Saturday, April 4 , 2020
ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಕರ್ನಾಟಕಕ್ಕೆ5 ವರ್ಷಗಳಲ್ಲಿ 821ಕೋಟಿ ನಷ್ಟ!

ಬೆಂಗಳೂರು(22-02-2020): ನೀರಾವರಿ ಯೋಜನೆಗಳ ಅನುಷ್ಠಾನದ ವೈಫಲ್ಯದಿಂದಾಗಿ ಕರ್ನಾಟಕಕ್ಕೆ 5 ವರ್ಷಗಳ ಅವಧಿಯಲ್ಲಿ 821.86 ಕೋಟಿ ರೂ. ನಷ್ಟವಾಗಿದೆ.

ಕೇಂದ್ರದ ವೇಗವರ್ಧಿತ ನೀರಾವರಿ ಯೋಜನಗಳ ಕಾರ್ಯಕ್ರಮದ(ಎಐಬಿಪಿ) ಅಡಿಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ.

ಈ ಅಂಕಿ ಅಂಶದಲ್ಲಿ 493.69 ಕೋಟಿ ರೂ.ಕೇಂದ್ರ ಸರಕಾರ ಇನ್ನೂ ಬಿಡುಗಡೆಗೊಳಿಸದ ಮೊತ್ತವನ್ನು ಸೇರಿಸಲಾಗಿದೆ. ಆದರೆ ಈ ಬಗ್ಗೆ ಕೇಂದ್ರ ಕಾರಣವನ್ನು ತಿಳಿಸಿಲ್ಲ.

ವಿಧಾನಸಭೆಯಲ್ಲಿ ವಾರದ ಆರಂಭದಲ್ಲಿ ಮಂಡಿಸಲಾದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯಿಂದ ಈ ವಿಷಯ ಬಹಿರಂಗವಾಗಿದೆ.ಕೃಷ್ಣ ನೀರಾವರಿ ನಿಗಮ್ ಲಿಮಿಟೆಡ್ (ಕೆಎನ್‌ಎನ್‌ಎಲ್) ಮತ್ತು ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್‌ಎಲ್) ಅನುಷ್ಠಾನಗೊಳಿಸಲು ಬಿಡುಗಡೆಯಾದ 3,500 ಕೋಟಿ ರೂ.ಗಳಲ್ಲಿ 821ಕೋಟಿ ನಾಲ್ಕನೇ ಒಂದು ಭಾಗವಾಗಿದೆ.

ವಾರ್ಷಿಕ ಉದ್ದೇಶಿತ ನೀರಾವರಿ ಸಾಮರ್ಥ್ಯವನ್ನು ಸಾಧಿಸಲು, ಯೋಜಿತ ವೆಚ್ಚವನ್ನು ಅನುಸರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿತವಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]