Saturday, April 4 , 2020
ಒಂದೇ ಗೋತ್ರದ ಯುವಕನನ್ನು ವರಿಸಿದ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಹೆತ್ತವರು!

ನವದೆಹಲಿ(22.02.2020): ಒಂದೇ ಜಾತಿಯ ಒಂದೇ ಗೋತ್ರದ ಯುವಕ-ಯುವತಿ ರಹಸ್ಯವಾಗಿ ಮದುವೆಯಾಗಿದ್ದು, ಈ ವಿಚಾರ ತಿಳಿದುಕೊಂಡ ಪೋಷಕರು ತಮ್ಮ 25 ವರ್ಷದ ಮಗಳನ್ನು ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ.

ಶೀತಲ್ ಚೌಧರಿ ಎಂಬ ಯುವತಿ ತನ್ನ ಹೆತ್ತವರಿಂದಲೇ ಕೊಲೆಯಾದ ಯುವತಿಯಾಗಿದ್ದಾಳೆ. ತನ್ನ ಪ್ರಿಯಕರ ಅಂಕಿತ್ ಭಟಿ ಎಂಬಾತನನ್ನು ಈಕೆ ರಹಸ್ಯವಾಗಿ ವಿವಾಹವಾಗಿದ್ದಳು. ಕಳೆದ ಜನವರಿ 29ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮೂರು ದಿನಗಳ ನಂತರ ಶೀತಲ್ ಕುಟುಂಬದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ ರವಿಂದರ್​ ಛೌಧರಿ, ತಾಯಿ ಸುಮನ್​, ಅಂಕಲ್​ ಸಂಜಯ್​ ಮತ್ತು ಸಂಬಂಧಿತರಾದ ಓಂ ಪ್ರಕಾಶ್​ ಪರ್ವೇಶ್​ ಮತ್ತು ಅಂಕಿತ್ ಬಂಧಿತ ಆರೋಪಿಗಳಾಗಿದ್ದಾರೆ.

ಜ.29ರಂದು ಶೀತಲ್ ರನ್ನು ಕತ್ತು ಹಿಸುಕಿ ಕೊಲೆಗೈದು ಕಾರಿನಲ್ಲಿ ಕುಳಿತಿರುವಂತೆ ಬಿಂಬಿಸಿ ಸಾಗಿಸಲಾಗಿದೆ. ಬಳಿಕ ದೆಹಲಿಯಿಂದ 80ರಿಂದ 100 ಕಿ.ಮೀ.ದೂರವಿರುವ ಆಲಿಗಢ್ ಜವಾನ್ ಬಳಿಯಿರುವ ಕಾಲುವೆಗೆ ಎಸೆದು ಅದೇ ದಿನ ರಾತ್ರಿ ಮತ್ತೆ ಮನೆಗೆ ಮರಳಿದ್ದಾರೆ. ಈ ಕೃತ್ಯಕ್ಕೆ ಅವರ ಸಂಬಂಧಿಕರೂ ಸಹಕರಿಸಿದ್ದಾರೆ. ಜನವರಿ 30ರಂದು ಶೀತಲ್ ಮೃತದೇಹ ದೊರಕಿತ್ತು. ಆಕೆಯ ಬಟ್ಟೆಯ ಗುರುತಿನಿಂದ ಪತಿ ಅಂಕಿತ್ ಮೃತದೇಹವನ್ನು ಗುರುತಿಸಿದ್ದಾನೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]