Friday, October 16 , 2020
ಪ್ರಬುದ್ಧ ಯೋಜನೆಯು ಬಲಿತ ದಲಿತ ವಿದ್ಯಾರ್ಥಿಗಳ ಪರವೇ ಅಥವಾ ಬಡ ದಲಿತ ವಿದ್ಯಾರ್ಥಿಗಳ ವಿರುದ್ಧವೋ ?

ಭಾರತದ ಸಂವಿಧಾನದ ಪ್ರಕಾರ 14 ನೇ ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲಾಯಿತು. ಶಿಕ್ಷಣದ ಅರಿವಿನಿಂದ ಯಾವುದು ಸರಿ ಅಥವಾ ತಪ್ಪು ಎಂಬುದನ್ನು ಜನ ಅರಿಯಲಾರಂಭಿಸಿದರು. ಡಾ.ಅಂಬೇಡ್ಕರ್ ಅವರ “ಶಿಕ್ಷಣ ಎಂಬುದು ಹುಲಿಯ ಹಾಲಿನಂತೆ ಅದನ್ನು ಕುಡಿದವನು ಘರ್ಜಿಸಲೇಬೇಕು.”  ಎಂಬ ಮಾತು ನಿಜವಾಗಿದೆ. ಇದರಿಂದಲೇ ಅಸ್ಪೃಶ್ಯ ಜಾತಿಗಳಾದ ಎಸ್ಸಿ, ಎಸ್ಟಿಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಆದರ್ಶ ವ್ಯಕ್ತಿಯಾಗಿದ್ದರೆ. ತದನಂತರದ ದಿನಗಳಲ್ಲಿ ಮೀಸಲಾತಿಯಿಂದ ಕೆಲವು ದಲಿತರು ಶಿಕ್ಷಣವನ್ನು ಪಡೆದು ಉದ್ಯೋಗವನ್ನು ಮಾಡುತ್ತಿದ್ದಾರೆ. ಹಾಗೆಯೇ ಇನ್ನಿತರ ಕ್ಷೇತ್ರದಲ್ಲಿಯೂ ಕೂಡ ತಮ್ಮ ಸಾಧನೆಯನ್ನು ಮಾಡಿದ್ದಾರೆ. ಆದರೆ ಈಗಲೂ ಕೂಡ ಹಲವಾರು ದಲಿತ ಕುಟುಂಬಗಳ ಮಕ್ಕಳಿಗೆ ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಏಕೆಂದರೆ, ಅವರಿಗೆ ಇರುವಂತಹ ಬಡತನದ ಕಾರಣದಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವುದನ್ನು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವ ದಲಿತರಲ್ಲಿ ಕಾಣಬಹುದಾಗಿದೆ.  ಶೇಕಡಾ ಸುಮಾರು ಶೇ.90ರಷ್ಟು ದಲಿತರು ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಅವರ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಸೇರಿಸಿಯೂ ಕೂಡಾ, ಓದಿಸುವಂತಿಲ್ಲದ ಪರಿಸ್ಥಿತಿಯಲ್ಲಿ ಇರುವ  ಹೆಚ್ಚು ದಲಿತರನ್ನು ಕಾಣಬಹುದಾಗಿದೆ.

