Saturday, September 19 , 2020
BREAKING NEWS
 
ಭಾರತದ ರಹಸ್ಯಗಳನ್ನು ಚೀನಾಕ್ಕೆ ಸೋರಿಕೆ ಮಾಡುತ್ತಿದ್ದ ರಾಜೀವ್ ಶರ್ಮಾ! ,          ಮದುವೆ ಮನೆಯಲ್ಲಿ ‘ಮಹಾನಾಯಕ’ ಫ್ಲೆಕ್ಸ್ | “ನಾವು ಬದಲಾದರೆ ಸಮಾಜ ಬದಲಾಗುತ್ತದೆ” ಎಂದ ಪ್ರೊ.ಹರಿರಾಮ್ ,          ಸೇತುವೆ ಕೊಚ್ಚಿ ಹೋಗಿ 30 ವರ್ಷವಾದರೂ ಸರ್ಕಾರ ನಿರ್ಮಿಸಲಿಲ್ಲ | ಸರ್ಕಾರಕ್ಕೆ ಮುಖಭಂಗವಾಗುವಂತೆ ತಾವೇ ಸೇತುವೆ ನಿರ್ಮಿಸಿದ ಗ್ರಾಮಸ್ಥರು ,          ಸೈಕಲ್ ನಲ್ಲಿ ತೆರಳಿದ್ದ ಬಾಲಕಿ ರಾತ್ರಿಯಾದರೂ ಬರಲಿಲ್ಲ! | ಬೆಳಗ್ಗೆ ಕಾದಿತ್ತು ಪೋಷಕರಿಗೆ ಶಾಕ್ | ಒಂದು ಮನಕರಗಿಸುವ ಘಟನೆ ,          ಕೊರೊನಾ ಹಾಟ್ ಸ್ಪಾಟ್ ಆದ ನಾಗಪುರದ ಆರೆಸ್ಸೆಸ್ ಕಚೇರಿ; 9 ಹಿರಿಯ ನಾಯಕರಿಗೆ ಕೋವಿಡ್ ಪಾಸಿಟಿವ್ ,          ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಮತ್ತಿನ ದಂಧೆ | ಸ್ಟಾರ್ ನಟರ ಮೋಜು ಮಸ್ತಿಯ ಪಾರ್ಟಿಯಲ್ಲಿ ಡ್ರಗ್ಸ್ ನದ್ದೇ ಕಾರುಬಾರು! ,         
ತೂಕ ಇಳಿಸಿಕೊಂಡ ಬಳಿಕ ಬುಲೇಟ್ ಪ್ರಕಾಶ್ ಜೀವನವೇ ಬದಲಾಯ್ತು! | ಅಂದು ದರ್ಶನ್ ಬುಲೇಟ್ ಪ್ರಕಾಶ್ ಗೆ ಏನು ಹೇಳಿದ್ದರು?

ಬೆಂಗಳೂರು(06.04.2020): ಕನ್ನಡದ ಪ್ರಮುಖ ಹಾಸ್ಯ ನಟರಲ್ಲಿ ಒಬ್ಬರಾಗಿದ್ದ ಬುಲೇಟ್ ಪ್ರಕಾಶ್ ಅವರು ಬೆಂಗಳೂರಿನ ಬಡ ಕುಟುಂಬದಿಂದ ಬಂದವರು. ಸುಮಾರು 325ಕ್ಕೂ ಅಧಿಕ ಚಿತ್ರಗಳಲ್ಲಿ ಜನರನ್ನು ರಂಜಿಸಿದ್ದ ಬುಲೇಟ್ ಪ್ರಕಾಶ್ ಅವರು ತುಳು ಚಿತ್ರದಲ್ಲೂ ನಟಿಸಿದ್ದರು.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಭಾಗವಹಿಸಿದ್ದ ಬುಲೇಟ್, ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ತನ್ನ ದೇಹದ ತೂಕವನ್ನು ಇಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಈ ವೇಳೆ ಅವರ ಜೊತೆಗಿದ್ದ ದರ್ಶನ್ ಅವರು, “ನೀನು ದೇಹದ ತೂಕವನ್ನು ಇಳಿಸಿಕೊಳ್ಳಬೇಡ, ನಿನ್ನ ದೇಹವೇ ನಿನಗೆ ಮಾರ್ಕೆಟ್ ತಂದುಕೊಟ್ಟಿದೆ ಎಂದು ಎಚ್ಚರಿಸಿದ್ದರು. ಆದರ ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಎನ್ನುವ ಬಯಕೆಯನ್ನು ಬಿಡದ ಬುಲೇಟ್ ಪ್ರಕಾಶ್ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಹೊರಟರು. ಬಹುಶಃ ಈ ಒಂದು ನಿರ್ಧಾರ ಅವರ ಬದುಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು.

ಬುಲೇಟ್ ಪ್ರಕಾಶ್ ಅವರು ತಮ್ಮ ದೇಹ ತೂಕವನ್ನು ಶಸ್ತ್ರ ಚಿಕಿತ್ಸೆಯ ಮೂಲಕ 35 ಕೆ.ಜಿ.ಗಳಷ್ಟು ಇಳಿಕೆ ಮಾಡಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಬುಲೇಟ್ ಪ್ರಕಾಶ್ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಆಗಿದ್ದವು ಎಂದು ಹೇಳಲಾಗುತ್ತಿದೆ.  ಈ ನಡುವೆ ಪ್ರಕಾಶ್ ಆರ್ಥಿಕವಾಗಿಯೂ ನಷ್ಟ ಅನುಭವಿಸಿದ್ದರು.

