Monday, July 26 , 2021
ಬಿಎಸ್ ಪಿ ಬಗ್ಗೆ ಮಾತನಾಡುವುದಿಲ್ಲ ಎಂದವರನ್ನು ಮಾತನಾಡಿಸಿದ ಆ ಮಹಾಮೈತ್ರಿ

ಲಕ್ನೋ(16.03.2019): ಈ ಬಾರಿ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ದೇಶದಲ್ಲಿ ಹಲವು ರಾಜಕೀಯ ಅಚ್ಚರಿಗಳಿಗೆ ಕಾರಣವಾಗಿದೆ. ದೇಶದಲ್ಲಿ ಹಣ ಬಲ ಚುನಾವಣೆ ಗೆಲ್ಲುವುದು ಬಹಳ ಸುಲಭ. ಆದರೆ ನಿಜವಾಗಿಯೂ ಜನರ ಪ್ರಾಮಾಣಿಕ ಪ್ರಯತ್ನದಿಂದ ಚುನಾವಣೆ ಗೆಲ್ಲುವುದು ಬರೇ ಕನಸು ಎಂದು ಈಗಿನ ರಾಜಕೀಯ ನೇತಾರರೂ ಹೇಳುತ್ತಾರೆ. ಇವುಗಳನ್ನೆಲ್ಲ ನಿಜವಾಗಿಸಲೆಂದೇ ಬಿಎಸ್ ಪಿಯನ್ನು ಕಾನ್ಷೀರಾಮ್ ಸ್ಥಾಪನೆ ಮಾಡಿದ್ದರು. ಇದೀಗ ಬಿಎಸ್ ಪಿ ನೇತೃತ್ವವನ್ನು ವಹಿಸಿಕೊಂಡಿರುವ ಮಾಯಾವತಿ ಕಾನ್ಷೀರಾಮ್ ಅವರ  ಕನಸನ್ನು ನನಸಾಗಿಸಲು ಯಶಸ್ವಿ ಪ್ರಯಾಣವನ್ನು ಆರಂಭಿಸಿದ್ದು, ಬಿಎಸ್ ಪಿ ಬಗ್ಗೆ ಮಾತನಾಡುವುದೇ ಇಲ್ಲ ಎಂದು ಹೇಳುತ್ತಿದ್ದವರೂ ಬೆಚ್ಚಿ ಬಿದ್ದು ಬಿಎಸ್ ಪಿ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ ಎನ್ನುವ ಅಭಿಪ್ರಾಯಗಳನ್ನು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಹಣ ಬಲ VS  ಜನ ಬಲ

ಕಾಂಗ್ರೆಸ್, ಬಿಜೆಪಿ ಹಣ ಬಲದಿಂದಲೇ ಗೆಲ್ಲುತ್ತಾ ಬಂದಿದೆ ಎನ್ನುವ ಮಾತುಗಳು ಇಂದು ನಿನ್ನೆಯದ್ದಲ್ಲ. ಆದರೆ ಈ ಬಾರಿಯ ಚುನಾವಣೆ ಹಣ ಬಲದ ವಿರುದ್ಧ ಜನ ಬಲ ಎನ್ನುವ ಸ್ಥಿತಿಯನ್ನು ಬಿಎಸ್ ಪಿ ನಿರ್ಮಿಸಿದೆ. ದೇಶದ ಎಲ್ಲ ರಾಜ್ಯಗಳಲ್ಲೂ  ಬಿಎಸ್ ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಎಸ್ ಪಿ-ಬಿಎಸ್ ಪಿ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿರುವ ಬೆನ್ನಲ್ಲೇ, ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಾರ್ಟಿಯೂ ಬಿಎಸ್ ಪಿ ಸಿದ್ಧಾಂತಕ್ಕೆ ಮಾರು ಹೋಗಿ ಬಿಎಸ್ ಪಿ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಗೆಲ್ಲಲು ಸಜ್ಜಾಗಿದೆ. ಹಾಗಾಗಿ ಜನ ಬಲದೊಂದಿಗೆ ಬಿಎಸ್ ಪಿ ಅಧಿಕಾರ ಹಿಡಿಯಲು ಮುಂದಾಗಿದ್ದು, ಹಣ ಬಲಕ್ಕೆ ಸರಿಯಾದ ಎದಿರೇಟು ನೀಡಲು ಮುಂದಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.

