Sunday, September 19 , 2021
ಪಶ್ಚಿಮ ಬಂಗಾಳದಲ್ಲಿ ಕೇಸರಿಯಾಗಿ ಪರಿವರ್ತನೆಗೊಂಡ ಕೆಂಪು

ಪಶ್ಚಿಮ ಬಂಗಾಳದಲ್ಲಿ ಮಮತ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಮತ್ತೆ ತಮ್ಮ ಸರ್ಕಾರವನ್ನು ರಚಿಸುತ್ತಿದೆ. ಇಡೀ ದೇಶವು BJP ಮತ್ತು ಮೋದಿಯವರ ದುರಾಡಳಿತಕ್ಕೆ ಬೇಸತ್ತು ಹೋಗಿದ್ದು ಕಳೆದ ಎರಡು ವಾರದಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ #Resignmodi ಎಂಬ ಹ್ಯಾಷ್ ಟ್ಯಾಗ್ ಅಭಿಯಾನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಸೋತಿರುವುದು ಮೋದಿ ಮತ್ತು ಬಿಜೆಪಿಗೆ ಆಘಾತವಾಗಿದೆ.

ಕೋವಿಡ್ – 19 ನ ಎರಡನೇ ಅಲೆಯ ಮುನ್ಸೂಚನೆಯನ್ನು ತಜ್ಞರು ನೀಡಿದ್ದರೂ ಸಹ ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಸ್ವೀಕರಿಸಿ ಲಕ್ಷಾಂತರ ಜನರ ಆರೋಗ್ಯವನ್ನೂ ಲೆಕ್ಕಿಸದೆ 20 ಚುನಾವಣಾ ಸಮಾವೇಶಗಳಲ್ಲಿ ಪಾಲ್ಗೊಂಡು ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದ್ದರು ಪ್ರಧಾನಿ ಮೋದಿ. ಅವರ ಜೊತೆಗೆ ಅಮಿತ್ ಶಾ 50 ಸಭೆಗಳಲ್ಲಿ, ನಡ್ಡಾ 20 ಸಭೆಗಳಲ್ಲಿ ಭಾಗವಹಿಸಿದ್ದರು. ಜೊತೆಗೆ ಮಮತಾರ 40 ಕ್ಕೂ ಹೆಚ್ಚು ಆಪ್ತರನ್ನು ತಮ್ಮ ಪಕ್ಷಕ್ಕೆ ಪಕ್ಷಾಂತರ ಮಾಡಿಕೊಂಡಿದ್ದರು. ಆದರೆ ಅವರ ಎಲ್ಲಾ ಶ್ರಮವು ನೀರಿನಲ್ಲಿ ಹೋಮ ಮಾಡಿದ ಹಾಗಾಗಿದೆ. ಮೋದಿ, ಅಮಿತ್ ಶಾ ಮತ್ತು ನೆಡ್ಡಾ ಇವರ ದೊಡ್ಡ ತಂಡವೇ ತಮ್ಮ ಕೇಂದ್ರ ಕಛೇರಿಯನ್ನು ಪಶ್ಚಿಮ ಬಂಗಾಳಕ್ಕೆ ವರ್ಗಾಯಿಸಿ, ಎರಡು ಪಂಚತಾರ ಹೋಟೆಲ್ಗಳಲ್ಲಿ ಅಮಿತ್ ಮಾಳ್ವಿಯ ಮುಖಾಂತರ ತಮ್ಮ IT Cellನ್ನು ನಿರ್ವಹಿಸಲಾಗಿತ್ತು. ಹಾಗೆಯೇ ಟನ್ ಗಟ್ಟಲೆ ಹಣವನ್ನು ಅಮಿತ್ ಶಾರ ಆಪ್ತರಾದ ಕೈಲಾಶ್ ವಿಜಯ್ ವರ್ಗೀಯರವರಿಗೆ ತಲುಪಿಸಿ  ಯುದ್ದೋಪಾದಿಯಲ್ಲಿ  ಪಶ್ಚಿಮ ಬಂಗಾಳವನ್ನು ಗೆಲ್ಲುವ ಕಾರ್ಯತಂತ್ರ ರೂಪಿಸಿತ್ತು. ಆದರೆ ಮಮತಾ ಬ್ಯಾನರ್ಜಿಯ ರಾಜತಂತ್ರದ ವಿರುದ್ಧ ಬಿಜೆಪಿ ಮಂಡಿಯೂರಿದೆ.

