Monday, July 26 , 2021
ಬಿಜೆಪಿ ಹೈಕಮಾಂಡ್ ಗಳಲ್ಲಿಯೇ ಬಂಡಾಯ? | ಮೋದಿ, ಶಾ ಟೀಂಗೆ ತಿರುಗೇಟು ನೀಡಲು ಹಿರಿಯರ ಟೀಂ ಸಜ್ಜು?

ಮತಭಾರತ

ವಿಶೇಷ ವರದಿ: ಗಣೇಶ್ ಕೆ.ಪಿ.

ನವದೆಹಲಿ(24.03.2019): ಪ್ರಧಾನಿ ನರೇಂದ್ರ ಮೋದಿ ಯಾಕೆ ಎಲ್.ಕೆ.ಅಡ್ವಾಣಿ ಅವರನ್ನು ಇಷ್ಟು ದೂರವಿಡುತ್ತಿದ್ದಾರೆ. ಈ ಬಾರಿ ಉದ್ದೇಶ ಪೂರ್ವಕವಾಗಿಯೇ ಎಲ್.ಕೆ.ಅಡ್ವಾಣಿ ಅವರನ್ನು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗಿಡಲಾಯಿತೇ? ಪ್ರಧಾನಿ ಮೋದಿ ಬಿಜೆಪಿಯಲ್ಲಿ ತನಗೆ ವಿರೋಧಿಗಳೇ ಇರಬಾರದು ಎನ್ನುವ ಕಾರಣಕ್ಕಾಗಿ ಅಡ್ವಾಣಿ ಅವರನ್ನು ಮೂಲೆ ಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆಯೆ? ಇದೇ ಮೊದಲಾದ ಪ್ರಶ್ನೆಗಳು ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ಕೇಳಿ ಬರುತ್ತಿದೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಪಕ್ಷಗಳೊಳಗೆ ಅಸಮಾಧಾನದ ಹೊಗೆಯಾಡುವುದು ಸಹಜ. ಆದರೆ, ಎಲ್.ಕೆ.ಅಡ್ವಾಣಿ ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಎದ್ದಿರುವ ಅಸಮಾಧಾನ ಇಂದು ನಿನ್ನೆಯದ್ದಲ್ಲ. ಮೋದಿ ಪ್ರಧಾನಿಯಾದ ಬಳಿಕ ಬಹಿರಂಗ ಸಭೆಯಲ್ಲಿಯೇ ಎಲ್.ಕೆ.ಅಡ್ವಾಣಿ ಅವರಿಗೆ ಅವಮಾನ ಮಾಡಿರುವುದು ಈ ಹಿಂದೆಯೇ ಬಿಜೆಪಿ ಕಾರ್ಯಕರ್ತರಿಗೆ ನೋವುಂಟು ಮಾಡಿತ್ತು. ಆದರೂ ದೇಶ ಭಕ್ತಿ ಮೊದಲಾದ ವಿಚಾರಗಳಲ್ಲಿ ಮೋದಿ ಮಾಡುತ್ತಿದ್ದ ಭಾಷಣಗಳೂ ಎಲ್ಲೋ ಸಮರ್ಥ ನಾಯಕ ಎನ್ನುವ ಭ್ರಮೆಯನ್ನು ಹುಟ್ಟಿಸಿತ್ತು. ಆದರೆ, ಇದೀಗ ಮೋದಿ ಆಡಳಿತ ಕೊನೆಗೊಂಡ ಬಳಿಕವೂ ಎಲ್.ಕೆ.ಅಡ್ವಾಣಿಯನ್ನು ಶತ್ರುವಿನಂತೆ ಕಾಣುತ್ತಿರುವುದು ಈಗ ಬಿಜೆಪಿಯೊಳಗೆ ಪ್ರಧಾನಿ ಮೋದಿಯ ನಿಲುವುಗಳ ಬಗ್ಗೆ ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ.

ಬಿಜೆಪಿಯಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನಾಯಕತ್ವದಲ್ಲಿ ಹಿರಿಯ ನಾಯಕರನ್ನು ಮೂಲೆ ಗುಂಪು ಮಾಡಿ, ತಾವೇ ಸರ್ವಾಧಿಕಾರಿಗಳು ಎಂದು ಐದು ವರ್ಷ ಮೆರೆದಿರುವುದರ ಬಗ್ಗೆ ಭಾರೀ ಅಸಮಾಧಾನವಿದೆ. ಅದರಲ್ಲೂ ಎಲ್.ಕೆ.ಅಡ್ವಾಣಿಯವರನ್ನು ಮೂಲೆ ಗುಂಪು ಮಾಡಿರುವ ಬಗ್ಗೆಯೂ ಅಸಮಾಧಾನಗಳಿವೆ. ಎಲ್.ಕೆ.ಅಡ್ವಾಣಿ ಹಿಂದೆ ಆರೆಸ್ಸೆಸ್ ಇದ್ದರೂ ಮೋದಿ, ಶಾ ಕ್ಯಾರೇ ಅಂದಿಲ್ಲ. ಈಗಲೂ ಬಿಜೆಪಿಯಲ್ಲಿ ಎಲ್.ಕೆ.ಅಡ್ವಾಣಿಗೆ ಯಾವುದೇ ಮಹತ್ವ ನೀಡಲು ಈ ಜೋಡಿ ಬಿಡುತ್ತಿಲ್ಲ. ಮುಖ್ಯವಾಗಿ ಈ ಬಾರಿ ಬಿಜೆಪಿ ಗೆದ್ದರೆ ಪ್ರಧಾನಿ ಅಭ್ಯರ್ಥಿಯನ್ನು ಬದಲಾಯಿಸುವ ಮಾತುಗಳು ಬಿಜೆಪಿಯೊಳಗಿಂದ ಕೇಳಿ ಬರುತ್ತಿದೆ. ಈ ಕಾರಣಕ್ಕಾಗಿ ಎಲ್.ಕೆ.ಅಡ್ವಾಣಿಗೆ ಟಿಕೆಟ್ ನೀಡಲು ಮೋದಿ, ಶಾ ಪ್ಲಾನ್ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತವಾಗಿದೆ.

ಎಲ್ ಕೆ ಅಡ್ವಾಣಿ ಅವರ ಗಾಂಧಿನಗರ ಕ್ಷೇತ್ರದಿಂದ ಅಮಿತ್ ಶಾ ಅವರಿಗೆ ಟಿಕೆಟ್ ನೀಡಲಾಗಿದೆ. ಶತ್ರುಘ್ನ  ಸಿನ್ಹಾ ಪ್ರತಿನಿಧಿಸುತ್ತಿದ್ದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡಲಾಗಿದೆ ಇದರಿಂದಾಗಿ ಬಿಜೆಪಿಯಲ್ಲಿ ಪಕ್ಷದ ಮೇಲ್ಮಟ್ಟದಲ್ಲಿಯೇ ಬಂಡಾಯ ಏಳುವ ಸಾಧ್ಯಗಳು ಕಂಡು ಬಂದಿದೆ. ಈಗಾಗಲೇ ಈ ಕುರಿತು ಹೇಳಿಕೆ ನೀಡಿರುವ ಶತ್ರುಘ್ನ ಸಿನ್ಹಾ,  ಎಲ್.ಕೆ.ಅಡ್ವಾಣಿಯವರನ್ನು ಮೂಲೆಗುಂಪು ಮಾಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಜೊತೆಗೆ ಇದು ನೋವಿನ ಸಂಗತಿ ಎಂದು ಹೇಳಿದ್ದಾರೆ.

ಮೋದಿ, ಶಾ ಪಕ್ಷದೊಳಗೇ ರಾಜಕೀಯ ಮಾಡಲು ಆರಂಭಿಸಿದ್ದು, ಇದೀಗ ಇವರ ರಾಜಕೀಯಕ್ಕೆ ತಿರುಗೇಟು ಕೊಡಬಲ್ಲ ಸಾಮರ್ಥ್ಯ ಪಕ್ಷದ ಹಿರಿಯ ಮುಖಂಡರಿಗಿದೆ ಎನ್ನುವ ಹೇಳಿಕೆಗಳು ಬಿಜೆಪಿಯೊಳಗಿಂದ ಕೇಳಿ ಬರುತ್ತಿದೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿರುವ ಸಂದರ್ಭದಲ್ಲಿ ಬಿಜೆಪಿಯೊಳಗೆ ಇಂತಹದ್ದೊಂದು ಬೆಳವಣಿಗೆ ನಡೆದಿದೆ. ಮೋದಿ, ಶಾ ಟೀಂಗೆ ಎದಿರೇಟು ಕೊಡಲು ಒಳಗಿಂದೊಳಗೆ ಹಿರಿಯರ ಟೀಂ ಸಜ್ಜಾಗಿವೆ ಎನ್ನುವ ಮಾತುಗಳು ಪಕ್ಷದ ಮುಖಂಡರಿಂದಲೇ ಕೇಳಿ ಬಂದಿದೆ. ಬಿಜೆಪಿಯ ಹೈಮಾಂಡ್ ಗಳೇ ಬಂಡಾಯ ಏಳಲಿದ್ದಾರೆಯೇ? ಎನ್ನುವ ಪ್ರಶ್ನೆಗಳು ಇದೀಗ ಬಲಗೊಂಡಿವೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]