Sunday, September 19 , 2021
ನಿರ್ಮಲ ಸೀತಾರಾಮನ್ ಈರುಳ್ಳಿ ತಿನ್ನುತ್ತಿದ್ದರೆ… ರೇಟು ಕಡಿಮೆ ಆಗುತ್ತಿತ್ತು ಅಲ್ವೇ?

ಬೆಂಗಳೂರಿನ ಚಿಕ್ಕ ಅಂಗಡಿ, ಅಲ್ಲಿ ಯಾವಾಗಲೂ ಈರುಳ್ಳಿ ಬಜ್ಜಿ ಮಾಡುತ್ತಿದ್ದರು. ಅವನು ರೆಗ್ಯುಲರ್ ಕಸ್ಟಮರ್, ಎಂದಿನಂತೆ ಬಂದು ಈರುಳ್ಳಿ ಬಜ್ಜಿ ಕೊಡಿ ಎಂದು ಕೇಳಿದ್ದಾನೆ. ಸುತ್ತಮುತ್ತ ಇದ್ದವರು ಒಮ್ಮೆ ಆತನ ಮುಖ ನೋಡಿ ಗೊಳ್ಳನೆ ನಕ್ಕಿದ್ದಾರೆ. ಇದು ಸಾಮಾನ್ಯವಾಗಿ ಈಗ ಬೆಂಗಳೂರಿನಲ್ಲಿ ಕಂಡು ಬರುತ್ತಿರುವ ದೃಶ್ಯ. ದಿನಾ ಒಂದು ಕೆಜಿಯಷ್ಟು ಈರುಳ್ಳಿ ಕೊಂಡು ಹೋಗಿ ರುಚಿಕರವಾಗಿ ಅಡುಗೆ ಮಾಡಿ ಮನಪೂರ್ವಕವಾಗಿ ತಿನ್ನುತ್ತಿದ್ದ ಜನರು, ಈರುಳ್ಳಿಯ ಸ್ವಾದವಿಲ್ಲದೇ ಮುಖ ಕಿವುಚಿಕೊಂಡು ಊಟ ಮಾಡುವಂತಾಗಿದೆ. ಬಹುತೇಕರಿಗೆ ಈರುಳ್ಳಿ ಇಲ್ಲದೇ ಅಡುಗೆ ಮಾಡಲು ಬರುವುದೇ ಇಲ್ಲ. ಇಂತಹವರು ಸಾಂಬರ್ ಗಾಗಿ ಹೊಟೇಲ್ ಗಳಿಗೆ ಅಲೆದಾಡುವಂತಾಗಿದೆ.

ಸಣ್ಣಪುಟ್ಟ ಅಂಗಡಿಗಳಲ್ಲಿ ಈರುಳ್ಳಿ ನಾಪತ್ತೆಯಾಗಿದೆ. ಈರುಳ್ಳಿ ದೊಡ್ಡ ಮಾರುಕಟ್ಟೆಯಲ್ಲಿಯೇ 200 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಅಲ್ಲಿಂದ ಖರೀದಿಸಿ ತಂದು ಸಣ್ಣಪುಟ್ಟ ಅಂಗಡಿಯವರು ತಮ್ಮ ಲಾಭವನ್ನು ಸೇರಿಸಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗೂ ಮಾರಾಟವಾಗುತ್ತದೆಯೇ ಎಂದು ಕೆಲವರು ಪರೀಕ್ಷಿಸಿದ್ದು, ಆದರೆ ತಂದ ಈರುಳ್ಳಿ ಕೊಳೆತು ಹೋಯಿತೇ ವಿನಃ ಖರೀದಿಯಾಗಲಿಲ್ಲ. ಆರ್ಥಿಕ ಹಿಂಜರಿತದಿಂದ ಮೊದಲೇ ಜನರು ಕೊಳ್ಳುವ ಶಕ್ತಿ ಪಾತಾಳಕ್ಕಿಳಿದಿದೆ. ಇನ್ನೂ 200 ರೂಪಾಯಿಗಿಂತಲೂ ಹೆಚ್ಚು ಹಣ ನೀಡಿ ಯಾರು ಈರುಳ್ಳಿ ಕೊಂಡುಕೊಳ್ಳುತ್ತಾರೆ?

