Saturday, September 19 , 2020
BREAKING NEWS
 
ಭಾರತದ ರಹಸ್ಯಗಳನ್ನು ಚೀನಾಕ್ಕೆ ಸೋರಿಕೆ ಮಾಡುತ್ತಿದ್ದ ರಾಜೀವ್ ಶರ್ಮಾ ,          ಮದುವೆ ಮನೆಯಲ್ಲಿ ‘ಮಹಾನಾಯಕ’ ಫ್ಲೆಕ್ಸ್ | “ನಾವು ಬದಲಾದರೆ ಸಮಾಜ ಬದಲಾಗುತ್ತದೆ” ಎಂದ ಪ್ರೊ.ಹರಿರಾಮ್ ,          ಸೇತುವೆ ಕೊಚ್ಚಿ ಹೋಗಿ 30 ವರ್ಷವಾದರೂ ಸರ್ಕಾರ ನಿರ್ಮಿಸಲಿಲ್ಲ | ಸರ್ಕಾರಕ್ಕೆ ಮುಖಭಂಗವಾಗುವಂತೆ ತಾವೇ ಸೇತುವೆ ನಿರ್ಮಿಸಿದ ಗ್ರಾಮಸ್ಥರು ,          ಸೈಕಲ್ ನಲ್ಲಿ ತೆರಳಿದ್ದ ಬಾಲಕಿ ರಾತ್ರಿಯಾದರೂ ಬರಲಿಲ್ಲ! | ಬೆಳಗ್ಗೆ ಕಾದಿತ್ತು ಪೋಷಕರಿಗೆ ಶಾಕ್ | ಒಂದು ಮನಕರಗಿಸುವ ಘಟನೆ ,          ಕೊರೊನಾ ಹಾಟ್ ಸ್ಪಾಟ್ ಆದ ನಾಗಪುರದ ಆರೆಸ್ಸೆಸ್ ಕಚೇರಿ; 9 ಹಿರಿಯ ನಾಯಕರಿಗೆ ಕೋವಿಡ್ ಪಾಸಿಟಿವ್ ,          ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಮತ್ತಿನ ದಂಧೆ | ಸ್ಟಾರ್ ನಟರ ಮೋಜು ಮಸ್ತಿಯ ಪಾರ್ಟಿಯಲ್ಲಿ ಡ್ರಗ್ಸ್ ನದ್ದೇ ಕಾರುಬಾರು! ,         
ಪರಸ್ಪರರ ಪತಿಯಂದಿರಿಗೆ ಕಿಡ್ನಿ ದಾನ ಮಾಡಿದ ಪತ್ನಿಯರು: ಸೌಹಾರ್ದತೆ ಮೆರೆದ ಹಿಂದು-ಮುಸ್ಲಿಂ ಕುಟುಂಬಗಳು

ಮುಂಬೈ (19-03-2019): ದೇಶದಲ್ಲಿ ಸೌಹಾರ್ದತೆಯ ವಾತಾವರಣ ಇನ್ನಷ್ಟು ವೃದ್ಧಿಸುತ್ತಿರುವುದಕ್ಕೆ ಸಂತೋಷ ಪಡಬೇಕಿದೆ. ಬಿಹಾರದ ಹಿಂದು ಕುಟುಂಬ ಹಾಗೂ ಥಾಣೆಯ ಮುಸ್ಲಿಂ ಕುಟುಂಬಗಳು ಪರಸ್ಪರ ಅಂಗ ದಾನ ಮಾಡಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇಬ್ಬರ ಪತ್ನಿಯರೂ ಪರಸ್ಪರ ಒಪ್ಪಿ, ತಮ್ಮ ತಮ್ಮ ಪತಿಯಂದಿರಿಗೆ ಕಿಡ್ನಿ ದಾನ ಮಾಡಲು ನಿರ್ಧರಿಸಿದ ಅಪರೂಪದ ಪ್ರಕರಣವಿದು.

ಕಿಡ್ನಿ ಕಸಿ ಶಸ್ತ್ರಕ್ರಿಯೆ ಮಾರ್ಚ್ 14ರಂದು ನಡೆದಿದ್ದು ಥಾಣೆಯ ನದೀಂ ಹಾಗೂ ಬಿಹಾರದ ರಾಮಸ್ವಾರ್ಥ್ ಯಾದವ್ ಅವರ ಪ್ರಾಣ ಉಳಿದಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನದೀಂ ಮತ್ತು ರಾಮಸ್ವಾರ್ಥ್ ಅವರಿಬ್ಬರು ನಿಯಮಿತವಾಗಿ ಡಯಾಲಿಸಿಸ್ ಗೆ ಒಳಗಾಗುತ್ತಿದ್ದರೂ ಕಿಡ್ನಿ ಕಸಿ ಮಾತ್ರ ಅವರ ಸಮಸ್ಯೆಗೆ ಪರಹಾರವೆಂದು ತಜ್ಞರು ಹೇಳಿದ್ದರು. ಅವರಿಬ್ಬರೂ ಸರಿ ಸುಮಾರು ಒಂದೇ ಸಮಯ ಮುಂಬೈಯ ಕಿಡ್ನಿ ತಜ್ಞರ ಬಳಿ ಬಂದಿದ್ದರು. ಆದರೆ ಇಬ್ಬರ ಪತ್ನಿಯರೂ ತಮ್ಮ ಪತಿಯಂದಿರಿಗೆ ಕಿಡ್ನಿ ದಾನ ಮಾಡಲು ಸಿದ್ಧರಿದ್ದರೂ ಪರಸ್ಪರ ಹೊಂದಾಣಿಕೆಯಾಗುತ್ತಿರಲಿಲ್ಲ.

ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ನೆಫ್ರಾಲಜಿ ವಿಭಾಗದ ತಜ್ಞ ಡಾ. ಹೇಮಲ್ ಶಾ, ರಾಮಸ್ವಾರ್ಥ್ ಅವರ ರಕ್ತದ ಗುಂಪು ನದೀಂ ಪತ್ನಿ ನಝ್ರೀನ್ ಳ ರಕ್ತದ ಗುಂಪಿಗೆ ಹೊಂದಾಣಿಕೆಯಾಗುತ್ತಿದ್ದರೆ, ನದೀಂ ರಕ್ತದ ಗುಂಪು ರಾಮಸ್ವಾರ್ಥ್ ಪತ್ನಿ ಸತ್ಯದೇವಿಯ ರಕ್ತದ ಗುಂಪಿಗೆ ಹೊಂದಾಣಿಕೆಯಾಗಿರುವುದನ್ನು ಗಮನಿಸಿ ಎರಡೂ ಕುಟುಂಬಗಳ ಜತೆ ಮಾತುಕತೆ ನಡೆಸಿದರು. ಸುಮಾರು ಒಂದು ತಿಂಗಳು ಈ ಬಗ್ಗೆ ಚರ್ಚಿಸಿದ ನಂತರ ಎರಡೂ ಕುಟುಂಬಗಳು ಒಪ್ಪಿದ್ದವು. ‘ಇದು ಸಾವು ಬದುಕಿನ ಪ್ರಶ್ನೆ, ಧರ್ಮದ ವಿಚಾರ ಇಲ್ಲಿ ಬಾರದು’ ಎಂದು ರಾಮಸ್ವಾರ್ಥ್ ಅವರ ಪುತ್ರ ಸಂಜಯ್ ಹೇಳಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]