ಪಶ್ಚಿಮ ಬಂಗಾಳದ ಚುನಾವಣೆಯ ಫಲಿತಾಂಶವನ್ನು ಗಮನಿಸುವುದಾದರೆ ಇಲ್ಲಿ ಮಮತಾ ಗೆದ್ದಿದ್ದರೂ, BJPಯು ಕಡಿಮೆ ಸೀಟುಗಳನ್ನು ಪಡೆದು ಸೋತಿದ್ದರೂ ಸಹ  ವಾಸ್ತವವಾಗಿ ಇಲ್ಲಿ ನಿಜವಾಗಿಯೂ ಸೋಲುಂಡಿರುವುದು ಕಮ್ಯುನಿಸ್ಟ್ ಪಕ್ಷ!  ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿರುವುದು ಕೆಂಪು ಕೇಸರಿಯಾಗಿ ಪರಿವರ್ತನೆ ಆದ ಬಗೆ. ಅಂದರೆ ಕಮ್ಯುನಿಸ್ಟ್ ಮತದಾರರು BJP ಮತದಾರರಾಗಿ ಪರಿವರ್ತನೆಯಾಗಿರುವುದು, ಅಂದರೆ ನಮ್ಮ ದೇಶದಲ್ಲಿ Blood is thicker than water ಎನ್ನುವ ಮಾತು ಪದೇ ಪದೇ ಸಾಬೀತಾಗುತ್ತಿರುವುದು ಮಾತ್ರ ಸತ್ಯ. ಇವರ ಡೋಂಗಿ ಸಿದ್ದಾಂತಗಳಿಗೆ ಬಲಿಯಾಗುತ್ತಿರುವುದು ಮಾತ್ರ ಈ ದೇಶದ OBC ಮತ್ತು SC/ST ಗಳು. ಎಂದಿನಂತೆ ಬೇರೆ ಬೇರೆ ಮುಖವಾಡಗಳನ್ನು ಧರಿಸಿಕೊಂಡು ಅಧಿಕಾರವನ್ನು ಅನುಭವಿಸುತ್ತಿರುವುದು ಮಾತ್ರ ಅದೇ ಭದ್ರಲೋಕ.

ಬಹುಶಃ ಈ ಚುನಾವಣೆಯ ಮೂಲಕ ಕೇರಳ ಹೊರತುಪಡಿಸಿ ಕಮ್ಯುನಿಸ್ಟ್ ಪಕ್ಷ ಭಾರತದಲ್ಲಿ ಸಂಪೂರ್ಣವಾಗಿ ತನ್ನ ನೆಲೆ ಕಳೆದುಕೊಂಡಿದೆ. ಈ ಮೂಲಕ ಹಲವು ದಶಕಗಳು ಪಶ್ಚಿಮ ಬಂಗಾಳ ರಾಜಕಾರಣದ ಪ್ರಧಾನ ಭಾಗವಾಗಿದ್ದ ಕಮ್ಯೂನಿಸ್ಟರು ಇದೀಗ ಕೇಸರಿಯ ಜೊತೆಯಲ್ಲಿ ವಿಲೀನವಾಗಿರುವುದು, ಫಲಿತಾಂಶ ಪಟ್ಟಿಯಲ್ಲಿ ಶೂನ್ಯಕ್ಕೆ ಬಂದು ತಲುಪಿರುವುದು ಅವರ ಸೈದ್ಧಾಂತಿಕ ಸೋಲಿಗೆ ಹಿಡಿದ ಕನ್ನಡಿಯಾಗಿದೆ.
-ಫ್ರೊ. ಹರಿರಾಮ್.ಎ.  ವಕೀಲರು

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]