ಅತೀ ಹೆಚ್ಚು ದಲಿತರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಿರುವುದರಿಂದ ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಕೊರತೆಯುಂಟಾಗಿದೆ. ಹಾಗಾದರೆ ಪ್ರಾರಂಭದ ದಿನಗಳಲ್ಲಿ ಈ ಸರ್ಕಾರಿ ಶಾಲೆಗಳಲ್ಲೇ ಓದಿದ ಹಲವಾರು ವಿದ್ಯಾರ್ಥಿಗಳು ಉನ್ನತ ಕ್ಷೇತ್ರಗಳಲ್ಲಿ ಸಾಧನೆಮಾಡಿಲ್ಲವೆಂದು ಅಲ್ಲ, ಈಗಿನ ಖಾಸಗಿ ಶಿಕ್ಷಣದಿಂದ ಅನೇಕ ರೀತಿಯಲ್ಲಿ ಶಿಕ್ಷಣದ ವ್ಯವಸ್ಥೆಯು ಬದಲಾವಣೆಯಾಗಿದೆ.  ಅವುಗಳೆಂದರೆ ICSCCBSENCERT ಎಂಬ ಮಾಧ್ಯಮಗಳನ್ನು ಖಾಸಗೀಕರಣ ಮಾಡಿದ್ದು, ಈ ಮಾಧ್ಯಮದ ಶಿಕ್ಷಣವನ್ನು ಪಡೆಯಬೇಕಾದರೆ ಬಡ ದಲಿತ ವಿದ್ಯಾರ್ಥಿಗಳಿಗೆ ದುಬಾರಿಯ ಕೆಲಸವಾಗಿದೆ.

ಆದರೆ ದಲಿತರಲ್ಲಿಯೇ ಯಾರು ಮೀಸಲಾತಿಯಿಂದ ಪ್ರಯೋಜನ ಪಡೆದಿರುತ್ತಾರೋ ಅಂತಹ ಮಕ್ಕಳನ್ನು ಖಾಸಗಿ ಕ್ಷೇತ್ರದ ಶಿಕ್ಷಣದಲ್ಲಿ ಓದಿಸುವಂತಹ ಸಬಲತೆಯನ್ನು ಹೊಂದಿರುತ್ತಾರೆ. ಹಾಗೂ ವ್ಯಾಸಂಗವನ್ನು ಕೂಡ ಮಾಡಿಸುತ್ತಾರೆ. ಅದರಲ್ಲಿ ಬಹುತೇಕ ನಗರ ಪ್ರದೇಶಗಳಲ್ಲಿರುವ ದಲಿತರ ಮಕ್ಕಳು ಮತ್ತು ಸರ್ಕಾರಿ ಉದ್ಯೋಗದಲ್ಲಿರುವ ದಲಿತ ಮಕ್ಕಳು ಸುಮಾರು ಶೇ.10ರಷ್ಟು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಾಸಗಿ ಶಿಕ್ಷಣದ ಶಾಲೆಯಲ್ಲಿ ಪಡೆಯುತ್ತಾರೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವಿಲ್ಲದೆ, ಆದರೂ ಸಹ ಟೆಕ್ನಿಕ್ ಕೋರ್ಸ್‍ಗಳಾದ ಡಿಪ್ಲೋಮಾ, ಇಂಜಿನಿಯರಿಂಗ್ ಮತ್ತು ಬಿಎಸ್ಸಿ, ಬಿಕಾಂ, ಎಮ್‍ ಬಿಎ, ಬಿಎ ಎಂಬ ಅನೇಕ ವಿಷಯಗಳನ್ನು ಕಷ್ಟ ಪಟ್ಟು ಓದುತ್ತಿದ್ದಾರೆ. ಹಾಗಾಂತ ನಗರ ಪ್ರದೇಶಗಳಲ್ಲಿ ಒದಿದ ಮಕ್ಕಳಿಗಿಂತ ಕಮ್ಮಿಯಿಲ್ಲ. ಆದರೆ ಅವರಿಗೆ ಇಂಗ್ಲೀಷ್ ಆಧಾರಿತವಾದ ಉತ್ತಮ ಗುಣಮಟ್ಟದ ಶಿಕ್ಷಣದ ಕೊರತೆಯಿದ್ದು ಹಾಗೂ ತಮ್ಮ ಮನೆಗಳಲ್ಲಿ ಕಷ್ಟವಾಗಿದ್ದರೂ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಓದಿದ ದಲಿತ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಬೇಕೆಂಬ ಆಸೆ ಇರುವುದಲ್ಲವೇ ?

