Wednesday, June 23 , 2021
ಭ್ರಷ್ಟಾಚಾರ ಮತ್ತು ಭ್ರಷ್ಟ-ಆಚಾರವನ್ನು ಕೊನೆಗಾಣಿಸಬೇಕಿದೆ| ಪ್ರೊ.ಹರಿರಾಮ್. ಎ

ನಮ್ಮ ದೇಶದ ಇಡೀ ವ್ಯವಸ್ಥೆಯನ್ನು ನೋಡಿಕೊಳ್ಳಲು ಜೊತೆಗೆ ಅದನ್ನು ಸುಧಾರಿಸಲು ಎಡವಿದ್ದಲ್ಲಿ ಶಿಕ್ಷಿಸಲು ನಮ್ಮ ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸಿ, ಜನರಿಗೆ ಶಾಸಕರನ್ನು ಆಯ್ಕೆ ಮಾಡುವ ಹಕ್ಕನ್ನು ಹಾಗೆಯೇ ಶಾಸಕಾಂಗಕ್ಕೆ ಕಾರ್ಯಾಂಗವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ನೀಡಿದೆ. ಅದರಲ್ಲೂ ಶಾಸಕಾಂಗಕ್ಕೆ ಐದು ವರ್ಷಗಳ ಕಾಲಮಿತಿಯನ್ನು ನೀಡಿ ಪ್ರತಿ ಅವಧಿಗೆ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ನೀಡಿದೆ. ಕಾರ್ಯಾಂಗ ಅದರಲ್ಲೂ Bureaucratic Executive ಅಂದರೆ ಅಧಿಕಾರಿಗಳು ಮಾತ್ರ ಒಮ್ಮೆ ಆಯ್ಕೆಯಾದರೆ ನಿವೃತ್ತಿಯಾಗುವವರೆಗೂ ಶಾಶ್ವತವಾಗಿ ಆಡಳಿತದ ಭಾಗವಾಗಿ ಉಳಿಯುತ್ತಾರೆ. ಇದರಿಂದ ರಾಜಕಾರಣಿಗಳಿಗಿಂತ ಹೆಚ್ಚು ಅನುಭವ ಮತ್ತು ಜ್ಞಾನ ಇವರಿಗೆ ಲಭಿಸುತ್ತದೆ.  ಹಾಗಾಗಿ ತಮ್ಮ ಅನುಭವ ಮತ್ತು ಜ್ಞಾನವನ್ನು ಸಮಾಜದ ಸುಧಾರಣೆ ಮತ್ತು ಅಭಿವೃದ್ಧಿಗೆ ಬಳಸಿ ಬಲಿಷ್ಠ ರಾಷ್ಟ್ರ ನಿರ್ಮಿಸುವಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸಬೇಕಿತ್ತು, ಆದರೆ ನಮ್ಮ ದೇಶದಲ್ಲಿ ಆಗಿರುವುದೆ ಬೇರೆ !

ಇಂದಿನ ಸಮಾಜದ ಎಲ್ಲಾ ಅವ್ಯವಸ್ಥೆ ಹಾಗು ಸಮಸ್ಯೆಗಳಿಗೆ  ಕಾರಣ ಇದೇ ರಾಜಕಾರಣಿಗಳು ಮತ್ತು ಅಧಿಕಾರಿಗಳು!  ಈ ಸತ್ಯ ಎಲ್ಲರಿಗೂ ಗೊತ್ತಿದ್ದರು, ನಾವು ಯಾರೂ ‌ಸಹ ಅದನ್ನು ಸರಿಪಡಿಸುವ ಗೋಜಿಗೆ ಹೋಗದೆ ಇರುವುದು ದುರಂತ !  ಜೊತೆಗೆ ವ್ಯವಸ್ಥೆಯು  ಸರಿಹೋಗಬಹುದು ಎಂಬ ಭರವಸೆಯನ್ನೆ ಕಳೆದುಕೊಂಡಿದ್ದೇವೆ! ಇಂದಿನ ಕೋವಿಡ್-19 ನ  ಆರೋಗ್ಯ ತುರ್ತುಪರಿಸ್ಥಿತಿಯಲ್ಲಿ  ನಮ್ಮ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿರುವುದು ಎಲ್ಲರಿಗೂ ಗೋಚರವಾಗುತ್ತಿದೆ. ರಾಜಕಾರಣಿಗಳು ಕೂಡ ಇಂದು Bureaucracy ಮೇಲೆ ಸಂಪೂರ್ಣ ಹತೋಟಿಯನ್ನು ಕಳೆದುಕೊಂಡಿರುವುದು ಎದ್ದು ಕಾಣುತ್ತಿದೆ. ವ್ಯವಸ್ಥೆಯು ಇಂತಹ ಅಸಹಾಯಕ ಸ್ಥಿತಿಗೆ ತಲುಪಲು ಕಾರಣವೇನು? ಅಧಿಕಾರಿಗಳು ಇಷ್ಟು ಅಸಮರ್ಥರಾಗಲು ಕಾರಣ ಯಾರು?

