Monday, July 26 , 2021
ಗೌಡ್ತಿ-ಗೌಡ ಕಾಳಗದಲ್ಲಿ ಬೇರೆಯವರಿಗೇನು ಕೆಲಸ? | ಮಂಡ್ಯ ರಾಜಕಾರಣ ಎತ್ತಸಾಗುತ್ತಿದೆ?

ಮಂಡ್ಯ(20.03.2019): ಮಂಡ್ಯ ಲೋಕಸಭಾ ಕ್ಷೇತ್ರ ಇದೀಗ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಇಂದು ಸುಮಲತಾ ಅಂಬರೀಷ್ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನ ಯಶ್ ಹಾಗೂ ದರ್ಶನ್ ಸುಮಲತಾ ಜೊತೆ ಕಾಣಿಸಿಕೊಂಡಿದ್ದಾರೆ. ಸ್ಟಾರ್ ನಟರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಸಮಾವೇಶದಲ್ಲಿ ದರ್ಶನ್, ಯಶ್ ವಿರುದ್ಧ ಜೆಡಿಎಸ್ ನಾಯಕರು ಹರಿಹಾಯ್ದಿದ್ದಾರೆ. ಈ ನಡುವೆ ಮಂಡ್ಯದಲ್ಲಿ ಬಿಎಸ್ ಪಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಂದು ರೀತಿಯ ಗೊಂದಲದ ವಾತಾವರಣದಲ್ಲಿ ಮತದಾರರು ಸಿಲುಕಿದ್ದಾರೆ. ಜೆಡಿಎಸ್- ಸುಮಲತಾ ನಡುವೆ ನಡೆಯುತ್ತಿರುವ ಕಾಳಗ ಮಾಧ್ಯಮಗಳ ಬಾಯಿಗೆ ತುತ್ತಾಗಿದ್ದು, ಮಂಡ್ಯ ರಾಜಕೀಯ ವಿದ್ಯಮಾನಗಳು ಕರ್ನಾಟಕ ಸುದ್ದಿ ವಾಹಿನಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಗೆಲ್ಲಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್ ಗಳನ್ನು ಮಾಡಿರುವ ಬೆನ್ನಲ್ಲೇ ಇಂದು ಸ್ಟಾರ್ ನಟರನ್ನೊಳಗೊಂಡ ಸುಮಲತಾ ಸಮಾವೇಶ ಮತ್ತಷ್ಟು ರಾಜಕೀಯ ತಿರುವುಗಳಿಗೆ ಕಾರಣವಾಗಿದೆ. ಈ ಎಲ್ಲ ವಿದ್ಯಮಾನಗಳಲ್ಲಿ ಬಿಜೆಪಿ ತೆರೆಯ ಹಿಂದೆ ಸರಿದುಕೊಂಡಿದೆ. ಇನ್ನೊಂದೆಡೆಯಲ್ಲಿ ಬಿಎಸ್ ಪಿ ಮಂಡ್ಯದಲ್ಲಿ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲವಾದರೂ ಲೋಕಸಭಾ ಚುನಾವಣೆಗೆ ಸದ್ದು, ಸುದ್ದಿಯಿಲ್ಲದೇ ಕೆಲಸ ಆರಂಭಿಸಿದೆ ಎನ್ನಲಾಗಿದೆ. ಬಿಎಸ್ ಪಿಯು ಇನ್ನೆರಡು ದಿನಗಳಲ್ಲಿ ಮಂಡ್ಯ ಅಭ್ಯರ್ಥಿ ಘೋಷಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ನಿಖಿಲ್-ಸುಮಲತಾ ಸ್ಪರ್ಧೆ ಕೇವಲ ಪ್ರತಿಷ್ಠೆಯ ವಿಚಾರವಷ್ಟೇ?