ಕರ್ನಾಟಕದಲ್ಲಿ, ಸರ್ಕಾರದ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯು ಒಂದು ದಿಟ್ಟ ಹೆಜ್ಜೆಯನ್ನಿಟ್ಟಿದ್ದು ಹೆಮ್ಮೆಯ ವಿಷಯವಾಗಿದೆ. ಅದೆನೆಂದರೆ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛಿಸುತ್ತಿರುವ ಎಸ್ಸಿ, ಎಸ್ಟಿ ಅಕಾಂಕ್ಷಿಗಳಿಗೆ ” ಪ್ರಬುದ್ಧ” ಎಂಬ ಕಾರ್ಯಕ್ರಮದಡಿ ಸೌಲಭ್ಯವನ್ನು ಒದಗಿಸಿಕೊಡಲು ಪ್ರಬುದ್ಧ ವಿದೇಶಿ ಉನ್ನತ ವ್ಯಾಸಂಗ ಯೋಜನೆಯನ್ನು 2018 – 19ನೇ ಸಾಲಿನಿಂದ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಪದವಿ ಪಡೆಯುವ 150 ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ/ಪಿ ಎಚ್ ಡಿ ಪಡೆಯುವ 250 ಅಭ್ಯರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಕಳುಹಿಸುವ ಗುರಿ ಹೊಂದಲಾಗಿದೆ. ವಿದ್ಯಾರ್ಥಿಗಳ ವಿಮಾನಯಾನ ವೆಚ್ಚ , ವಾಸ್ತವ್ಯ ವೆಚ್ಚ ಹಾಗೂ ಅಧಿಕೃತ ಶುಲ್ಕವನ್ನು ಈ ಯೋಜನೆಯಡಿ ಸರ್ಕಾರ ಭರಿಸಲಿದೆ. ಇದು ದಲಿತರ ಪಾಲಿಗೆ ಒಳ್ಳೆಯ ಯೋಜನೆಯಾಗಿದೆ ಹಾಗೂ ಖುಷಿ ಪಡುವಂತಹ ವಿಷಯವೂ ಕೂಡ ಇದಾಗಿದೆ. ಏಕೆಂದರೆ ಸಾಮಾನ್ಯ ದಲಿತರು ವಿದೇಶಗಳಲ್ಲಿ ಓದುವುದು ಕಷ್ಟಕರವಾದಂತಹ ಸಂಗತಿ, ಬಹುಶಃ ದಲಿತ ರಾಜಕಾರಣಿಯ ಮಕ್ಕಳೇನಾದರೂ ಓದಬಹುದು ಎಂಬ ನನ್ನ ಅನಿಸಿಕೆ. ದಲಿತ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ವಿದೇಶಗಳಲ್ಲಿ ಮಾಡಲು ಆರ್ಥಿಕತೆಯ ಸಮಸ್ಯೆಯು ರುದ್ರ ತಾಂಡವಾಡುತ್ತದೆ. ಆದರೆ ಈ ಯೋಜನೆಯೂ ಒಳ್ಳೆಯಯೋಜನೆಯಾಗಿರುವುದರಲ್ಲಿ ಸಂಶಯವೇ ಇಲ್ಲ. 

 ಈ ಯೋಜನೆಗೆ ಕೆಲವು ಷರತ್ತುಗಳಿವೆ ಅವುಗಳೆಂದರೆ;

1.  ಪರಿಶಿಷ್ಟ ಜಾತಿ/ ಪಂಗಡದವರಾಗಿರಬೇಕು.

2.  ಪಿ.ಎಚ್ ಡಿ ಗೆ ಕನಿಷ್ಟ ಶೇ. 55%ರಷ್ಟು ಫಲಿತಾಂಶ ಪದವಿಯಲ್ಲಿ ಹೊಂದಿರತಕ್ಕದ್ದು.

3.  ಸ್ನಾತಕೋತ್ತರ ಪದವಿಗೆ ಶೇ. 55% ರಷ್ಟು ಫಲಿತಾಂಶ ಹೊಂದಿರತಕ್ಕದ್ದು.

