Monday, July 26 , 2021
ಡಾ.ಸಿದ್ದಲಿಂಗಯ್ಯ ನಾಡಿನ ಸಾಕ್ಷಿಪ್ರಜ್ಞೆ| ಡಾ.ದೇವರಾಜು ಎಸ್.ಎಸ್

ನಾಡು ಕಂಡ ಹೆಮ್ಮೆಯ ಸೂಕ್ಷ್ಮ ಪ್ರಜ್ಞಾ ಸಾಹಿತಿ ಡಾ. ಸಿದ್ಧಲಿಂಗಯ್ಯ ಅಸ್ತಂಗತರಾಗಿರುವುದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ  ಸಿದ್ಧಲಿಂಗಯ್ಯನವರು ದಲಿತ ಬಂಡಾಯ ಸಾಹಿತಿ ಎಂದೇ ಖ್ಯಾತಿ ಪಡೆದವರು.

ನಾಗರಿಕ ಸಮಾಜದಲ್ಲಿ ಗಟ್ಟಿಯಾಗಿ ಬೇರುಬಿಟ್ಟಿರುವ ಅಸಮಾನತೆ, ಅಜ್ಞಾನ, ಮೂಢನಂಬಿಕೆ, ಗುಲಾಮಗಿರಿ, ಜಾತಿ ಪದ್ಧತಿ, ಬಡತನ, ಶೋಷಣೆ, ದಬ್ಬಾಳಿಕೆ ಇನ್ನೂ ಮುಂತಾದ ಪಿಡುಗುಗಳು ಸಾಮಾಜಿಕ ವ್ಯಾಧಿಯಾಗಿ ಬಾಧಿಸುತ್ತಿರುವ ಸಂದರ್ಭದಲ್ಲಿ  ಇವುಗಳ ವಿರುದ್ಧ ಗಟ್ಟಿ ಧ್ವನಿಯಲ್ಲಿ  “ಇಕ್ಕರ್ಲಾ ಒದಿರ್ಲಾ ಈ ನನ್ನ ಮಕ್ಕಳ ಚರ್ಮ ಎಬ್ರಲಾ” ಹಾಗೂ “ಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ” ಮತ್ತು  “ಬದುಕು ಪ್ರೀತಿಸುವ ಬಡವರ ಮಗಳು ನಿರಾಭರಣೆ ಕವನ, ಜನಗಳು ತಿನ್ನುವ ಅನ್ನದ ಅಗುಳು ಜೀವ ನನ್ನ ಕವನ” ಎಂಬ ಇನ್ನೂ ಅನೇಕ ನೋವು ಮತ್ತು ಆಕ್ರೋಶಭರಿತ ಸಾಹಿತ್ಯ ರಚಿಸಿ ದಮನಿತ ಸಮುದಾಯದ ಮೇರು ಧ್ವನಿಯಾಗಿಯಾಗುವ ಮೂಲಕ  ಬರಡು ಭೂಮಿಯಂತಿದ್ದ ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿ ಬೀಜ ಬಿತ್ತಿ ಅದರ ಫಲ ಸಮುದಾಯಕ್ಕೆ ದೊರಕುವಂತೆ  ಮಾಡಿದ ಕ್ರಾಂತಿಕಾರಿ ಸಾಹಿತಿ.

ಕ್ರಾಂತಿ ಗೀತೆಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಸಲುವಾಗಿ ಊರು ಕೇರಿಗಳಲ್ಲಿ ದಲಿತ ಚಳವಳಿಯನ್ನು ಕಟ್ಟಿ ಸ್ವಾಭಿಮಾನದ ಕಿಚ್ಚು ಹೊತ್ತಿಸಿದ ಮಹಾನುಭವ. ಕೇವಲ ನೋವು, ಅಸಹನೆ ಮತ್ತು ರೋಷದ ಸಾಹಿತ್ಯವನ್ನು ರಚಿಸದೆ ಕನ್ನಡ ಚಿತ್ರರಂಗದಲ್ಲಿ ಎಂದೂ ಮರೆಯಲಾಗದ “ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ” ಎಂಬ  ಪ್ರೇಮಾಮೃತ ತುಂಬಿದ ಸಾಹಿತ್ಯವನ್ನು ನಾಡಿಗೆ ಪಸರಿಸಿದವರು.

ಸಿದ್ಧಲಿಂಗಯ್ಯನವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಅಸಂಖ್ಯಾತ ಪ್ರಶಸ್ತಿ ಫಲಕಗಳು ಸಂದಿವೆ. ಅಲ್ಲದೆ ಸಾಹಿತ್ಯ ಕ್ಷೇತ್ರದಿಂದ ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಇಂತಹ ಮೇರು ವ್ಯಕ್ತಿತ್ವವುಳ್ಳ ಸಿದ್ಧಲಿಂಗಯ್ಯನವರ ಸಾಹಿತ್ಯ ನನ್ನಂತಹ ಅಸಂಖ್ಯಾತ ಜನರಿಗೆ  ಹಾಗೂ ಭವಿಷ್ಯದ ಸಾಹಿತ್ಯಪ್ರೇಮಿಗಳು ಮತ್ತು  ಚಳುವಳಿಗಾರರಿಗೆ ಆದರ್ಶನೀಯವಾಗಿ ನಿಲ್ಲಬಲ್ಲ ವ್ಯಕ್ತಿ.
-ಡಾ.ದೇವರಾಜು ಎಸ್.ಎಸ್
 ಉಪನ್ಯಾಸಕರು, ಮೈಸೂರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]