ರಾಜಕಾರಣಿಗಳಿಗೆ Corrupt and Caste ಮುಖ್ಯ!
Bureaucracy ಯಲ್ಲಿ ಬಹಳಷ್ಟು Clean and Efficient ಅಧಿಕಾರಿಗಳು ಇದ್ದರು, ರಾಜಕಾರಣಿಗಳಿಗೆ ಇವರನ್ನು ಕಂಡರೆ ಅಲರ್ಜಿ! ರಾಜಕಾರಣಿಗಳಿಗೆ Clean and Efficient ಗಿಂತ Corrupt and Caste ಬಹಳ ಮುಖ್ಯ. ರಾಜಕಾರಣಿಗಳಿಗಿಂತ ಅಧಿಕಾರಿಗಳಿಗೆ ಆಡಳಿತ ವ್ಯವಸ್ಥೆಯ ಬಗ್ಗೆ ಹೆಚ್ಚು ತಿಳಿದಿದ್ದು ಅದರ ಆಗು ಹೋಗುಗಳ ಜೊತೆಗೆ ವ್ಯವಸ್ಥೆಯಲ್ಲಿನ Loop Holes ಬಹಳ ಚೆನ್ನಾಗಿ ಗೊತ್ತಿರುತ್ತದೆ. ಈ ಅಧಿಕಾರಿಗಳ‌ ಅನುಭವ ಮತ್ತು ಜ್ಞಾನವನ್ನು ಬಳಸಿಕೊಳ್ಳದ ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿನ ಒಬ್ಬ SI ಯಿಂದ IPS ಅಧಿಕಾರಿಯ ತನಕ ಹಾಗೆಯೇ ಒಬ್ಬ FDA ಯಿಂದ IAS ಅಧಿಕಾರಿಯ ತನಕ ಪೋಸ್ಟಿಂಗ್ ಆಗುವುದು ಜಾತಿ ಮತ್ತು ಹಣದ ಲೆಕ್ಕಾಚಾರದಲ್ಲಿ ಮಾತ್ರ!  ಇಲ್ಲಿ ಲಕ್ಷಗಳಿಂದ ಹಿಡಿದು ಹತ್ತಾರು ಕೋಟಿ ರೂಪಾಯಿಗಳ ವ್ಯವಹಾರ ಇರುತ್ತೆ.  ಶಾಸಕರು, ಸಂಸದರು, ಮಂತ್ರಿಗಳಿಂದ ಹಿಡಿದು ಮುಖ್ಯಮಂತ್ರಿ ಕಛೇರಿಯವರೆಗೂ ಈ ವ್ಯವಹಾರದಲ್ಲಿ ಪಾಲುದಾರಿಕೆಯನ್ನು  ಹೊಂದಿರುತ್ತಾರೆ.

