Saturday, April 4 , 2020
‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ | ಅಮೂಲ್ಯ ದಾಖಲಿಸಿದ ಹೇಳಿಕೆ ಏನು?

ಬೆಂಗಳೂರು(21.02.2020): ಫ್ರೀಡಂ ಪಾರ್ಕ್ ನಲ್ಲಿ ಸಿಎಎ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ವಿದ್ಯಾರ್ಥಿನಿ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿಚಾರವಾಗಿ ಅವರನ್ನು ಬಂಧಿಸಲಾಗಿದೆ. ಇದೀಗ ಅವರು ತಾನು ಏನು ಹೇಳಲು ಹೊರಟಿದ್ದೆ ಎನ್ನುವ ಬಗ್ಗೆ ಹೇಳಿಕೆ ದಾಖಲಿಸಿದ್ದಾರೆ.

ನಾನು ಫ್ರೀಡಂ ಪಾರ್ಕ್​ನಲ್ಲಿ ಸರ್ಕಾರಿ ಕಾಲೇಜ್​ನಲ್ಲಿ (ಸೆಂಟ್ರಲ್) ಮತ್ತು ಹೆಚ್.ಎಂ.ಟಿ ಲೇಔಟ್ ಶಿವಾಜಿನಗರ ಚೌಕದಲ್ಲಿ ವಿಜಯನಗರ ಚೌಕದಲ್ಲಿ ಮೇಲ್ಕಂಡ ಎನ್.ಆರ್.ಸಿ. ವಿರೋಧಿಸಿ ಭಾಷಣ ನೀಡಿರುತ್ತೇನೆ.

ಇಂದು ನನ್ನ ಗೆಳತಿ ಹಾಗೂ ಹೋರಾಟಗಾರ್ತಿ ತೆರೆಸಾ ಫ್ರೀಡಂ ಪಾರ್ಕ್​ನಲ್ಲಿ ಸಿಎಎ ಹಾಗೂ ಎನ್​ಆರ್​ಸಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗುತ್ತಾ ಎಂದು ಕೇಳಿದಾಗ. ನಾನು ನನ್ನ ಸಮ್ಮತಿಯನ್ನ ನೀಡಿರುತ್ತೇನೆ. ಇದರ ನಂತರ ಸೈಯದ್ ಆರ್ಯನ್ ಎಂಬುವರು ನನ್ನನ್ನು ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಲು ಆಹ್ವಾನಿಸಿರುತ್ತಾರೆ. ಇದರ ನಂತರ ನಾನು ಇಂದು ಸಂಜೆ 4 ಗಂಟೆಗೆ ಫ್ರೀಡಂ ಪಾರ್ಕ್ ಗೆ ತಲುಪಿರುತ್ತೇನೆ ಎಂದು ಅವರು ಹೇಳಿದ್ದಾರೆ.

ಪ್ರತಿಭಟನೆ ಜಾರಿಯಲ್ಲಿದ್ದು ನನಗೆ ಮಾತನಾಡುವ ಸರದಿಯನ್ನ ಆಯೋಜಕರು ನೀಡಿದರು. ಕಾರ್ಯಕ್ರಮದ ಮುಖ್ಯ ನಿರೂಪಕರು, ಮುಖ್ಯ ಅತಿಥಿ ಅಸಾದುದ್ದೀನ್ ಬಂದ ನಂತರ ಮಾತನಾಡಲು ಅವಕಾಶ ನೀಡಿದರು. ನಾನು ನನ್ನ ಭಾಷಣವನ್ನ “ಪಾಕಿಸ್ತಾನ ಜಿಂದಾಬಾದ್” ಎಂದು ಮೂರು ಬಾರಿ ಹೇಳಿ “ಹಿಂದೂಸ್ತಾನ್ ಜಿಂದಾಬಾದ್” ಎಂದು ಮೂರು ಬಾರಿ ಹೇಳಿ ಭಾಷಣ ಆರಂಭಿಸಿದೆ. ಇದರಿಂದ ಆಕ್ರೋಶಗೊಂಡ ಆಯೋಜಕರು ಮತ್ತು ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ನನ್ನಿಂದ ಮೈಕ್ ಕಸಿಯುವ ಪ್ರಯತ್ನ ಮಾಡಿದರು. ನಾನು ಎಷ್ಟೇ ವಿನಯದಿಂದ ಮಾತು ಮುಗಿಸಲು ಅವಕಾಶ ನೀಡಿ ಎಂದರೂ ನನಗೆ ಮಾತನಾಡಲು ಬಿಡಲಿಲ್ಲ. ಇದರ ನಂತರ ನಾನು ಸಭೆಯನ್ನ ಉದ್ದೇಶಿಸಿ ಮೈಕ್ ಇಲ್ಲದೆ “ನಾನೀಗ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದೆ. ಜೊತೆಯಲ್ಲಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಸಹ ಹೇಳಿದೆ. ಇದರ ನಡುವೆ ಇರುವ ವ್ಯತ್ಯಾಸವೇನೆಂದರೆ” ಇಷ್ಟು ಹೇಳುವಲ್ಲಿ ಆಯೋಜಕರು ಮತ್ತು ಪೊಲೀಸರು ಹಾಗೂ ಅಸಾದುದ್ದೀನ್ ಓವೈಸಿಯವರು ನಾನು ಇಂತ ಮಾತನ್ನ ಕೇಳಲು ಸಾಧ್ಯವಿಲ್ಲವೆಂದು ಹೇಳಿ ನನ್ನನ್ನು ಸಭೆಯಿಂದ ಅಮಾನವೀಯವಾಗಿ ಕಳುಹಿಸಿದ್ದಾರೆ ಎಂದು ಅಮೂಲ್ಯ ಹೇಳಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]