
ಚೆನ್ನೈ (16-02-2021): ಭಾರತ ತಂಡವು ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದೆ.
ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಶತಕದ ನೆರವಿನಿಂದ 329 ರನ್ಗಳನ್ನು ಗಳಿಸಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು ಆರ್ ಅಶ್ವಿನ್ ಅವರ ಮಾರಕ ದಾಳಿಗೆ(5/43) ಕೇವಲ 134 ರನ್ಗಳಿಗೆ ಸರ್ವಪತನ ಕಂಡಿತು. 195 ರನಗಳ ಮುನ್ನಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾತರ ಆರ್ ಅಶ್ವಿನ್ ಶತಕ ಹಾಗೂ ನಾಯಕ ಕೊಹ್ಲಿಯ ಅರ್ಧಶತಕದ ನೆರವಿನಿಂದ 286 ರನ್ ಗಳಿಸಿತು. ಇಂಗ್ಲೆಂಡ್ ತಂಡಕ್ಕೆ ಒಟ್ಟಾರೆ 482 ರನ್ಗಳ ಟಾರ್ಗೆಟ್ ನೀಡಿತು.
ಆದರೆ ಭಾರತೀಯ ಸ್ಪಿನ್ನರ್ ಗಳಾದ ಅಕ್ಷರ್ ಪಟೇಲ್ (5/60) ಆರ್, ಅಶ್ವಿನ್ (3/53) ಮತ್ತು ಕುಲದೀಪ್ ಯಾದವ್ (2/25) ಅವರ ಮೊನಚಿನ ದಾಳಿಗೆ ಕೇವಲ 164ರನ್ಗಳಿಗೆ ಕುಸಿದ ಇಂಗ್ಲೆಂಡ್ ತಂಡವು 317 ರನ್ಗಳ ಅಂತರದಿಂದ ಸೋಲನ್ನು ಅನುಭಸಿತು.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿತ್ತು. ಎರಡನೇ ಪಂದ್ಯವನ್ನು ಭಾರತ ಗೆದ್ದಿರುವುದರಿಂದ ಸರಣಿ 1-1ರಿಂದ ಸಮವಾಗಿದೆ.