
ನ್ಯೂಯಾರ್ಕ್ (19-20-2021): ಜಗತ್ತಿನ ಮಾನವ ಸಂಕುಲಕ್ಕೆ ಸವಾಲಾಗಿರುವ ಕರೋನಾ ವೈರಸ್ ಗೆ ಕೆಲವು ದೇಶಗಳು ಲಸಿಕೆಯನ್ನು ಕಂಡುಹಿಡಿದಿವೆ. ಆದರೆ ಈ ಲಸಿಕೆಯ ಹಂಚಿಕೆಯು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಮಹಾಕಾರ್ಯದರ್ಶಿ ಆಂಟೋನಿಯಾ ಗುಟೇರಸ್ ಕಿಡಿಕಾರಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆನ್ಲೈನ್ ಸಭೆಯಲ್ಲಿ ಮಾತನಾಡಿದ ಗುಟೇರಸ್ ಕೇವಲ 10 ದೇಶಗಳು ಒಟ್ಟು ಲಸಿಕೆಯ ಶೇಕಡಾ 75 ರಷ್ಟನ್ನು ಪಡೆದಿವೆ ಆದರೆ 130ಕ್ಕೂ ಅಧಿಕ ದೇಶಗಳಿಗೆ ಇದುವರೆಗೂ ಕೇವಲ ಒಂದೇ ಒಂದು ಡೋಸ್ ಸಿಕ್ಕಿಲ್ಲ ಎಂದು ಅಸಮಧಾನಗೊಂಡಿದ್ದಾರೆ.
ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಲಸಿಕೆಗಳನ್ನು ಎಲ್ಲಾ ದೇಶಗಳಿಗೆ ನ್ಯಾಯರೀತಿಯಿಂದ ಹಂಚುವ ಉದ್ದೇಶದಿಂದ ‘ಕೋವ್ಯಾಕ್ಸ್’ ಯೋಜನೆಯನ್ನು ಆರಂಭಿಸಿದೆ. ಎಲ್ಲಾ ಸದಸ್ಯ ರಾಷ್ಟ್ರಗಳು ಈ ಯೋಜನೆಯನ್ನು ಬೆಂಬಲಿಸಬೇಕೆಂದು ಗುಟೇರಸ್ ಒತ್ತಾಯಿಸಿದರು.