Monday, July 26 , 2021
ಬೇರೆ ಪಕ್ಷದ ನಾಯಕರು ಮತ ಕೇಳಿದರೆ ಅಗೌರವ ತೋರಿಸಬೇಡಿ | ಬಿಎಸ್ ಪಿಗೆ ಮತ ನೀಡಿ ಗೆಲ್ಲಿಸಿ | ಡಾ.ಶಿವಕುಮಾರ್

ಮತಭಾರತ 

ವಿಶೇಷ ವರದಿ: ಗಣೇಶ್ ಕೆ.ಪಿ.

ಹೆಚ್ ಡಿ ಕೋಟೆ(21.03.2019): ಬೇರೆ ಪಕ್ಷದ ನಾಯಕರು ನಿಮ್ಮ ಮನೆಗಳಿಗೆ ಓಟು ಕೇಳಲು ಬಂದರೆ ಅವರಿಗೆ ಗೌರವ ಕೊಡಿ. ಅವರಿಗೆ ಅವಮಾನವಾಗುವಂತೆ ನಡೆದುಕೊಳ್ಳಬೇಡಿ. ಆದರೆ ಈ ಬಾರಿ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ)ಗೆ ಓಟು ನೀಡಿ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿ ಡಾ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಗುರುವಾರ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದ ಬಿಎಸ್ ಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನೀವು ಬಿಎಸ್ ಪಿ ಅಭ್ಯರ್ಥಿಯಾಗಿ ಯಾವ ಆಶ್ವಾಸನೆಯನ್ನು ನೀಡುತ್ತೀರಿ ಎಂದು ಮಾಧ್ಯಮದವರು ಕೇಳಿದ್ದರು. ಆದರೆ, ಆಶ್ವಾಸನೆ ಎಂದರೆ ಸುಳ್ಳು ಎನ್ನುವ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೃಷ್ಟಿ ಮಾಡಿದ್ದಾರೆ. ಆಶ್ವಾಸನೆಗೆ ಈಗ ಬೆಲೆಯೇ ಇಲ್ಲ ಎಂದು ಅವರು ಹೇಳಿದರು.

ಶ್ರಿನಿವಾಸ್ ಪ್ರಸಾದ್, ಧ್ರುವನಾರಾಯಣ್ ಯಾರದ್ದೋ ಮನೆಗೆ ಕಲ್ಲು-ಮಣ್ಣು ಹೊರುತ್ತಿದ್ದಾರೆ!

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ  ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವರನ್ನು ನೋಡುವಾಗ ನಮಗೆ ಅವರು ನಮ್ಮವರು ಎಂದು ಅನ್ನಿಸುತ್ತದೆ. ಆದರೆ ಅವರು ಸ್ಪರ್ಧಿಸಿರುವ ಪಕ್ಷಗಳ ಹೈಕಮಾಂಡ್ ಯಾರೆಂದು ನೋಡಿದರೆ ಅವರು ನಮ್ಮವರಲ್ಲ. ಧ್ರುವನಾರಾಯಣ್ ಗೆ ಓಟು ಹಾಕಿದರೆ ಅದರ ಲಾಭವನ್ನು ಪಡೆದುಕೊಳ್ಳುವುದು ಕಾಂಗ್ರೆಸ್ ಕುಟುಂಬ. ಶ್ರೀನಿವಾಸ್ ಪ್ರಸಾದ್ ಅವರಿಗೆ ಓಟು ಹಾಕಿದರೆ ಅದರ ಲಾಭವನ್ನು ಪಡೆದುಕೊಳ್ಳುವುದು ಆರೆಸ್ಸೆಸ್ ನೇತೃತ್ವದ ಬಿಜೆಪಿ. ಆದರೆ, ಬಿಎಸ್ ಪಿಗೆ ಓಟು ಹಾಕಿದರೆ, ದೇಶದ ರೈತರ, ಹಿಂದುಳಿದವರ, ಶೋಷಿತರ, ಬಡವರ ನಿಜವಾದ ಪ್ರತಿನಿಧಿಯಾಗಿರುವ ಮಾಯಾವತಿ ಅವರ ನೇತೃತ್ವದ ಬಿಎಸ್ ಪಿಗೆ ಎಂದ ಅವರು, ಧ್ರುವನಾರಾಯಣ್ ಹಾಗೂ ಶ್ರೀನಿವಾಸ್ ಪ್ರಸಾದ್ ಯಾರದ್ದೋ ಮನೆ ಕಟ್ಟಲು ಕಲ್ಲು -ಮಣ್ಣು ಹೊರುತ್ತಿದ್ದಾರೆ. ಆದರೆ ಬಿಎಸ್ ಪಿ , ದೇಶದ ರೈತರ, ಹಿಂದುಳಿದವರ, ಶೋಷಿತರ, ಬಡವರ ಮನೆ ಕಟ್ಟಲು  ಕಲ್ಲು -ಮಣ್ಣು ಹೊರುತ್ತಿದೆ ಎಂದು ಅವರು ಹೇಳಿದರು.