ಮಂಡ್ಯ ಲೋಕಸಭಾ ಕ್ಷೇತ್ರ ಸಧ್ಯ ಜೆಡಿಎಸ್-ಸುಮಲತಾ ಪ್ರತಿಷ್ಠೆಯ ಕಣವಾಗಿ ಮಾತ್ರ ಉಳಿದಿದೆ. ನಿಖಿಲ್ ಕುಮಾರಸ್ವಾಮಿ ತನ್ನ ಅಪ್ಪ ಕುಮಾರಸ್ವಾಮಿ ಹಾಗೂ ತಾತ ದೇವೇಗೌಡರ ಪ್ರಾಬಲ್ಯವನ್ನು ಚುನಾವಣಾ ತಂತ್ರವನ್ನಾಗಿ ಮಾಡಿಕೊಂಡರೆ, ಇತ್ತ ಸುಮಲತಾ ತನ್ನ ಪತಿ ಅಂಬರೀಷ್ ಅವರ ಪ್ರಾಬಲ್ಯವನ್ನು ಚುನಾವಣಾ ತಂತ್ರವನ್ನಾಗಿ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಗೌಡ-ಗೌಡ್ತಿಯೂ ಪ್ರತಿಷ್ಠೆ!?

ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ವಿಚಾರ ಬಂದಾಗ ಮೊದಲು ಬಂದ ಪ್ರಶ್ನೆ ಸುಮಲತಾ ಗೌಡ್ತಿ ಅಲ್ಲ ಎಂದು. ನಿಖಿಲ್ ನಿಜವಾದ ಗೌಡ ಹಾಗಾಗಿ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಬೇಕು ಎಂದು ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗ ಪ್ರಚಾರ ಮಾಡಿತು ಎನ್ನಲಾಗಿದೆ. ಇಂದು ಸುಮಲತಾ ಪರವಾಗಿ ನಡೆದ ಸಮಾವೇಶದಲ್ಲಿ ನಿರೂಪಕರು ಹಾಗೂ ಸುಮಲತಾರನ್ನು ಬೆಂಬಲಿಸಿ ಆಗಮಿಸಿದ್ದ ನಾಯಕರು ಸುಮಲತಾ ಮಂಡ್ಯದ ಗೌಡ್ತಿ ಎಂದು ಒತ್ತಿ ಹೇಳುತ್ತಿದ್ದದ್ದು ಗಮನಾರ್ಹವಾಗಿತ್ತು. ಹಾಗಾದರೆ ನಿಖಿಲ್ ಹಾಗೂ ಸುಮಲತಾ ಸ್ಪರ್ಧೆ ಜಾತಿ ಪ್ರಾಬಲ್ಯವನ್ನು ಪ್ರತಿನಿಧಿಸುವಂತದ್ದೇ? ಬೇರೆ ಜಾತಿಯ ಮತದಾರರ ಓಟುಗಳು ಇವರಿಗೆ ಬೇಡವೇ? ಮಂಡ್ಯದಲ್ಲಿ ಕೇವಲ ಗೌಡರು ಮಾತ್ರ ಗೆಲ್ಲಲು ಅರ್ಹರೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

ಅಂಬರೀಶ್ ಋಣ ತೀರಿಸಲು ಬಂದ ಸ್ಟಾರ್ ಗಳು

ಇಂದು ಸುಮಲತಾ ಪರವಾಗಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ನಟ ಯಶ್ ಮಾತನಾಡುತ್ತಾ, ಅಂಬರೀಷ್ ಅವರ ಋಣವನ್ನು ತೀರಿಸಲು ನಾವಿಂದು ಇಲ್ಲಿ ಬಂದು ನಿಂತಿದ್ದೇವೆ,  ಅಂಬರೀಷ್ ನಮಗಾಗಿ ಏನೆಲ್ಲ ಮಾಡಿದ್ದಾರೆ ಎನ್ನವಂತಹ ಹೇಳಿಕೆಯನ್ನು ನೀಡಿದ್ದಾರೆ. ಇವರೇನೋ ಅಂಬರೀಷ್ ಋಣ ತೀರಿಸಲು ಬಂದಿದ್ದಾರೆ. ಇವರ ಋಣ ತೀರಿಕೆಯಲ್ಲಿ ಮಂಡ್ಯದ ಜನ ಭಾಗಿಗಳಾಗಬೇಕೆ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]