ಇದೊಂಥರ Investment and Profit ಲೆಕ್ಕಾಚಾರ.  ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ಳುವ ಅಧಿಕಾರಿಗಳು ತಮ್ಮ ಸ್ಥಾನವನ್ನು ದುಡ್ಡು ಮಾಡುವ ದಂಧೆಗೆ ಬಳಸಿಕೊಳ್ಳುತ್ತಾರೆ. ಇವರಿಗೆ ಕಾನೂನು, ಮಾನವೀಯತೆ, ಸಮಾಜ, ದೇಶ,  ಮೌಲ್ಯಗಳು ಯಾವು ಬೇಕಾಗುವುದಿಲ್ಲ. ಅವರಿಗೆ ಕಾಣುವುದು ಕೇವಲ ದುಡ್ಡು, ಹಾಗಾಗಿಯೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಇದ್ದರೂ, ಇಲ್ಲದಿದ್ದರೂ, ಔಷಧಗಳಿದ್ದರೂ, ಇಲ್ಲದಿದ್ದರೂ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಆರೋಗ್ಯಾಧಿಕಾರಿಗಳು ಆರಾಮಾಗಿ ತಮ್ಮ ಮನೆಯಲ್ಲಿ ನಿದ್ದೆ ಮಾಡುತ್ತಾರೆ!

Bed Block ದಂಧೆ‌ ಮತ್ತು ರಾಜಕಾರಣಿಗಳು
ಸಾಲು ಸಾಲಾಗಿ ಹೆಣಗಳು ಬಿದ್ದರೂ, Bed Block ಮಾಡಿದರೆ ಅನೇಕ ಜನರಿಗೆ ತೊಂದರೆ ಆಗುತ್ತದೆ ಎಂದು ಗೊತ್ತಿದ್ದರೂ‌ ಸಹ ರಾಜಾರೋಷವಾಗಿ ದುಡ್ಡು ಮಾಡುವ ದಂಧೆಗೆ ಇಳಿದು ಏನು ಆಗಿಲ್ಲಾ ಎನ್ನುವ ಹಾಗೆ ಅಧಿಕಾರಿವರ್ಗ ಇರುತ್ತದೆ. ಜನರಿಗೆ ಎಷ್ಟೇ ಸಮಸ್ಯೆಗಳಿದ್ದರೂ ಸಹ ತಾವು ಏನೂ ತಲೆ ಕೆಡಸಿಕೊಳ್ಳುವುದಿಲ್ಲಾ! ಏಕೆಂದರೆ ಅವರಿಗೆ ಚೆನ್ನಾಗಿ ಗೊತ್ತು ಅವರ ಇಲಾಖೆಗೆ ಸಂಬಂಧಪಟ್ಟ ಮಂತ್ರಿಯಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ಯಾರೂ ಬಂದು ಅವರನ್ನು ಪ್ರಶ್ನೆ ಮಾಡುವುದಿಲ್ಲ. ಈ ಭ್ರಷ್ಟ ಅಧಿಕಾರಿಗಳಿಗೆ ಅವರ ಮೇಲೆ ಯಾವುದೇ ಕ್ರಮ ಜರಗಿಸುವುದಿಲ್ಲಾ ಎಂದು ಸಹ ಚೆನ್ನಾಗಿ ಗೊತ್ತಿದೆ. ಏಕೆಂದರೆ ಅವರು ಕೂಡ Part of the Crime!  ಅನೇಕ ಬಾರಿ ಅಧಿಕಾರಿಗಳು ನೇರವಾಗಿ ಜನರಿಗೆ ಧಮಕಿ ಹಾಕುವುದನ್ನು ನೋಡಿದ್ದೇವೆ , ಯಾರಿಗೆ ಹೇಳುತ್ತೀರೋ ಹೇಳಿ, I don’t care ಅನ್ನುವ ಮಾತುಗಳನ್ನು ಕೇಳಿದ್ದೇವೆ, ಅವರ ಈ ದರ್ಪಕ್ಕೆ ಕಾರಣ ಅವರು ಕೊಟ್ಟಿರುವ ಹಣ.