4.  ಪದವಿಗೆ ಕನಿಷ್ಟ ಶೇ. 80% ರಷ್ಟು ಫಲಿತಾಂಶ ಪಿ ಯು ಸಿಯಲ್ಲಿ ಹೊಂದಿರತಕ್ಕದ್ದು.

5.  ಬಹುಮುಖ್ಯವಾಗಿ ಅಕಾಂಕ್ಷಿಗಳು ಕಡ್ಡಾಯವಾಗಿ ಕೆಳಗಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.

 GRE – 340 ಅಂಕಗಳಿಗೆ ಕನಿಷ್ಟ  295 ಅಂಕಗಳನ್ನು ಮತ್ತು ಹೆಚ್ಚಿನ ಅಂಕಗಳನ್ನು ಪಡೆಯಬೇಕು.

TOFEL– 120 ಅಂಕಗಳಿಗೆ ಕನಿಷ್ಟ 80 ಅಂಕಗಳನ್ನು ಮತ್ತು ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಅಥವಾ  IELTS – 09  ಅಂಕಗಳಿಗೆ ಕನಿಷ್ಟ 06 ಅಂಕಗಳನ್ನು ಮತ್ತು ಹೆಚ್ಚಿನ ಅಂಕಗಳನ್ನು ಪಡೆಯಬೇಕು.

6. ಪದವಿ ಓದುವವರಿಗೆ ಎಸ್ ‍ಎಟಿ – 1600 ಅಂಕಗಳಿಗೆ ಕನಿಷ್ಟ 1000 ಅಂಕಗಳನ್ನು ಮತ್ತು                    IELTS ಅಥವಾ TOFEL ಎಂಬ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿರಬೇಕು.

ಈ ಯೋಜನೆಯು ಅರ್ಜಿದಾರರ ಪೋಷಕರ ಆದಾಯದ ಮೇಲೆ ವಿದೇಶಿ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನವನ್ನು ನೀಡುತ್ತಾರೆ. ಅದು ಹೀಗೆ ನೀಡಲಾಗಿದೆ.

1.      8 ಲಕ್ಷದವರಿಗೆ 100% ಪ್ರೋತ್ಸಾಹ ಧನವನ್ನು ನೀಡುತ್ತಾರೆ.

2.      8 ಲಕ್ಷದಿಂದ 15 ಲಕ್ಷದವರಿರೂವರಿಗೆ 50% ಪ್ರೋತ್ಸಾಹ ಧನವನ್ನು ನೀಡುತ್ತಾರೆ.

3.      15 ಲಕ್ಷದಿಂದ 25 ಲಕ್ಷದವರಿರೂವರಿಗೆ 33% ಪ್ರೋತ್ಸಾಹ ಧನವನ್ನು ನೀಡುತ್ತಾರೆ.

