
ಸಿನಿಡೆಸ್ಕ್ (26-03-2021): ಮಲೆಯಾಳಂ ಚಿತ್ರರಂಗದ ಖ್ಯಾತ ನಾಯಕ ನಟ ದುಲ್ಕರ್ ಸಲ್ಮಾನ್ ನೈಜ ಕತೆಯಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ‘ಕುರುಪ್’ ಎಂದು ಹೆಸರಿಡಲಾಗಿದೆ.
ಈ ಚಿತ್ರದ ಟೀಸರ್ ಇಂದು ಐದು ಭಾಷೆಗಳಲ್ಲಿ ಬಿಡುಗಡೆಗೊಂಡು ಭಾರಿ ಸದ್ದು ಮಾಡುತ್ತಿದೆ. ಕುಖ್ಯಾತ ದರೋಡೆಕೋರನೊಬ್ಬನ ನೈಜ ಕತೆಯಾಧಾರಿಸಿದ ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಸುಕುಮಾರ ಕುರುಪ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದುಲ್ಕರ್ ಸಲ್ಮಾನ್ ಮಲೆಯಾಳಂ ಚಿತ್ರರಂಗದ ಬಹುಬೇಡಿಕೆಯ ನಟ. ಈಗಾಗಲೆ ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಸಹ ನಟಿಸಿ ಹೆಸರು ಮಾಡಿರುವ ದುಲ್ಕರ್ ಗೆ ಕನ್ನಡದಲ್ಲಿ ಕುರುಪ್ ಮೊದಲ ಚಿತ್ರವಾಗಲಿದೆ. ಮೊಟ್ಟ ಮೊದಲ ಬಾರಿಗೆ ಪಂಚ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಮೂಲಕ ದುಲ್ಕರ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಲಿದ್ದಾರೆ.