ಇನ್ನು ರಾಜಕಾರಣಿಗಳಂತೂ Medical Emergency ಸಮಯದಲ್ಲಿ ಬೀದಿಗಿಳಿದು ಜನರ ಹಿತ ಕಾಯಬೇಕಿತ್ತು. ಆದರೆ ಅವರೂ ಸಹ ಬೆಚ್ಚಗೆ ಕುಳಿತು ಫೋನಿನಲ್ಲಿಯೇ ವ್ಯವಹಾರ ಮುಗಿಸಿಕೊಂಡು ಆರಾಮವಾಗಿ ಸುರಕ್ಷಿತವಾಗಿ ಇದ್ದಾರೆ. ಮತದಾರರು ಮಾತ್ರ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ, ವೆಂಟಿಲೇಟರ್ ಇಲ್ಲದೆ, ರೆಮಿಡಿಸಿವಿರ್ ನಂತಹ ಔಷಧಗಳು ಸಿಗದೆ ಬೀದಿ ಬೀದಿಗಳಲ್ಲಿ ಹೆಣವಾಗುತ್ತಿದ್ದಾರೆ.

 

ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳು ಅನೇಕ ಜನಪರವಾದ ಕಾನೂನುಗಳು ಹಾಗು ಯೋಜನೆಗಳನ್ನು ತಂದಿವೆ. ಆದರೆ ಯಾವುದೇ ಕಾರ್ಯಕ್ರಮವಾಗಲಿ, ಯೋಜನೆಗಳಾಗಲಿ ಸರಿಯಾಗಿ ಜಾರಿಯಾಗದೆ ಇರಲು ಕಾರಣ ಇದೇ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು! ಬಹುಶಃ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳನ್ನು ಪ್ರತಿ ವರ್ಷ ಶೇಕಡಾ 1% ಜಾರಿ ಮಾಡಿದ್ದರೂ ಇಷ್ಟೊತ್ತಿಗಾಗಲೆ ದೇಶದಲ್ಲಿ ಶೇಕಡಾ 75% ಜನ ಬಡತನದಿಂದ ಮುಕ್ತಿ ಹೊಂದಿರುತಿದ್ದರು.  ಜೊತೆಗೆ ಶೇಕಡಾ ನೂರಕ್ಕೆ ನೂರರಷ್ಟು ಸಾಕ್ಷರತೆಯನ್ನು ಸಾಧಿಸಿ ಇಂದು ದೇಶ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದಿತ್ತು. ಇಂದಿಗೂ ಸರ್ಕಾರದ ಕಾರ್ಯಕ್ರಮಗಳು ಹಾಗು ಯೋಜನೆಗಳು ಕೇವಲ ಕಾಗದದಲ್ಲಿ ಮಾತ್ರ ರಾರಾಜಿಸುತ್ತಿರಲು ಇದೇ ಭ್ರಷ್ಟ ಅಧಿಕಾರಿಗಳೆ ಕಾರಣ. ಈ ಭ್ರಷ್ಟ ಅಧಿಕಾರಿಗಳು ಸರ್ಕಾರದ ಪ್ರಮುಖ ಹುದ್ದೆಗಳಲ್ಲಿರಲು ಭ್ರಷ್ಟ ರಾಜಕಾರಣಿಗಳು ಕಾರಣ!  