
ಚಾಮರಾಜನಗರ ( 13-01-2021): ಜಿಲ್ಲಾಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಖಾಯಂ ಉಪನ್ಯಾಸಕರನ್ನು ನೇಮಿಸುವಂತೆ ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಸಂಘದ (BVS) ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಭಾರತೀಯ ವಿದ್ಯಾರ್ಥಿ ಸಂಘದ (BVS) ಜಿಲ್ಲಾ ಸಂಯೋಜಕ ಪರ್ವತರಾಜು ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಭವನದ ಶಿರಸ್ತೇದಾರರಾದ ಕುಮಾರ್ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಪರ್ವತರಾಜು ಮಾತನಾಡಿ, ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಸುಮಾರು 250 ವಿದ್ಯಾರ್ಥಿ ಗಳಿದ್ದು 2020 ರ ನವೆಂಬರ್ 17 ರಿಂದ ಆನ್ಲೈನ್ ತರಗತಿಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳಿಗೆ ಯಾವುದೇ ಪಾಠ ಪ್ರವಚನಗಳು ಆನ್ಲೈನ್ ತರಗತಿಗಳು ಸಹ ನಡೆಯುತ್ತಿಲ್ಲ. ಈ ಕಾಲೇಜಿಗೆ ಸರ್ಕಾರಿ ಖಾಯಂ ಉಪನ್ಯಾಸಕರ ಕೊರತೆಯಿದ್ದು ಪ್ರತಿ ವರ್ಷ ಅತಿಥಿ ಉಪನ್ಯಾಸಕರೂ ಸಹ ಬರುತ್ತಿಲ್ಲ. ಹಾಗೂ ಖಾಯಂ ಉಪನ್ಯಾಸಕರೂ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದ್ದು ಮುಂದಿನ ಪರೀಕ್ಷೆಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕವಾಗುತ್ತಿದೆ. ಕೂಡಲೇ ಸರ್ಕಾರ ಖಾಯಂ ಉಪನ್ಯಾಸಕರನ್ನು ನಿಯೋಜನೆ ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿಯಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್.ಭರತ್, ಕಾರ್ತಿಕ್, ವಿಶ್ವಾಸ್, ಸಂತೋಷ್, ಮನೋಜ್, ಭಾಗ್ಯ, ಅಶ್ರಿತಾ,ಕವಿತಾ, ಪುಷ್ಷಲತಾ, ಲಕ್ಷ್ಮಿ,ಅಂಜಲಿ, ಸೌಮ್ಯ, ಆಶಾ,ರಶ್ಮಿತಾ, ನವೀನ, ರಾಜೇಶ್, ರಾಮು, ಮಹೇಶ್,ಮಲ್ಲಿಕಾರ್ಜುನ, ಸಂತೋಷ್ ಇತರರು ಭಾಗವಹಿಸಿದ್ದರು.