುತ್ತಾರೆ ಅಲ್ಲವೇ.

ಯಾರು ಎಷ್ಟೇ ಆಪಾದನೆಗಳನ್ನು ಮಾಡಿದರು ಬಹುಜನರು ಧೃತಿಗೆಡುವ ಅಗತ್ಯವಿಲ್ಲ. ಏಕೆಂದರೆ ಇಂದು ಫುಲೆ – ಅಂಬೇಡ್ಕರವಾದವನ್ನು ಮನೆಮನೆಗೂ ತಲುಪಿಸಿ ಜಾಗೃತಿಯನ್ನು ಮೂಡಿಸಿರುವ ಬಹುಜನ ಸಮಾಜದ ಕಾರ್ಯಕರ್ತರ ಪ್ರಾಮಾಣಿಕತೆಯ ಮುಂದೆ ಇಂತಹ ಸ್ವಾರ್ಥಿಗಳ ಮತ್ತು ಗುಲಾಮರ ಆಟಗಳು ನಡೆಯುವುದಿಲ್ಲ. ಆನೆ ಸಾಗುತ್ತಿದ್ದರೆ ಎಂತೆಂಥ ಪ್ರಾಣಿಗಳೋ ಬೊಗಳುತ್ತವೆ, ಚೀರಾಡುತ್ತವೆ. ಆದರೆ ಆನೆ ಸಾಗುತ್ತಲೇ ಇರಬೇಕು. ಚುನಾವಣೆಯಲ್ಲಿ ಇವರಿಗೆ ಮತ್ತು ಇವರ ಮಾಲಕರಿಗೆ ಸರಿಯಾದ ಉತ್ತರ ಕೊಡೋಣ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]