ಈ ಭ್ರಷ್ಟ ರಾಜಕಾರಣಿಗಳು ಶಾಸಕರು, ಸಂಸದರು, ಮಂತ್ರಿಗಳು , ಮುಖ್ಯ ಮಂತ್ರಿಗಳಾಗಲು ಭ್ರಷ್ಟ ಮತದಾರರು ಕಾರಣ. ಚುನಾವಣೆಯ ಸಂದರ್ಭದಲ್ಲಿ ₹ 500, ಸೀರೆ, ಪಂಚೆ, ರವಿಕೆ, ಮೂಗುತಿ, ಬಿರಿಯಾನಿ, ಮದ್ಯಕ್ಕೆ ತಮ್ಮ ಮತವನ್ನು ಮಾರಿಕೊಂಡರೆ ತಾವು ಚುನಾಯಿಸುವ ಈ ಭ್ರಷ್ಟ ರಾಜಕಾರಣಿಗಳು ದೇಶವನ್ನೆ ಮಾರಾಟ ಮಾಡುತಿದ್ದಾರೆ.  ಇಲ್ಲಿ ಮತದಾರನಿಗೆ ಕೇವಲ ₹500 ಸಿಗಬಹುದು, ರಾಜಕಾರಣಿಗಳಿಗೆ ಹತ್ತಾರು, ನೂರಾರು ಕೋಟಿ ಸಿಗಬಹುದು ಅಷ್ಟೇ! ಈ ವ್ಯವಹಾರದಲ್ಲಿ ನಾಶವಾಗುತ್ತಿರುವುದು ಮಾತ್ರ ನಮ್ಮ ದೇಶ! ಹೀಗೆ ಚುನಾವಣೆಯ ಸಮಯದಲ್ಲಿ ಮತದಾರರಿಂದ  ಪ್ರಾರಂಭವಾಗುವ ಭ್ರಷ್ಟಾಚಾರ ನಂತರದಲ್ಲಿ ರಾಜಕಾರಣಿಗಳು, ಅಧಿಕಾರಿಗಳು,  ಕೊನೆಯದಾಗಿ ಇಡೀ ವ್ಯವಸ್ಥೆಯ ನಾಶದ ಹಂತಕ್ಕೆ ಬಂದು ತಲುಪುತ್ತದೆ.

ಇಂದಿನ ಹಣಕಾಸಿನ ಭ್ರಷ್ಟಾಚಾರಕ್ಕೆ ಮೂಲ ಕಾರಣ ನಮ್ಮ ಮಾನಸಿಕ ಭ್ರಷ್ಟಾಚಾರ.  ಭ್ರಷ್ಟಾಚಾರ ಎಂದರೆ ಅದು ಕೇವಲ ಹಣಕ್ಕೆ ಸಂಬಂಧಿಸಿದ್ದು ಮಾತ್ರವಲ್ಲಾ ಅದು ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ನಮ್ಮ ಎಲ್ಲಾ ಭ್ರಷ್ಟ- ಆಚಾರಗಳೇ ಇಂದಿನ ನಮ್ಮ ಹಣಕಾಸಿನ ಭ್ರಷ್ಟಾಚಾರಕ್ಕೆ ಮೂಲ ಕಾರಣ. ನಮ್ಮಲ್ಲಿನ ಭೇದಭಾವಗಳೆ ನಮ್ಮಲ್ಲಿನ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವ ಸಹನೆಯನ್ನು ಕೊಟ್ಟಿದೆ. ಯಾಕೆಂದರೆ ಒಬ್ಬ ವ್ಯಕ್ತಿಯು ನನಗೆ ಭ್ರಷ್ಟನಾಗಿ ಕಾಣುವುದು ಅವನು ನನ್ನದೆ ಜಾತಿ ಅಥವಾ ಧರ್ಮಕ್ಕೆ ಸೇರದೆ ಇದ್ದಾಗ ಮಾತ್ರ. ಅಕಸ್ಮಾತ್ ಅವನು ನನ್ನದೆ ಜಾತಿ ಅಥವಾ ಧರ್ಮಕ್ಕೆ ಸೇರಿದ್ದರೆ ಅವನು ಸಾಚಾ ಆಗಿ ಬಿಡುತ್ತಾನೆ. ಹೀಗಾಗಿ ಇಂದು ನಮ್ಮ ದೇಶ ಈ ಸ್ಥಿತಿಗೆ ಬಂದು ತಲುಪಿದೆ.

