Saturday, April 4 , 2020
ಬೌನ್ಸರ್ ನ ಮೇಲೆ ಗರಂ ಆಗಿ ತಲೆಯ ಮೇಲೆ ಹೊಡೆದ ‘ಡಿ ಬಾಸ್’ ದರ್ಶನ್!

ಸಿನಿಡೆಸ್ಕ್: ಅಭಿಮಾನಿಗಳ ‘ಡಿ ಬಾಸ್’ ದರ್ಶನ್ ಅವರು, ತಮ್ಮ ಹುಟ್ಟು ಹಬ್ಬ ಆಚರಣೆಯ ವೇಳೆ ತನ್ನ ಬೌನ್ಸರ್ ವಿರುದ್ಧ ಗರಂ ಆಗಿದ್ದು, ಬೌನ್ಸರ್ ನ ತಲೆಯ ಮೇಲೆ ಹೊಡೆದು ಬೌನ್ಸರ್ ಮಾಡಿದ ಕೆಲಸಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

43ನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿರುವ ದರ್ಶನ್ ಅವರು ತಮ್ಮ ಅಭಿಮಾನಿಗಳಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ಪಡೆಯುತ್ತಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ದರ್ಶನ್ ಅವರನ್ನು ನೋಡಿ, ಹುಟ್ಟು ಹಬ್ಬದ ಶುಭಾಶಯ ಹೇಳಲು ಆಗಮಿಸಿದ್ದ ಅಭಿಮಾನಿಗಳು ಸರತಿ ಸಾಲಿನಲ್ಲಿ ಬಂದು ದರ್ಶನ್ ಅವರ ಕೈ ಕುಲುಕಿ ಶುಭಾಶಯ ಕೋರುತ್ತಿದ್ದರು.

ದರ್ಶನ್ ಅವರ ಕೈಕುಲುಕಿ ವಿಶ್ ಮಾಡುತ್ತಿದ್ದ ಅಭಿಮಾನಿಗಳು ಬಹಳ ದೊಡ್ಡ ಸಂಖ್ಯೆಯಲ್ಲಿದ್ದರಿಂದಾಗಿ ಬೌನ್ಸರ್, ಅಭಿಮಾನಿಗಳು ಬರುತ್ತಿದ್ದಂತೆಯೇ ಅವರು ವಿಶ್ ಮಾಡುವುದಕ್ಕೂ ಮೊದಲು ಮುಂದೆ ತಳ್ಳುತ್ತಿದ್ದ. ಇದನ್ನು ಗಮನಿಸಿದ ದರ್ಶನ್ ಬೌನ್ಸರ್ ಮೇಲೆ ಗರಂ ಆಗಿದ್ದಾರೆ. ತಕ್ಷಣವೇ ಬೌನ್ಸರ್ ನ ತಲೆಗೆ ಮೆಲ್ಲಗೆ ಹೊಡೆದು, ಈ ರೀತಿ ಯಾಕೆ ಮಾಡುತ್ತಿದ್ದಿ ಎಂದು ಸ್ಥಳದಲ್ಲೇ ತರಾಟೆಗೆತ್ತಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಕಮೆಂಟ್ ಗಳು ಬಂದಿವೆ. ದೂರದ ಊರುಗಳಿಂದ ಬರುತ್ತಿರುವ ಅಭಿಮಾನಿಗಳು ಈಗಾಗಲೇ ಭಾರೀ ಸಂಖ್ಯೆಯಲ್ಲಿ ದವಸ-ಧಾನ್ಯಗಳನ್ನು ಮೂಟೆ ಕಟ್ಟಿಕೊಂಡು ಬಂದು ದರ್ಶನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ದವಸ ಧಾನ್ಯಗಳನ್ನು ದರ್ಶನ್ ಅವರು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಾಗಿಸುವ ಕೆಲಸವನ್ನು ಪ್ರತೀ ಬಾರಿಯ ತಮ್ಮ ಹುಟ್ಟು ಹಬ್ಬದ ದಿನದಂದು ಮಾಡುತ್ತಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]