Saturday, April 4 , 2020
ಕೆಜಿಎಫ್ -2 | ಡೆತ್ ವಾರೆಂಟ್ ನೀಡುವ ಮಹಿಳೆ ಎಂಟ್ರಿ | ಕೆಜಿಎಫ್ ಗೆ ಹೊಸ ನಾಯಕಿ!

ಬೆಂಗಳೂರು(09.02.2020): ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಸುದ್ದಿಯೊಂದನ್ನು ನೀಡಿದ್ದು, ಕೆಜಿಎಫ್ -2 ಚಿತ್ರದಲ್ಲಿ ಹೊಸ ನಾಯಕಿಯ ಎಂಟ್ರಿಯಾಗಲಿದೆ ಎಂದು ಹೇಳಿದ್ದಾರೆ.

ಬಾಲಿವುಡ್ ನಟಿ ರವೀನಾ ಟಂಡನ್ ಕೆಜಿಎಫ್ -2 ಚಿತ್ರದಲ್ಲಿ ರಮೀಕಾ ಸೇನ್ ಎನ್ನುವ ಪಾತ್ರದಲ್ಲಿ ಮಿಂಚಲಿದ್ದಾರೆ. ರವೀನಾ ಟಂಡನ್ ಅವರ ಎಂಟ್ರಿಯನ್ನು “ ಡೆತ್ ವಾರೆಂಟ್ ನೀಡುವ ಮಹಿಳೆ ಬಂದಾಯಿತು” ಎಂದು ಪ್ರಶಾಂತ್ ನೀಲ್ ಬಣ್ಣಿಸಿ ಟ್ವೀಟ್ ಮಾಡಿದ್ದಾರೆ.

ಕೆಜಿಎಫ್ ನ ಅತೀ ದೊಡ್ಡ ಪಾತ್ರ ಅಧೀರನಾಗಿ ನಟ ಸಂಜಯ್ ದತ್ ಅಬ್ಬರಿಸಲಿದ್ದಾರೆ. ಇದೀಗ ಡೆತ್ ವಾರೆಂಟ್ ನೀಡುವ ಮಹಿಳೆಯ ಎಂಟ್ರಿಯೂ ದೊರಕಿದೆ. ಕೆಜಿಎಫ್ ಮೊದಲನೆಯ ಭಾಗದಲ್ಲಿಯೇ ಜನರನ್ನು ಅದ್ಭುತವಾಗಿದ್ದ ರಂಜಿಸಿದ್ದ ಚಿತ್ರ ತಂಡ, ಎರಡನೇ ಭಾಗದಲ್ಲಿ ಇನ್ನಷ್ಟು ಹೆಚ್ಚಿನ ಗುಣಮಟ್ಟವನ್ನು ನೀಡುವ ನಿರೀಕ್ಷೆಗಳು ಸದ್ಯ ಮೂಡಿವೆ. ಅಧೀರನೊಂದಿಗೆ ರಾಕಿ ಭಾಯ್ ಗುದ್ದಾಟ ನೋಡಲು ಸಿನಿ ಪ್ರಿಯರು ಚಿತ್ರ ಬಿಡುಗಡೆವರೆಗೆ ಕಾಯಲೇ ಬೇಕಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]