Sunday, September 19 , 2021
ಜನಪ್ರತಿನಿಧಿಗಳ ವಿದ್ಯಾರ್ಹತೆ: ಡಾ.ಅಂಬೇಡ್ಕರ್ ಅವರ ನಿಲುವೇನು?

             ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಸುಧೀರ್ಘವಾದ ಚರ್ಚೆಗಳು ನಡೆದವು, ಅಂತಹ ಸಂದರ್ಭದಲ್ಲಿ ವಿಧಾನ ಸಭೆ ಮತ್ತು ಸಂಸತ್ತಿಗೆ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳ ವಿದ್ಯಾರ್ಹತೆಯ ಬಗ್ಗೆಯು ಕೂಡ ಬಹಳಷ್ಟು ಚರ್ಚೆ ನಡೆಯಿತು.

1948 ರ ಡಿಸೆಂಬರ್ ತಿಂಗಳಲ್ಲಿ ಕೆ.ಟಿ.ಶಾ  ರವರು ಅಭ್ಯರ್ಥಿಗಳ ಅರ್ಹತೆ ಕುರಿತು resolution ಮಂಡಿಸಿದಾಗ ಅನೇಕ ಸದಸ್ಯರು ಕನಿಷ್ಠ ವಿದ್ಯಾರ್ಹತೆ ಹೊಂದಿರಬೇಕು ಎಂದು ಮಾತ್ರ ಹೇಳುತಿದ್ದರೆ ಹೊರತು ಆದರೆ ಎಷ್ಟು ಎಂಬುದರ ಬಗ್ಗೆ ಯಾರು ನಿಖರವಾಗಿ ಹೇಳುತ್ತಿರಲಿಲ್ಲ.  ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೆ.ಟಿ. ಶಾ ರವರಿಗೆ ಉತ್ತರಿಸುತ್ತ “ಖಂಡಿತವಾಗಿಯೂ ಶಿಕ್ಷಣವು ವ್ಯಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಆದರೆ ಇಂದು ಈ ಸದನದಲ್ಲಿ ಅನೇಕರು ಯಾವುದೇ ಶಿಕ್ಷಣವನ್ನು ಗಳಿಸದ ವ್ಯಕ್ತಿಗಳು ಇದ್ದಾರೆ, ಅವರು ಜನರ ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ಧ್ವನಿ ಎತ್ತುತ್ತಿದ್ದಾರೆ, ನನ್ನ ಅಭಿಪ್ರಾಯದಲ್ಲಿ ಹೆಚ್ಚು ವಿದ್ಯಾವಂತನಾಗಿದ್ದರು ಸಹ ಜನರ ಸಮಸ್ಯೆಗಳ ಬಗ್ಗೆ ತಿಳುವಳಿಕೆಯಾಗಲಿ, ಅನುಭವವಾಗಲಿ ಇಲ್ಲದಿದ್ದರೆ ಅವನು ಜನಪ್ರತಿನಿಧಿಯಾಗಿ‌ ಯಾವುದೇ ಪ್ರಯೋಜನವಿರುವುದಿಲ್ಲ.
ಶಾಸನ ಸಭೆಯಲ್ಲಿ ಅದ್ಭುತವಾದ ಭಾಷಣಗಳನ್ನು ಮಾಡುವುದಕ್ಕಿಂತ ತಾವು ಪ್ರತಿನಿಧಿಸುವ ಪ್ರದೇಶದ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವುದು ಮತ್ತು ಆ ಸಮಸ್ಯೆಗಳನ್ನು ಬಗೆಹರಿಸುವುದೇ ಮುಖ್ಯ. ಸಮಸ್ಯೆಗಳ ಬಗ್ಗೆ ದೂರುವುದು, ಅದರ ಬಗ್ಗೆ ಮಾತನಾಡುವುದು ಬಹಳ ಸುಲಭದ ಕೆಲಸ ಆದರೆ ಅವುಗಳಿಗೆ ಪರಿಹಾರವನ್ನು ಸೂಚಿಸುವುದು ಬಹಳ ಕಠಿಣವಾದ ಕೆಲಸ. ಹಾಗಾಗಿ ಶಿಕ್ಷಣವು ಬಹಳ ಅವಶ್ಯಕ,‌ ಆದರೆ ಕೇವಲ B.A, ಮತ್ತು MA ಪದವಿ ಪಡೆದಿರುವವರು ಮಾತ್ರ ಬುದ್ದಿವಂತರು ಎಂಬುವುದನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ಯಾವುದೇ ವಿದ್ಯಾಭ್ಯಾಸವಿಲ್ಲದಿದ್ದರೂ ಬಹಳಷ್ಟು ಜನ ಬೌದ್ಧಿಕವಾಗಿ BA, MA ಓದಿರುವವರಿಗಿಂತಲೂ‌ ಹೆಚ್ಚು ಬುದ್ದಿವಂತರಾಗಿರುತ್ತಾರೆ. ಅವರು ಯಾವುದೇ ಶಾಲೆ ಅಥವಾ ವಿಶ್ವವಿದ್ಯಾಲಯದಲ್ಲಿ ಕಲಿಯದಿರಬಹುದು, ಆದರೆ ಅವರು BA, MA ಪದವಿ ಪಡೆದಿರುವವರಿಗಿಂತ  ಬಹಳ ಸಮರ್ಥರಾಗಿರುತ್ತಾರೆ.