ಯುವ ಪೀಳಿಗೆ ಮತ್ತು ಭಾರತದ ಭವಿಷ್ಯ
ಪ್ರತಿ ಸಮಾಜದಲ್ಲೂ ವ್ಯವಸ್ಥೆಯು ಪಾತಾಳಕ್ಕೆ ಕುಸಿದಾಗ ಸರಿಪಡಿಸುವ ಸಾಹಸಕ್ಕೆ ಕೈ ಹಾಕಿರುವುದು ಯುವ ಸಮುದಾಯ ಅಂದರೆ ಯುವಕರು. ಅದರಲ್ಲೂ ಯಾವುದೇ Prejudice ಇಲ್ಲದೆ ಜಾತಿ- ಮತ- ಪಂತ- ಭಾಷೆ- ಪ್ರಾಂತ್ಯ ಎಲ್ಲವನ್ನೂ ಮೀರಿ ಮಾನವೀಯತೆಯ ಉಳಿವಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿಯುವುದು ಇದೇ ಯುವಸಮೂಹ. ಹೊಸ ಹುಮ್ಮಸ್ಸು, ಕನಸು ಹಾಗು ಉತ್ಸಾಹ ತುಂಬಿರುವ ಯುವ ಸಮುದಾಯದಿಂದ ಮಾತ್ರ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ . Outdated ಸಿದ್ದಾಂತ ಮತ್ತು Narrative ಗಳನ್ನು ಮೀರಿ ಹೊಸ ಸಮಾಜ ಕಟ್ಟುವ ಕನಸು ಕಾಣುತ್ತಿರುವ ಯುವ ಪೀಳಿಗೆಯಿಂದ ಮಾತ್ರ ಬದಲಾವಣೆ ಸಾಧ್ಯ. ಕಾಲವು ಪಕ್ವವಾಗಿದೆ, ಕ್ಷೇತ್ರವು ಸಿದ್ದವಾಗಿದೆ, ಇನ್ನೇನಿದ್ದರೂ ಕಾರ್ಯಪ್ರವೃತ್ತರಾಗಬೇಕಷ್ಟೆ. Everything is ready only thing is you have to get ready. ನಮ್ಮ ದೇಶದ ಶೇಕಡಾ 60 ಕ್ಕಿಂತ ಹೆಚ್ಚು ಜನಸಂಖ್ಯೆ ಯುವಕರಿಂದ ತುಂಬಿದೆ. ಇಂದಿನ ಯುವಕರಿಗೆ ಶಿಕ್ಷಣದ ಜೊತೆಗೆ ಹೆಚ್ಚು exposure ಕೂಡ ಇದೆ, ಹಿಂದಿನ ಪೀಳಿಗೆಗೆ ಇಲ್ಲದ ರಾಜಕೀಯ ಪ್ರಜ್ಞೆಯೂ ಇಂದಿನ ಯುವಕರಿಗಿದೆ. ಜೊತೆಗೆ ತಂತ್ರಜ್ಞಾನದ ಅರಿವು ಮತ್ತು ಲಭ್ಯತೆಯು ಇದೆ.  ಜಾತಿವಾದ, ಕೋಮುವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಘೋರತೆಯನ್ನು ಕಂಡು ಅನುಭವಿಸಿದ್ದೇವೆ,  ನಮ್ಮ ಕೈ ಹಿಡಿಯಬಲ್ಲ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಆಶ್ರಯವಿದೆ.  ಇದರೊಟ್ಟಿಗೆ ಬೇಕಿರುವುದು ನಮ್ಮ ಒಗ್ಗಟ್ಟು ಮಾತ್ರ…, ಏನಂತೀರಿ? ಯೋಚಿಸಿದ್ದು ಸಾಕು, ಬನ್ನಿ ಬದಲಾಗೋಣ ಬದಲಾಯಿಸೋಣ. ಭಾರತದ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಕಾರ್ಯತತ್ಪರರಾಗೋಣ. ಭಾರತ , ಭಾರತೀಯ ಮತ್ತು ಭಾರತೀಯತೆಯನ್ನು ಉಳಿಸೋಣ.
ಹರಿರಾಮ್.ಎ
ವಕೀಲರು ಹಾಗು ರಾಜ್ಯ ನಾಯಕರು BPS-ಕರ್ನಾಟಕ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]