ಈ ಮೇಲೆ ತಿಳಿಸಿರುವಂತೆ ಆದಾಯದ ಮೇಲೆ ಶೇಕಡಾವಾರು ಎಂದು ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಲಾಗಿದೆ. ಇದು ಒಳ್ಳೆಯ ನಿರ್ಧಾರವೆಂದು ಭವಿಸುತ್ತೇವೆ. ಆದರೆ ಇದರಿಂದ ಬಡ ದಲಿತ ವಿದ್ಯಾರ್ಥಿಗಳಿಗೇನು ಲಾಭ ಎಂಬುದನ್ನು ಚಿಂತಿಸಬೇಕಾಗಿದೆ? ಏಕೆಂದರೆ GRE,TOEFL ಎಂಬ ಪರೀಕ್ಷೆಗಳು ಕಡ್ಡಾಯವಾಗಿರುವುದರಿಂದ ಸುಮಾರು ಗ್ರಾಮಾಂತರ ಪ್ರದೇಶಗಳಲ್ಲಿ ಓದಿದ ದಲಿತ ವಿದ್ಯಾರ್ಥಿಗಳಿಗೆ ಇದು ಕಷ್ಟಕರವಾದಂತಹ ವಿಷಯ. ಹಾಗಂತ ಅವರಿಗೆ ಹೆಚ್ಚು ಜ್ಞಾನವಿಲ್ಲ ಎಂದು ಅರ್ಥವಲ್ಲ. ಆದರೆ ಇವರು ಹೆಚ್ಚು ವಿದ್ಯಾಭ್ಯಾಸ ಮಾಡುವುದು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ, ಅವರ ಕುಟುಂಬದ ಆರ್ಥಿಕ ಕೊರತೆಯಿಂದ, ಮನೆಯೇ ಸರಿಯಾಗಿ ನಡೆಯದಿದ್ದರೂ ಕಷ್ಟಪಟ್ಟು ತಮ್ಮ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ. ಇನ್ನೂ ಕೆಲ ಬಲಿತ ದಲಿತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಮಾಧ್ಯಮಗಳಾದ ICSCCBSENCERT ಎಂಬ ಅನೇಕ ಮಾಧ್ಯಮದ ಶಿಕ್ಷಣವನ್ನು ಕೊಡಿಸುತ್ತಾರೆ. ಏಕೆಂದರೆ ಅವರು ಆರ್ಥಿಕವಾಗಿ ಪ್ರಬಲರಾಗಿರುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವುದರಿಂದ ಅವರಿಗೆ GRE,TOEFLಎಂಬ ಪರೀಕ್ಷೆಗಳು ಬರೆಯಲು ಕಷ್ಟಕರವಾಗಿದೆ. ಏಕೆಂದರೆ ಖಾಸಗಿ ಶಾಲೆ, ಕಾಲೇಜುಗಳಲ್ಲಿ ಕಲಿಸಿಕೊಡುವಷ್ಟು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಮಟ್ಟದ ಕೊರತೆಯಿದ್ದು ಮತ್ತು ಆ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ತೇರ್ಗಡೆಯಾಗುವುದು ದೊಡ್ಡ ಸಾಧನೆಯಾಗಿರುತ್ತದೆ.  ಆಂತಹ ಪರಿಸ್ಥಿತಿಯಲ್ಲಿರುವವರಿಗೆ ಈ ಯೋಜನೆಯು ಹೇಗೆ ಸಹಾಯ ಮಾಡಿದಂತಾಗುತ್ತದೆ ? ಈ ಯೋಜನೆಯಡಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಸುಮಾರು 60 ರಿಂದ 70 ಲಕ್ಷದವರೆಗೂ ಕೂಡ ವಿದೇಶಿ ವ್ಯಾಸಂಗಕ್ಕೆ ಸಮಾಜ ಕಲ್ಯಾಣ ಇಲಾಖೆ ಬೊಕ್ಕಸದಿಂದ ಖರ್ಚುಮಾಡಲಾಗುತ್ತಿದೆ.