ತಮ್ಮ ದೇಹದ ತೂಕವನ್ನು ಇಳಿಸಿಕೊಂಡ ಬಳಿಕ ಬುಲೇಟ್ ಪ್ರಕಾಶ್ ಅವರು ಒಂದಲ್ಲ ಒಂದು ಅನಾರೋಗ್ಯಕ್ಕೆ ತುತ್ತಾಗಿದ್ದರೂ, ನಟನೆಯನ್ನು ಬಿಟ್ಟಿರಲಿಲ್ಲ ಎಂದು ಚಿತ್ರರಂಗದ ಪ್ರಮುಖರು ಹೇಳುತ್ತಾರೆ. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರೂ, ಅವರು ಹಿಂದಿನಷ್ಟೇ ಆಸಕ್ತಿಯಿಂದ ನಟಿಸುತ್ತಿದ್ದರು. ಡೈಲಾಗ್ ಡೆಲಿವರಿಯಂತೂ ಪಟಾಪಟ್ ಆಗಿ ಮಾಡುತ್ತಿದ್ದ ಬುಲೇಟ್ ಪ್ರಕಾಶ್ ಅವರು ತಮ್ಮ 44ನೇ ವಯಸ್ಸಿನಲ್ಲಿಯೇ ನಿಧನರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಈ ಹಿಂದೆ ಅವರು ತೀರಾ ಅನಾರೋಗ್ಯಕ್ಕೀಡಾದಾಗ ಎಲ್ಲರೂ ಬುಲೇಟ್ ಪ್ರಕಾಶ್ ಅವರ ಆಸೆ ಬಿಟ್ಟಿದ್ದರು. ಇನ್ನೂ ಕೆಲವರು ಬುಲೇಟ್ ಪ್ರಕಾಶ್ ನಿಧನರಾಗಿದ್ದಾರೆ ಎಂದೇ ಯೂಟ್ಯೂಬ್ ಚಾನೆಲ್ ಗಳಲ್ಲಿ ವಿಡಿಯೋ ಹಾಕಿದ್ದರು. ಈ ಘಟನೆ ಬುಲೇಟ್ ಪ್ರಕಾಶ್ ಅವರಿಗೆ ಬಹಳ ನೋವನ್ನುಂಟು ಮಾಡಿತ್ತು. ಇದರ ಬಗ್ಗೆ ಅವರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಜೊತೆಗೆ ಕನ್ನಡದ ಸುದ್ದಿವಾಹಿನಿಯೊಂದು ಮಾಡಿದ ಸಂದರ್ಶನದಲ್ಲಿ ತನಗೆ ಅವಕಾಶಗಳು ಕಡಿಮೆಯಾಗಿದೆ ಎಂದು ಕಣ್ಣೀರು ಹಾಕಿದ್ದರು.

ಅಂತೂ ಜನರನ್ನು ನಕ್ಕು ನಗಿಸಿದ್ದ ಬುಲೇಟ್ ಪ್ರಕಾಶ್ ಅವರ ಜೀವನ ತೀರಾ ನೋವುಗಳಿಂದ ಕೂಡಿತ್ತು. ಕನ್ನಡ ಚಿತ್ರರಂಗಕ್ಕೆ ಬಹಳ ತಡವಾಗಿ ಅವರು ಕಾಲಿಟ್ಟರೂ, ಬಹಳ ಸಾಧನೆಗಳನ್ನು ಮಾಡಿ, ಜನರ ಮನಸಿನಲ್ಲಿ ಬಹುಬೇಗ ಸ್ಥಾನ ಪಡೆದ ಅವರು ಬಹುಬೇಗನೇ ಹೊರಟುಹೋಗಿದ್ದಾರೆ. ತಮ್ಮ ಮಗನ ಭವಿಷ್ಯದ ಬಗ್ಗೆ ಬುಲೇಟ್ ಪ್ರಕಾಶ್ ಹೆಚ್ಚಾಗಿ ತಲೆಕೆಡಿಸಿಕೊಂಡಿದ್ದರು ಅಂತ ಅವರ ಸಹೋದ್ಯೋಗಿಗಳು ಇಂದು ಕೆಲವು ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ಹೇಳಿಕೊಂಡರು. ಅಂತೂ 1976ರ ಏಪ್ರಿಲ್ 2ರಂದು ಬೆಂಗಳೂರಿನ ಬಡಕುಟುಂಬದಲ್ಲಿ ಜನಿಸಿದ್ದ ಬುಲೇಟ್ ಪ್ರಕಾಶ್ ಕಾಟನ್ ಪೇಟೆ ಗಲ್ಲಿಗಳಲ್ಲಿ ಆಡುತ್ತಾ ಬೆಳೆದರೂ, ಕನ್ನಡ ಚಿತ್ರರಂಗಕ್ಕೆ ಅದ್ಭುತವಾದ ಕೊಡುಗೆಗಳನ್ನು ನೀಡಿದ್ದಾರೆ. ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ಮೂಲಕ ಜನರ ಮನಸ್ಸಿನಲ್ಲಿ ಅವರು ಅಚ್ಚಳಿಯದೇ ಉಳಿದಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]