Monday, July 26 , 2021
ಪಾಕಿಸ್ತಾನದ ಹಿಂದೂಗಳನ್ನು ಸಮರ್ಥಿಸುವುದು ದೇಶದ್ರೋಹ ಅಲ್ಲವೇ?

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಇದೀಗ ದೇಶಾದ್ಯಂತ ಹಾಗೂ ವಿಶ್ವದಾದ್ಯಂತ ಚರ್ಚೆಯಾಗುತ್ತಿರುವ ವಿಚಾರವಾಗಿದೆ. ಈ ನಡುವೆ ಕೇಂದ್ರ ಸರ್ಕಾರದ ಕೆಲವೊಂದು ನಿಲುವುಗಳು ಅಸಹಜವಾಗಿ ಕಾಣುತ್ತಿರುವುದೂ ವಾಸ್ತವಾಗಿದೆ. ಈ ನಡುವೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕೆಲವು ಮಾಧ್ಯಮಗಳ ನಿಲುವುಗಳು ಕೆಲವೊಂದು ಪ್ರಶ್ನೆಗಳಿಗೆ ಕಾರಣವಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮೊದಲಾದ ದೇಶಗಳ ನಾಗರಿಕರು ಭಾರತರಲ್ಲಿ ಅಕ್ರಮವಾಗಿ ನೆಲೆಸಿದ್ದು, ಇವರಲ್ಲಿ ಮುಸ್ಲಿಮರನ್ನು ಮಾತ್ರ ದೇಶದಿಂದ ಹೊರ ಕಳುಹಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಭಾರೀ ಆಕ್ರೋಶಗಳು ಕೇಳಿ ಬಂದಿವೆ. ಇತರ ದೇಶಗಳ ಹಿಂದೂಗಳು ಸೇರಿದಂತೆ 6 ಧರ್ಮೀಯರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಆದರೆ ಮುಸಲ್ಮಾನರಿಗೆ ಇಲ್ಲಿ ಪೌರತ್ವ ನೀಡಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

ಈ ನಡುವೆ ಎದ್ದಿರುವ ಪ್ರಮುಖ ಪ್ರಶ್ನೆಯೇನೆಂದರೆ, ಮಾಧ್ಯಮಗಳೇ ಹೇಳುವಂತೆ ಪಾಕಿಸ್ತಾನ ಶತ್ರು ರಾಷ್ಟ್ರ. ಈ ವಿವಾದಾತ್ಮಕ ಕಾನೂನಿನ ಪ್ರಕಾರ ಪಾಕಿಸ್ತಾನದ ಹಿಂದೂಗಳು ಭಾರತದಲ್ಲಿ ಬಂದು ನೆಲೆಸಿದ್ದರೆ ಅವರಿಗೆ ಪೌರತ್ವ ನೀಡಲಾಗುತ್ತದೆ. ಇದಕ್ಕೆ ಹಿಂದೂತ್ವವಾದಿ ಮಾಧ್ಯಮಗಳು ಹರ್ಷ ವ್ಯಕ್ತಪಡಿಸಿ ಮಾತನಾಡುತ್ತಿವೆ. ಹೊರಗಡೆ ಜನರು ಮಾಧ್ಯಮಗಳಿಂದ ಪ್ರೇರೇಪಿತರಾಗಿ ನಮ್ಮ(ಹಿಂದೂ) ಧರ್ಮದವರಿಗೆ ಏನೂ ತೊಂದರೆಯಿಲ್ಲವಂತೆ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನದಲ್ಲಿರುವ ಹಿಂದೂಗಳ ಮೇಲೆ ಭಾರತದಲ್ಲಿರುವ ಹಿಂದೂಗಳಿಗೆ ಭಾವನಾತ್ಮಕ ಸಂಬಂಧವಿದೆ ಎಂದಾದರೆ, ಪಾಕಿಸ್ತಾನದಲ್ಲಿರುವ ಮುಸ್ಲಿಮರ ಮೇಲೆ ಭಾರತದಲ್ಲಿರುವ ಮುಸ್ಲಿಮರಿಗೆ ಭಾವನಾತ್ಮಕ ಸಂಬಂಧ ಇದೆ ಎಂದಾದರೆ ಅದರಲ್ಲಿ ತಪ್ಪೇನಿದೆ? ಎನ್ನುವ ಪ್ರಶ್ನೆಗಳಿಗೆ ಮಾಧ್ಯಮಗಳು ಉತ್ತರಿಸಬಲ್ಲವೇ?

ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಎಂದೇ ಗುರುತಿಸುತ್ತೇವೆ. ಪಾಕಿಸ್ತಾನ ಭಾರತ ಕ್ರಿಕೆಟ್ ಮ್ಯಾಚ್ ಇದ್ದರೆ, ಅಲ್ಲಿ ಭಾರತ ಗೆದ್ದಾಗ ಪಟಾಕಿ ಹಚ್ಚಿ ಸಂಭ್ರಮಿಸುತ್ತೇವೆ. ಯಾರಾದರೂ ಪಾಕಿಸ್ತಾನ ತಂಡದ ಪರವಾಗಿ ಭಾರತದಲ್ಲಿ ಮಾತನಾಡಿದರೆ, ಹಿಂಸೆಗೇ ಇಳಿದು ದೇಶದ್ರೋಹಿ ಪಟ್ಟವನ್ನು ಕೊಡುತ್ತೇವೆ. ಆದರೆ, ಪಾಕಿಸ್ತಾನದ ಹಿಂದೂಗಳಿಗೆ ನಾವು ಪೌರತ್ವಕೊಡುತ್ತೇವೆ ಎಂದಾಗ ನಮ್ಮ ದೇಶಪ್ರೇಮ ಎಲ್ಲಿ ಹೋಯಿತು? ಪಾಕಿಸ್ತಾನದ ಹಿಂದೂವಾಗಲಿ, ಮುಸ್ಲಿಮನೇ ಆಗಲಿ ಆತ ಶತ್ರು ದೇಶದವನು ಎಂದು ನಮಗೆ ಯಾಕೆ ಈ ಸಂದರ್ಭದಲ್ಲಿ ಅನ್ನಿಸುತ್ತಿಲ್ಲ. ಹಿಂದೂವಾದರೆ, ಸರಿ ನಮ್ಮವ ಎಂದು ನಾವು ಸಮರ್ಥಿಸಿಕೊಳ್ಳುವುದು ದೇಶದ್ರೋಹ ಯಾಕಲ್ಲ?

ಒಬ್ಬ ಪಾಕಿಸ್ತಾನದ ಹಿಂದೂವಿನ ಮೇಲೆ ಭಾರತದಲ್ಲಿರುವು ಹಿಂದೂಗೆ ಭಾವನಾತ್ಮಕ ಸಂಬಂಧವಿದ್ದರೆ ಅದು ತಪ್ಪಲ್ಲ. ಹಾಗೆಯೇ ಪಾಕಿಸ್ತಾನದಲ್ಲಿರುವ ಮುಸಲ್ಮಾನನ ಮೇಲೆ ಭಾರತದ ಮುಸಲ್ಮಾನನಿಗೆ ಈತ ತನ್ನ ಧರ್ಮದವ ಎನ್ನುವ ಭಾವನಾತ್ಮಕ ಸಂಬಂಧ ಇದ್ದರೂ ತಪ್ಪಾಗುವುದಿಲ್ಲ. ದೇಶ ಎಂದು ಬಂದಾಗ ಭಾರತದ ಹಿಂದೂ, ಮುಸಲ್ಮಾನರೆಲ್ಲರೂ ಪಾಕಿಸ್ತಾನದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಭಾರತಕ್ಕೆ ವಲಸೆ ಬಂದಿರುವ, ಅಥವಾ ಅಕ್ರಮವಾಗಿ ನುಸುಳಿರುವ ಯಾವುದೇ ವ್ಯಕ್ತಿ ಇಲ್ಲಿ ಕುಟುಂಬಸ್ಥನಾಗಿ ಹಲವಾರು ವರ್ಷಗಳಿಂದ ಬದುಕುತ್ತಿದ್ದಾನೆ ಎಂದಾದರೆ, ಆತ ಪೌರತ್ವ ಪಡೆಯಲು ದೇಶದ ಕಾನೂನಿನಡಿಯಲ್ಲಿ ಅರ್ಹ ಎನಿಸಿದರೆ, ಆತನ ಧರ್ಮ ನೋಡದೇ ಆತನಿಗೆ ಪೌರತ್ವ ನೀಡುವುದು ಮಾನವೀಯ ಧರ್ಮವಾಗಿದೆ. ಅಥವಾ ಯಾವುದೇ ಧರ್ಮದ ವ್ಯಕ್ತಿಗೆ ಪೌರತ್ವ ನೀಡದೇ ಅವರ ದಾಖಲೆಗಳನ್ನು ಪಡೆದುಕೊಂಡು ಅವರವರ ದೇಶಗಳಿಗೆ ಗಡಿಪಾರು ಮಾಡುವುದು ಕಾನೂನು ಕ್ರಮ. ಮುಸಲ್ಮಾನರನ್ನು ಹೊರತುಪಡಿಸಿ ಉಳಿದವರಿಗೆಲ್ಲರಿಗೂ ಪೌರತ್ವ ನೀಡುತ್ತೇವೆ ಎನ್ನುವುದು ಧರ್ಮಾಂಧತೆಯೇ ಹೊರತು ಕಾನೂನಾಗುವುದಿಲ್ಲ ಎನ್ನುವುದು ವಾಸ್ತವ ಅಲ್ಲವೇ?

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]