ಉತ್ತರಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ಶೂನ್ಯ

ಉತ್ತರಪ್ರದೇಶದಲ್ಲಿ ಎಸ್ ಪಿ ಮತ್ತು ಬಿಎಸ್ ಪಿಯ ವೇಗಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಗಳ ಭದ್ರಕೋಟೆಗಳು ನುಚ್ಚುನೂರಾಗುವ ಎಲ್ಲ ಸಾಧ್ಯತೆಗಳು ಕಂಡು ಬಂದಿವೆ. ಉತ್ತರಪ್ರದೇಶದಾದ್ಯಂತ ಬಿಎಸ್ ಪಿ –ಎಸ್ ಪಿ ಮೈತ್ರಿ ಧ್ವಜಗಳು ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಇದರ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ ಎಂದು ಇಂಗ್ಲಿಷ್ ಸುದ್ದಿವಾಹಿನಿಗಳು, ಅಂತರ್ಜಾಲ ಪತ್ರಿಕೆಗಳು ವರದಿ ಮಾಡಿವೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯಾನಾಥ್ ಅಧಿಕಾರ ಪಡೆದ ಬಳಿಕ ಸ್ವರ್ಗ ಎಂದೇ ಕರೆಯಲ್ಪಡುತ್ತಿದ್ದ ಉತ್ತರಪ್ರದೇಶ ನರಕವಾಗಿ ಮಾರ್ಪಟ್ಟಿದೆ ಎಂದು ಇಲ್ಲಿನ ಜನರು ಅಭಿಪ್ರಾಯಪಡುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಒಂದು ಕೋತಿಯನ್ನಿಟ್ಟುಕೊಂಡು ಯೋಗಿ ಆದಿತ್ಯಾನಾಥ್ ರಾಜಕೀಯ ನಡೆಸುತ್ತಿದ್ದಾರೆ. ಇವರಿಗೆ ಮನುಷ್ಯರ ಬೆಲೆ ಗೊತ್ತಿಲ್ಲ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಉತ್ತರಪ್ರದೇಶದಲ್ಲಿ ಯೋಗಿ ಸರಕಾರದ ದುರಾಡಳಿತ ವಿರುದ್ಧದ ಜನಾಕ್ರೋಶ, ಮಾಯಾವತಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳು ಈ ಬಾರಿ ಬಿಎಸ್ ಪಿ-ಎಸ್ ಪಿ ಮೈತ್ರಿ ಗೆಲುವಿಗೆ ಕಾರಣವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಉತ್ತರಪ್ರದೇಶದ ಗೆಲುವೇ ಮಾಯಾವತಿ ಪ್ರಧಾನಿಯಾಗಲು ಸಾಕು

ಉತ್ತರಪ್ರದೇಶದಲ್ಲಿ 80 ಸ್ಥಾನಗಳಿವೆ. ಈ ಸ್ಥಾನಗಳಲ್ಲಿ ಬಿಎಸ್ ಪಿ-ಎಸ್ ಪಿ ಮೈತ್ರಿ ಗರಿಷ್ಠ ಫಲಿತಾಂಶ ದಾಖಲಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಹಾಗಾಗಿ ಉತ್ತರಪ್ರದೇಶದಲ್ಲಿ ಎಸ್ ಪಿ –ಬಿಎಸ್ ಪಿ ಗೆದ್ದರೆ ಇಡೀ ರಾಷ್ಟ್ರ ರಾಜಕಾರಣವನ್ನೇ ನಿಯಂತ್ರಿಸಲು ಸಾಧ್ಯವಾಗುತ್ತದೆ. ಜೊತೆಗೆ ಬೇರೆ ರಾಜ್ಯಗಳಲ್ಲಿ ಬಿಎಸ್ ಪಿ ಗೆದ್ದರೆ ಮಾಯಾವತಿ ಪ್ರಧಾನಿಯಾಗಲು ಯಾವುದೇ ವಿಘ್ನಗಳಿರುವುದಿಲ್ಲ. ಹಾಗಾಗಿಯೇ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ಗೆ ಪ್ರಬಲ ವಿರೋಧಿಯಾಗಿ ಬಿಎಸ್ ಪಿ ಹೊರಹೊಮ್ಮಿದೆ ಎಂದು ಹೇಳಲಾಗುತ್ತಿದೆ.