ಪ್ರಮುಖವಾಗಿ ಸಾಕ್ಷರತೆ ಕಡಿಮೆ ಇರುವ ನಮ್ಮ ದೇಶದಲ್ಲಿ ಶಿಕ್ಷಣದ ಅರ್ಹತೆಯನ್ನು ನಿಗದಿ ಪಡಿಸುವುದರಿಂದ ಬಹುಸಂಖ್ಯಾತ ಜನರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರವಿರಿಸಿದಂತಾಗುತ್ತದೆ.  ಹಾಗಾಗಿ ನನ್ನ ಪ್ರಕಾರ ಒಬ್ಬ ಜನ ಪ್ರತಿನಿಧಿಗೆ ಇರಬೇಕಾದದ್ದು ಯಾವುದೇ ಪದವಿಗಿಂತ  ಮುಖ್ಯವಾಗಿ ಪ್ರಜ್ಞೆ (Knowledge) ಮತ್ತು ಶೀಲ ( Character) . ಬುದ್ಧ ಹೇಳುತ್ತಾನೆ, ಮನುಷ್ಯನಿಗೆ ಎರಡು ಗುಣಗಳು ಬಹಳ ಮುಖ್ಯ ಅವು ಯಾವುವೆಂದರೆ ಜ್ಞಾನ ಮತ್ತು ಶೀಲ, ಶೀಲ ರಹಿತ ಜ್ಞಾನವು ಬಹಳ ಅಪಾಯಕಾರಿ, ಜ್ಞಾನದ ಜೊತೆ ಸದಾ ಶೀಲವೂ ಅವಶ್ಯಕ. ಶೀಲವೆಂದರೆ ನಡವಳಿಕೆ, ನೈತಿಕ ಧೈರ್ಯ, ಹಾಗು ಯಾವುದೇ ಪ್ರಲೋಭಗಳಿಗೆ ಬಲಿಯಾಗದೆ ತನ್ನ ಆದರ್ಶಗಳಿಗೆ ಬದ್ದವಾಗಿರುವುದು. ಇಂದು ಪ್ರೊ.ಶಾ ರವರನ್ನು ಬೆಂಬಲಿಸಿ ಸದನದಲ್ಲಿ ಮಾತನಾಡಿದ ಒಬ್ಬ ಸದಸ್ಯರಲ್ಲೂ ಎರಡನೆಯ ಗುಣ ಕಾಣಲಿಲ್ಲಾ”. ಎಂದು ಹೇಳುತ್ತಾರೆ. .

              ಬಾಬಾ ಸಾಹೇಬರ ಮಾತು ಎಷ್ಟು ಸತ್ಯವಲ್ಲವೆ ? ಇಂದು ಭಾರತ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಬಹಳ ಮುಖ್ಯವಾದ ಕಾರಣ ನಮ್ಮ ಪ್ರತಿನಿಧಿಗಳಿಗೆ ‘ಶೀಲ’ ಇಲ್ಲದಿರುವುದು. ಹಾಗಾಗಿಯೆ ನಮ್ಮ ಪ್ರತಿನಿಧಿಗಳು ಪದವಿ, Phd ಮಾಡಿದ್ದರು ಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ಅಸಮರ್ಥರಾಗಿದ್ದಾರೆ. ನಮ್ಮ ದೇಶದ ಭವಿಷ್ಯ ನಿಂತಿರುವುದು ‘ಪ್ರಜ್ಞೆ’ ಮತ್ತು ‘ಶೀಲ’ ದಲ್ಲಿ ಹಾಗಾಗಿ ಇಂದು ಇವೆರಡನ್ನೂ ಬೆಳಸಿಕೊಳ್ಳುವ ಅವಶ್ಯಕತೆ ಪ್ರಜೆಗಳಿಗೂ ಹಾಗು ಜನಪ್ರತಿನಿಧಿಗಳಿಗೂ ಇದೆ.
-ಹರಿರಾಮ್. ಎ
ವಕೀಲರು, ಚಿಂತಕರು

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]