ಮಾಯಾವತಿ ಪ್ರಧಾನಿಯಾಗಲು ಇದು ಸುವರ್ಣಾವಕಾಶ

ಮಾಯಾವತಿ ಅವರು ಪ್ರಧಾನಿಯಾಗಲಿದ್ದಾರೆ ಎಂದು ಬಿಎಸ್ ಪಿಯವರು ಹೇಳಿದಾಗ ಬೇರೆ ಪಕ್ಷದವರು ವ್ಯಂಗ್ಯ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಬಿಎಸ್ ಪಿಯವರು ಪ್ರಾಕ್ಟಿಕಲ್ ಆಗಿ ಮಾತನಾಡುತ್ತಿದ್ದಾರೆ. 80 ಸೀಟುಗಳಿರುವ ಉತ್ತರಪ್ರದೇಶದಲ್ಲಿ ಕಳೆದ ಚುನಾವಣೆಯಲ್ಲಿ ಎಸ್ ಪಿ-ಬಿಎಸ್ ಪಿ ಸ್ವತಂತ್ರವಾಗಿ ಸ್ಪರ್ಧಿಸಿರುವುದರಿಂದಾಗಿ ಸೆಕ್ಯುಲರ್ ಓಟುಗಳು ವಿಭಜನೆಗೊಂಡವು. ಹಾಗಾಗಿ ಬಿಜೆಪಿ ಅಲ್ಲಿ ಹೆಚ್ಚಿನ ಸೀಟುಗಳನ್ನು ಪಡೆಯಿತು. ಆದರೆ, ಈ ಬಾರಿ ಬಿಎಸ್ ಪಿ –ಎಸ್ ಪಿ ಮೈತ್ರಿ ಚುನಾವಣೆಯನ್ನು ಎದುರಿಸುತ್ತಿದೆ. ಹಾಗಾಗಿ ಈ ಎರಡೂ ಪಕ್ಷಗಳ ಓಟುಗಳು ವಿಭಜನೆಯಾಗುವುದಿಲ್ಲ. ಇಲ್ಲಿ ಈ ಮಹಾಮೈತ್ರಿ 71ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಕಳೆದ ಚುನಾವಣೆಯಲ್ಲಿ ಇಡೀ ದೇಶದಲ್ಲೇ ದೊಡ್ಡ ಪಕ್ಷ ಎನ್ನುವ ಕಾಂಗ್ರೆಸ್ ಕೇವಲ 40 ಸೀಟುಗಳನ್ನು ಪಡೆದುಕೊಂಡಿತ್ತು. ಹಾಗಾಗಿ ಅವರು ಈ ಬಾರಿ ಉತ್ತರಪ್ರದೇಶದಲ್ಲಿ ಗೆಲ್ಲಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಈ ಬಾರಿ ದೇಶದ ರಾಜಕಾರಣದಲ್ಲಿ ಬಿಎಸ್ ಪಿ ಎಸ್ಪಿ ಮೈತ್ರಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಇದು ಮಾಯಾವತಿ ಪ್ರಧಾನಿಯಾಗಲು ಸುವರ್ಣಾವಕಾಶ ಈ ಅವಕಾಶವನ್ನು ಕಳೆದುಕೊಳ್ಳಬಾರದು. ಹಾಗಾಗಿ ಕರ್ನಾಟಕದಿಂದಲೂ ಮಾಯಾವತಿ ಅವರು ಪ್ರಧಾನಿಯಾಗಲು ದುಡಿಯಬೇಕು ಎಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದರು.