ಉತ್ತರಪ್ರದೇಶದಾದ್ಯಂತ ಬಿಎಸ್ ಪಿ-ಎಸ್ ಪಿ ಹವಾ

ಉತ್ತರಪ್ರದೇಶದಾದ್ಯಂತ ಎಸ್ ಪಿ-ಬಿಎಸ್ ಪಿಯದ್ದೇ ಹವಾ ಹೆಚ್ಚಿದೆ. ಮೈತ್ರಿ ಬಾವುಟಗಳು ಇದೀಗ ಉತ್ತರಪ್ರದೇಶದಾದ್ಯಂತ ರಾರಾಜಿಸುತ್ತಿದೆ. ವಿಶೇಷ ಚೇತನರೊಬ್ಬರು ತಮ್ಮ ಸೈಕಲ್ ನಲ್ಲಿ ಈ ಬಾವುಟಗಳನ್ನು ಹಾಕಿಕೊಂಡು ಇಡೀ ಉತ್ತರಪ್ರದೇಶದಾದ್ಯಂತ ತಿರುಗಾಡಿ ಬಿಎಸ್ ಪಿ-ಎಸ್ ಪಿ ಮೈತ್ರಿಗೆ ಪ್ರಚಾರ ನೀಡುತ್ತಿದ್ದಾರೆ. ಈ ವರದಿ ಇತ್ತೀಚೆಗೆ ಆಜ್ ತಕ್ ಚಾನೆಲ್ ನಲ್ಲಿ ಪ್ರಸಾರಗೊಂಡಿದೆ. ಉತ್ತರಪ್ರದೇಶದಾದ್ಯಂತ ಈ ಮೈತ್ರಿ ಬಾವುಟಕ್ಕೆ ಬೇಡಿಕೆ ಹೆಚ್ಚಿದ್ದು, ಬಾವುಟಗಳು ಭಾರೀ ಸಂಖ್ಯೆಯಲ್ಲಿ ಖರೀದಿಯಾಗುತ್ತಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ಎಲ್ಲ ಬೆಂಬಲಗಳು ಈ ಹಿಂದೆ ಮಾಯಾವತಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ನೀಡಿದ್ದ ಕೊಡುಗೆಗಳ ಫಲ ಎಂದು ಕರೆಯಲ್ಪಟ್ಟಿದೆ. ಜೊತೆಗೆ ಉತ್ತರಪ್ರದೇಶದಲ್ಲಿ ಯೋಗಿ ನಡೆಸಿದ ದುರಾಡಳಿತದ ವಿರುದ್ಧದ ಕೂಗು ಇಂದು ಬಿಎಸ್ ಪಿ-ಎಸ್ ಪಿಗೆ ಸಿಕ್ಕಿರುವ ವ್ಯಾಪಕ ಬೆಂಬಲ ಎಂದೂ ವಿಮರ್ಶೆಗೊಳಗಾಗಿವೆ.

ಮೈತ್ರಿ ಎಂದರೆ ಎಸ್ ಪಿ-ಬಿಎಸ್ ಪಿಯಂತಿರಬೇಕು

“ಮೈತ್ರಿ ಎಂದರೆ, ಬಿಎಸ್ ಪಿ-ಎಸ್ ಪಿಯಂತಿರಬೇಕು” ಎಂದು ಕೆಲವು ಮಾಧ್ಯಮಗಳು ಬಿಎಸ್ ಪಿ –ಎಸ್ ಪಿ ಮೈತ್ರಿಯನ್ನು ಹೊಗಳಿ ಬರೆದಿವೆ. ಇದಕ್ಕೆ ಮುಖ್ಯ ಕಾರಣವೆಂದರೆ, ಉತ್ತರಪ್ರದೇಶದಲ್ಲಿ ಎಸ್ ಪಿಗೆ ಬಿಎಸ್ ಪಿ ಕಡಿಮೆ ಸೀಟು  ಬಿಟ್ಟುಕೊಡಬಹುದು ಎನ್ನುವ ನಿರೀಕ್ಷೆಯಲ್ಲಿ ಬಹುತೇಕ ಮಾಧ್ಯಮಗಳಿದ್ದವು. ಆದರೆ ಇಲ್ಲಿನ ಲೆಕ್ಕಾಚಾರಗಳನ್ನು ಬಿಎಸ್ ಪಿ ವರಿಷ್ಠೆ ಮಾಯಾವತಿ ತಲೆಕೆಳಗೆ ಮಾಡಿಹಾಕಿದರು. ಮೈತ್ರಿ ಎಂದರೆ ಎರಡು ಪಕ್ಷಗಳು ಪರಸ್ಪರ ಗೌರವದಿಂದ ಜೊತೆಯಾಗಿ ಚುನಾವಣೆ ಎದುರಿಸುವುದು ಎನ್ನುವ ಸಂದೇಶವನ್ನು ಬಿಎಸ್ ಪಿ ರವಾನಿಸಿತು. ಉತ್ತರಪ್ರದೇಶದಲ್ಲಿ ಸಮಾನಾಗಿ ಸೀಟು ಹಂಚಿಕೆ ಮಾಡಿಕೊಂಡ ಬಿಎಸ್ ಪಿ-ಎಸ್ ಪಿ ಮೈತ್ರಿ ಪಕ್ಷಗಳು ಪರಸ್ಪರ ಗೌರವದಿಂದ ನಡೆದುಕೊಂಡವು. ಈ ಕಾರಣಕ್ಕೆ ಎರಡೂ ಪಕ್ಷಗಳ ಕಾರ್ಯಕರ್ತರು ಬಹಳ ಆಸಕ್ತಿಯಿಂದ ಮೈತ್ರಿ ಪಕ್ಷಗಳನ್ನು ಗೆಲ್ಲಿಸಲು ಮುಂದಾಗಿದ್ದಾರೆ. ಈ ಮೈತ್ರಿಗೆ ಅಭೂತ ಪೂರ್ವ ಬೆಂಬಲ ಸಿಗಲು ಮುಖ್ಯ ಕಾರಣವೇ ಈ ಗೌರವದ, ಸಮಾನತೆಯ ಮೈತ್ರಿಯೇ ಕಾರಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇಂದು ಬಿಎಸ್ ಪಿಗೆ ಸೇರ್ಪಡೆಗೊಂಡ ಜೆಡಿಎಸ್ ರಾಷ್ಟ್ರೀಯ ನಾಯಕ ಡ್ಯಾನಿಶ್ ಅಲಿ ಅವರನ್ನು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಸ್ವಾಗತಿಸಿದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]