ದಲಿತರ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುತ್ತಿರುವುದು ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಮಾತ್ರ, ಯಾರು ಆರ್ಥಿಕವಾಗಿ ಬಲಿಷ್ಟರಾಗಿರುತ್ತಾರೊ ಅಂತಹವರು ಮಾತ್ರ ಖಾಸಗಿ ಶಾಲೆಗಳಲ್ಲಿ ನಾನಾ ರೀತಿಯಲ್ಲಿರುವ ಮಾಧ್ಯಮಗಳಲ್ಲಿ ಓದಿಸುತ್ತಾರೆ. ಆ ಮಾಧ್ಯಮಗಳಲ್ಲಿ ಓದಿರುವಂತಹ ಬಲಿತ ದಲಿತ ವಿದ್ಯಾರ್ಥಿಗಳಿಗೆ ಈ GRE,TOEF ಎಂಬ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸುತ್ತಾರೆ. ಆದರೆ ಬಡ ದಲಿತ ವಿದ್ಯಾರ್ಥಿಗಳಿಗೆ ಈ GRE,TOEFL , GMAT ಎಂಬ ಪರೀಕ್ಷೆಗಳ ಬಗ್ಗೆ ಅರಿವೇ ಇರುವುದಿಲ್ಲ. ಹಾಗಂತ ಅವರಿಗೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಆಸೆ ಇರುವುದಿಲ್ಲವೆಂದು ಅಲ್ಲ, ಅವರ ಮನೆಗಳ ಪರಿಸ್ಥಿತಿ ಚಿಂತಾಜನಕವಾಗಿರುತ್ತದೆ. ಈ ಪರೀಕ್ಷೆಗಳನ್ನು ಆಯ್ಕೆ ಮಾಡುವುದು ಅಂತಹ ವಿದ್ಯಾರ್ಥಿಗಳಿಗೆ ಕಷ್ಟಕರವಾದಂತಹ ಸಂಗತಿ ಎಂದು ನಾವು ಗಮನಿಸಬೇಕು. ಹಾಗಾದರೆ ಈ ಯೋಜನೆಯು ಹೆಚ್ಚು ಬಡ ಬಲಿತ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಲ್ಲದೆ, ಬರೀ ಕೆಲವೇ ಬಲಿತ ದಲಿತ ವಿದ್ಯಾರ್ಥಿಗಳ ಪಾಲಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ನನ್ನ ಅನಿಸಿಕೆ. GRE,TOEFL , GMATಎಂಬ ಪರೀಕ್ಷಾ ಶುಲ್ಕಗಳು ಸುಮಾರು ಅಂದಾಜು ವೆಚ್ಚ 15 ಸಾವಿರ ರೂ.ಗಳು ಪ್ರತಿ ಪರೀಕ್ಷೆಗೂ ಕಟ್ಟಬೇಕಾಗುತ್ತದೆ. ಸುಮಾರು 30 ಸಾವಿರ ರೂ.ಗಳು ಬೇಕಾಗುತ್ತದೆ. ಈ  ಪರೀಕ್ಷೆಗಳು ಬರೆಯಬೇಕಾದರೆ,ಈ ಶುಲ್ಕವನ್ನು ಬಡ ದಲಿತ ವಿದ್ಯಾರ್ಥಿಗಳಿಗೆ ಪಾವತಿಸಲು ಹೇಗೆ ಸಾಧ್ಯವಾಗುತ್ತದೆ ಮತ್ತು ಈ ಪರೀಕ್ಷೆಗಳನ್ನು ಎದುರಿಸುವಷ್ಟು ಸಾಮರ್ಥ್ಯವೂ ಕೂಡಾ ಇವರಿಗೆ ಇರುವುದಿಲ್ಲ ಏಕೆಂದರೆ ಇವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊರತೆಯಿಂದ ಎಂಬುದನ್ನು ಆಲಿಸಬೇಕಾಗಿದೆ. ಆದರೆ ಈ ತರಹದ ಪರೀಕ್ಷೆಗಳ ಶುಲ್ಕವನ್ನು ಬಲಿತ ದಲಿತರು ಪಾವತಿಸುವಂತಹ ಆರ್ಹತೆಯನ್ನು ಹೊಂದಿದ್ದು ಅವರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಿಸುತ್ತಾರೆ. ಇದರಿಂದ ಅತೀ ಹೆಚ್ಚು ಬಡ ದಲಿತ ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ಬರಲು ಸಾಧ್ಯವೇ ಆಗುವುದಿಲ್ಲ. ಅದರೆ ಬಲಿತ ದಲಿತರ ಮಕ್ಕಳಿಗೆ ಮಾತ್ರ ಸಾಧ್ಯವಾಗುತ್ತದೆ.