ಸಾಮಾಜಿಕ ಜಾಲತಾಣಗಳಲ್ಲಿ ಈರುಳ್ಳಿ ಒಂದು ಹಾಸ್ಯದ ವಸ್ತುವಾದರೂ, ಅದರ ಹಿಂದೆ ಕಣ್ಣೀರ ಕಥೆಗಳೂ ಇವೆ. ಈರುಳ್ಳಿಯ ಜೊತೆ ಬಿಡದ ಸಂಬಂಧವಿರುವುದು ಬಡ ಜನರಿಗೆ. ಅನ್ನ ಮತ್ತು ಒಂದು ಈರುಳ್ಳಿ ಇದ್ದರೆ ಸಾಕು ಹೊಟ್ಟೆ ತುಂಬಾ ಊಟ ಮಾಡಿ ಹಾಯಾಗಿ ಮಲಗುತ್ತಿದ್ದವರು ಹಳ್ಳಿಗಳಲ್ಲಿ ಈಗಲೂ ಇದ್ದಾರೆ. ಒಂದು ಈರುಳ್ಳಿ ಒಂದು ಮೊಟ್ಟೆಯಲ್ಲಿ ಬೆಳಗ್ಗೆ ಒಂದು ಆಮ್ಲೇಟ್ ಮಾಡಿ ಉಪಾಹಾರ ಮಾಡುವವರು ನಗರ ಪ್ರದೇಶಗಳಲ್ಲಿ ಬೇಕಾದಷ್ಟು ಜನರಿದ್ದಾರೆ. ಇಂತಹವರಿಗೆ ಈರುಳ್ಳಿಯ ಮಹತ್ವ ಏನು ಎನ್ನುವುದು ತಿಳಿದಿದೆ. ನಮ್ಮ ಹಣಕಾಸು ಸಚಿವರು ಮೊನ್ನೆ ಲೋಕಸಭೆಯಲ್ಲಿ ಮಾತನಾಡುತ್ತಾ, “ನನ್ನ ಕುಟುಂಬ ಈರುಳ್ಳಿ, ಬೆಳ್ಳುಳ್ಳಿ ತಿನ್ನುವ ಕುಟುಂಬವಲ್ಲ, ಈರುಳ್ಳಿ ಬೆಲೆ ಏರಿಕೆ ನನಗೆ ತಟ್ಟಿಲ್ಲ” ಅಂದ್ರು. ಇರಬಹುದು. ಆದರೆ ಕೆಲವು ಕುಟುಂಬಗಳು ಹೇಗಿರುತ್ತವೆ ಎಂದರೆ, ತಾವು ಎಷ್ಟೇ ಬಡತನವಿರಲಿ, ತಿನ್ನುವ ಆಹಾರ ಸ್ವಾದಯುತವಾಗಿರಬೇಕು. “ಉತ್ತಮ ಮತ್ತು ರುಚಿಕರ ಊಟ ಇಲ್ಲದಿದ್ದ ಬಾಳೂ ಒಂದು ಬಾಳೇ” ಎಂದು ಹಳ್ಳಿಗಳಲ್ಲಿ ಈಗಲೂ ಜನ ಕೇಳುತ್ತಾರೆ. ಅವರವರ ಆಲೋಚನೆಗಳು ಅವರವರ ಮಟ್ಟಕ್ಕಿರುತ್ತವೆ ಎನ್ನುವುದೂ ನಿಜ. ಹಾಗಂತ ಇಲ್ಲಿ ಯಾರು ಸರಿ? ಯಾರು ತಪ್ಪು ಎಂದು ಹೇಳುವುದೂ ಬಹಳ ಕಷ್ಟ.

ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಈರುಳ್ಳಿ ತಿನ್ನುತ್ತಿದ್ದರೆ ಬಹುಶಃ ಈರುಳ್ಳಿ ರೇಟು ಕಡಿಮೆ ಆಗುತ್ತಿತ್ತೋ ಏನೋ, ಗೊತ್ತಿಲ್ಲ. ಹೀಗೆ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ. ಈರುಳ್ಳಿಯ ಸ್ವಾದವೇ ಗೊತ್ತಿಲ್ಲದ ಹಣಕಾಸು ಸಚಿವರನ್ನು ಪಡೆದ ನಾವೆಷ್ಟು ದುರದೃಷ್ಟವಂತರು ಎಂದು ನಮ್ಮ ತಲೆಯನ್ನು ನಾವೇ ಚಚ್ಚಿಕೊಳ್ಳಬೇಕಷ್ಟೆ ಅಲ್ಲವೇ? ಅಂದ ಹಾಗೆ ಇನ್ನು ಎಲ್ಲಿಯೂ ಹೋಗಿ, ಈರುಳ್ಳಿ ದೋಸೆ ಕೊಡಿ, ಈರುಳ್ಳಿ ಬಜ್ಜಿಕೊಡಿ ಅಂತ ಕೇಳಿ ನಾಚಿಕೆಗೆಡಬೇಡಿ. ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಯಾರಾದರೂ ಈರುಳ್ಳಿ ತಿನ್ನುವವರು ಇದ್ದಾರಾ ನೋಡೋಣ, ಅವರಾದರೂ ಈರುಳ್ಳಿ ಬೆಲೆ ಇಳಿಸುತ್ತಾರಾ ನೋಡೋಣ….

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]