Sunday, September 19 , 2021
ಕೋವಿಡ್ ಸಮಸ್ಯೆಗೆ ಸಹಾಯವಾಣಿ ಆರಂಭಿಸಿದ ಶಾಸಕ ಎನ್. ಮಹೇಶ್

ಕೊಳ್ಳೇಗಾಲ (23-05-2021): ಕೋವಿದ್-19 ವೈರಸ್ ನಿಂದ ಜನಸಾಮಾನ್ಯರು ತತ್ತರಿಸುತ್ತಿರುವ ಸಂಧರ್ಭದಲ್ಲಿ ಕೊಳ್ಳೇಗಾಲದ ಶಾಸಕರಾದ ಎನ್. ಮಹೇಶ್ ತಮ್ಮ ಕ್ಷೇತ್ರದ ಜನತೆಗೆ ಕೋವಿದ್-19 ನ ತುರ್ತು ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಸಹಾಯವಾಣಿಯನ್ನು ಆರಂಭಿಸಿದ್ದಾರೆ.

ಸಹಾಯವಾಣಿಯನ್ನು ಆರಂಭಿಸಿದ ಶಾಸಕ ಎನ್ ಮಹೇಶ್ ಮಾತನಾಡಿ ಕ್ಷೇತ್ರದ ಎಲ್ಲಾ ಜನಸಾಮಾನ್ಯರು ಸಂಕೋಚ ಹಾಗೂ ಭಯವನ್ನು ಬಿಡಬೇಕು. ಸಂಕೋಚದಿಂದ ಕೋವಿದ್ ಪರೀಕ್ಷೆ ಮಾಡಿಸದೇ ಇದ್ದಲ್ಲಿ ಹಾಗೂ ಕೋವಿದ್ ಪರೀಕ್ಷೆ ಮಾಡಿಸಿದ ನಂತರ ಪಾಸಿಟಿವ್ ಬಂದಾಗ ಭಯಬೀತರಾದರೆ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇರುತ್ತದೆ ಆದ ಕಾರಣ ಸಂಕೋಚ ಹಾಗೂ ಭಯಮುಕ್ತರಾಗಿರಬೇಕು ಎಂದರು. ಸಹಾಯವಾಣಿಯ ಮುಖಾಂತರ ಆಸ್ಪತ್ರೆಯಲ್ಲಿ ಬೆಡ್ ಲಭ್ಯತೆ, ಔಷಧೋಪಚಾರ, ಲಸಿಕೆ ಲಭ್ಯತೆ, ಸ್ವಾಬ್ ಟೆಸ್ಟಿಂಗ್, ಹಳ್ಳಿಗಳಿಗೆ ಸ್ಯಾನಿಟೈಸಿಂಗ್, ಹಾಗೂ ಆಸ್ಪತ್ರೆಗೆ ತೆರಳಲು ವಾಹನದ ವ್ಯವಸ್ಥೆ ಮುಂತಾದವುಗಳ ಬಗ್ಗೆ ಮಾಹಿತಿ ದೊರಕುತ್ತದೆ ಎಂದು ಶಾಸಕರು ತಿಳಿಸಿದರು.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಹಾಯವಾಣಿ ಲಭ್ಯತೆ ಇರುತ್ತದೆ. ಕಛೇರಿ ನಂಬರ್, 08224-297005 ಮೊಬೈಲ್ ನಂಬರ್, 9448468972, 9606267397, 9538035444 ಈ ನಂಬರ್ ಗಳಿಗೆ ಕರೆ ಮಾಡಿವ ಮೂಲಕ ಕೋವಿದ್ ಮಾಹಿತಿ ಪಡೆಯಿರಿ ಎಂದು ಶಾಸಕ ಎನ್ ಮಹೇಶ್ ಮನವಿ ಮಾಡಿದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]