Friday, August 7 , 2020
ದುಃಖದಲ್ಲಿರುವ ಜನರಿಗೆ ಭಟ್ರು ಬರೆದ ಹಾಡು | ಸಣ್ಣ ಅಣುವಿನ ಪ್ರಶ್ನೆಗೆ ಉತ್ತರ ಹುಡುಕುವ ಹಾಡು

ಕೊರೊನಾ ವೈರಸ್ ನಿಂದ ರಾಜ್ಯ ತತ್ತರಿಸಿದೆ. ಪ್ರತಿಬಾರಿಯೂ ಲಾಕ್ ಡೌನ್ ಮುಂದುವರಿಯುತ್ತಿರುವುದು ಜನರ ಕೈಕಾಲುಗಳನ್ನು ಕಟ್ಟಿ ಹಾಕಿದಂತಾಗಿದೆ. ಕಷ್ಟದಲ್ಲಿರುವ ಜನರ ಪ್ರಶ್ನೆಗಳಿಗೆ ಸರ್ಕಾರದ ಬಳಿಯಲ್ಲೂ ಸ್ಪಷ್ಟ ಉತ್ತರವಿಲ್ಲ. ಇದೇ ಸಂದರ್ಭದಲ್ಲಿ ಯೋಗರಾಜ್ ಭಟ್ ಅವರು ಬರೆದಿರುವ ಹಾಡೊಂದು ಕರ್ನಾಟಕದಲ್ಲಿ ಸದ್ದು ಮಾಡುತ್ತಿದೆ.

ಯಾರು ನೀನು ಮಾನವ, ಕೇಳುತಿದೆ ಕೊರೊನಾ ಎಂಬ ಈ ಹಾಡು ದುಃಖದಲ್ಲಿರುವ ಜನರಿಗೆ ಸಾಂತ್ವಾನ ಹೇಳುವಂತೆ ಮೂಡಿ ಬಂದಿದೆ. ಈ ಹಾಡನ್ನು ವಿಜಯ ಪ್ರಕಾಶ್ ಅವರು ಅದ್ಭುತವಾಗಿ ಹಾಡಿದ್ದಾರೆ. ಅಷ್ಟೇ ಅದ್ಭುತ ಸಂಗೀತವನ್ನು ಅರ್ಜುನ್ ಜನ್ಯ ಅವರು ನೀಡಿದ್ದಾರೆ. ವಿಡಿಯೋ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ. ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು, ಬೆಂಗಳೂರು ಕಮಿಷನರ್ ಸೇರಿದಂತೆ ಹಲವು ಜನರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಊರಿಗೂರೇ ಖಾಲಿ… ದಾರಿ ತುಂಬಾ ಬೇಲಿ, ತಿಳಿದುಕೊಳ್ಳುವ ಬನ್ನಿ ಬಾನ ಬಣ್ಣ ನೀಲಿ, ವಿಷಾದವೇ, ವಿನಾಶವು, ತಿರುಗುತಿರುವ ಭೂಮಿ ಇಂದು, ನಿಲ್ಲ ಬಹುದೇ ಜ್ವರವು ಬಂದು ಎಂದು ಆರಂಭದಲ್ಲಿಯೇ ಆರಂಭವಾಗುವ ಪದ್ಯದ ಸಾಲುಗಳು ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ನ ಪರಿಸ್ಥಿತಿಗಳನ್ನು ಬಿಚ್ಚಿಟ್ಟಿವೆ. ಯಾರು ನೀನು ಮಾನವ, ಕೇಳುತಿದೆ, ಕೊರೊನಾ, ಪುಟ್ಟ ಅಣುವಿನ ಪ್ರಶ್ನೆಗೆ, ದಿಟ್ಟ ಉತ್ತರ ಕೊಡೋಣ ಎನ್ನುವ ಸಾಲುಗಳು ಕೊರೊನಾ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬಿದೆ. ರೋಗ ಕೇಳುತ ಬರುವುದೇ, ಮನುಜನ ಕುಲಗೋತ್ರವಾ… ಸಾವು ನೋಡುತ ನಗುತಿದೆ… ಬ್ಯಾಂಕ್ ಅಕೌಂಟ್ ನ ಗಾತ್ರವ… ಬಣ್ಣ ಧರ್ಮಗಳ ಮಣ್ಣು ಕೇಳುವುದೇ ಎನ್ನುವ ವಾಖ್ಯಗಳು, ಬೇಧ, ಭಾವಗಳ, ಶ್ರೀಮಂತಿಕೆಯ ದರ್ಪಗಳನ್ನು ಪ್ರಶ್ನಿಸಿದೆ.

ವಿಡಿಯೋ ನೋಡಲು ಈ ಲಿಂಕ್ ಗೆ ಕ್ಲಿಕ್ ಮಾಡಿ: https://youtu.be/1m7OTBrexHk

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]