ಬಲಿತರ ಮಕ್ಕಳಿಗೆ ಮಾತ್ರವೇ ವಿದೇಶಿ ವಿದ್ಯಾಭ್ಯಾಸದ ಇಚ್ಛೆ ಇರುತ್ತದೆ ಎಂಬುದು ಮೂರ್ಖತನವಾಗುತ್ತದೆ. ಬಡ ಮಕ್ಕಳಿಗೂ ವಿದೇಶಿ ವಿದ್ಯಾಭ್ಯಾಸ ಮಾಡಲು ಇಚ್ಚೆಯಿರುತ್ತದೆ. ಈ ಎಲ್ಲಾ ನಿಯಮಗಳನ್ನು ನೋಡಿದರೆ ಈ ಯೋಜನೆಯು ಉಪಯೋಗವಾಗುತ್ತದೆಯೇ? ಎಂಬುದನ್ನು ಮೊದಲು ಯೋಚಿಸಬೇಕು. ಈ ಯೋಜನೆಯ ನಿಯಮಗಳನ್ನು ನೋಡಿದರೆ ಇದು ಬರೇ ಬಲಿತರ ಮಕ್ಕಳ ಪಾಲಿಗೆ ಹೊರತು ಬಡ ವಿದ್ಯಾರ್ಥಿಗಳ ಪಾಲಿಗೆ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಈ ಪ್ರಬುಧ್ದ ಎಂಬ ಯೋಜನೆಯು ಶ್ರೀಮಂತ ದಲಿತರ ಮಕ್ಕಳನ್ನು ಇನ್ನೂ ಶ್ರೀಮಂತರನ್ನಾಗಿಸುತ್ತದೆ ವಿನಹಃ ಬಡ ದಲಿತರ ಮಕ್ಕಳಿಗೆ ಏನೂ ಪ್ರಯೋಜನೆವಿಲ್ಲ. ಆದ್ದರಿಂದ ಈ ಯೋಜನೆಯು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ವಾಸಿಸುತ್ತಿರುವ ದಲಿತರ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರೆ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಸಹಾಯ ಮಾಡಿದಂತಾಗುತ್ತದೆ. ಇಲ್ಲವಾದಲ್ಲಿ ಈ ಯೋಜನೆಯು ಬರೀ ಬಲಿತ ದಲಿತರ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತಯೇ ಹೊರೆತು ಬಡ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಸಿಗುವುದಾದರೇನು? ಎಂಬುದನ್ನು ಘಾಢವಾಗಿ ಚಿಂತಿಸಬೇಕಾಗಿದೆ.

ಈ ಯೋಜನೆಯು ಬರೇ ಬಲಿತ ದಲಿತರ ಮಕ್ಕಳಿಗೆ ಪೂರಕವಾಗಿದೇ ಹೊರತು ಅದು ಹೇಗೆ ಬಡ ದಲಿತರ ಮಕ್ಕಳನ್ನು ಉದ್ಧಾರ ಮಾಡಿದಂತಾಗುತ್ತದೆ. ಆದ್ದರಿಂದ ಬಡ ದಲಿತ ವಿದ್ಯಾರ್ಥಿಗಳಿಗೆ ಈ ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಅಂತಹ ವಿದ್ಯಾರ್ಥಿಗಳು ಉನ್ನತ  ವಿದ್ಯಾಭ್ಯಾಸವನ್ನು ಪಡೆದು, ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಪ್ರಬಲರಾಗುತ್ತಾರೆ. ಇದೆಯೇ ಬಾಬಾ ಸಾಹೇಬರ ಆಶಯವಾಗಿದೆ. ಆದ್ದರಿಂದ ಈ ಯೋಜನೆಯಡಿ ಬಡ ಮಕ್ಕಳನ್ನು ಮೇಲೆತ್ತುವ ಕೆಲಸವಾಗಬೇಕಾಗಿದೆಯೇ ಹೊರತು ಅವರನ್ನು ಇನ್ನೂ ಪಾತಳಕ್ಕೆ ತುಳಿದು ಬರೀ ಬಲಿತರ ಮಕ್ಕಳನ್ನು ಮೇಲೆತ್ತುವ ಕೆಲಸವಾಗಬಾರದು ಎಂಬುದು ನನ್ನ ಆಶಯವಾಗಿದೆ.

-ವೇಣುಗೋಪಾಲ್ ಮೌರ್ಯ, BE,M.A.Phil

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]