ಚಾಮರಾಜನಗರದ ನಾಡಿಮಿಡಿತ ಅರಿತಿದ್ದೇನೆ | ಇದು ಬಹಳ ಪವಿತ್ರ ಕ್ಷೇತ್ರ

18 ವರ್ಷಗಳಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಜನರ ನಾಡಿ ಮಿಡಿತವನ್ನು ಅರಿತಿದ್ದೇನೆ. ನಾನು ಚಾಮರಾಜನಗರ ಜಿಲ್ಲೆಯ ಯುವಕರ ಸಮಸ್ಯೆಗಳನ್ನು, ರೈತರ ಸಮಸ್ಯೆಗಳನ್ನು ಅರಿತವನು. ಹಾಗಾಗಿ ನನ್ನ ತನು ಮನ ಧನವನ್ನು ಒತ್ತೆಯಿಟ್ಟು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಈ ಕ್ಷೇತ್ರವು ಮಲೆಮಾದೇಶ್ವರ, ಮಂಟೇಸ್ವಾಮಿಯಂತಹ ಮಹಾನುಭವರು ಹುಟ್ಟಿದ ಪವಿತ್ರ ಕ್ಷೇತ್ರ, ಇಂತಹ ಕ್ಷೇತ್ರ ಇಂದು ಕಾಂಗ್ರೆಸ್ ನ ದುರಾಡಳಿತದಿಂದಾಗಿ ಹಿಂದುಳಿಯುವ ಪರಿಸ್ಥಿತಿ ಬಂದಿದೆ. ಈ ಕಾರಣಕ್ಕಾಗಿ ಇಂದು ಬಿಎಸ್ ಪಿ ಇಲ್ಲಿ ಸ್ಪರ್ಧಿಸಿದೆ. ಹಾಗಾಗಿ ಬಿಎಸ್ ಪಿ ಕಾರ್ಯಕರ್ತರು ಈ ಬಾರಿ ಬಿಎಸ್ ಪಿ ಗೆಲುವಿಗೆ ಶ್ರಮಿಸಬೇಕಿದೆ. ಬೇರೆ ಪಕ್ಷಗಳ ಕಾರ್ಯಕರ್ತರ ಜೊತೆಗೆ ವಾದಗಳನ್ನು ಮಾಡಲು ಹೋಗದೇ ಬಿಎಸ್ ಪಿಯ ಗೆಲುವಿಗಾಗಿ ಶ್ರಮಿಸಿ ಎಂದು ಶಿವಕುಮಾರ್ ಹೇಳಿದರು.

ಈ ಸಂದರ್ಭ ಕಾಂಗ್ರೆಸ್ ಪಕ್ಷ ತೊರೆದು  ಗ್ರಾಮಪಂಚಾಯತಿ ಸದಸ್ಯ ಮಹದೇವಸ್ವಾಮಿ ಅವರು ಬಿಎಸ್ ಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಮಾಜಿ ಶಿಕ್ಷಣ ಸಚಿವ, ಹಾಲಿ ಶಾಸಕ ಎನ್.ಮಹೇಶ್ ಪಕ್ಷದ ಪಕ್ಷಕ್ಕೆ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಮೈಸೂರು ಬಿಎಸ್ಪಿ ವಲಯ ಉಸ್ತುವಾರಿ ಕರಾಟೆ ಸಿದ್ದರಾಜು, ಬಿಎಸ್ಪಿ ಮೈಸೂರು ವಿಭಾಗ ಉಸ್ತುವಾರಿ ರಾಹುಲ್ ಹಾಗೂ ಮುಖಂಡರಾದ ಪ್ರಭುಸ್ವಾಮಿ ಸೇರಿದಂತೆ ಹಲವು ಬಿಎಸ್ ಪಿ ಪ್ರಮುಖರು ಭಾಗವಹಿಸಿದ್ದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]