Sunday, September 19 , 2021
ಒಂದು ರೂಪಾಯಿ ಖರ್ಚಿಲ್ಲದೇ ಇವರು ಮದುವೆ ಊಟ ಹಾಕಿಸ್ತಾರಂತೆ! | ಹೇಗೆ? | ಈ ಸುದ್ದಿ ಓದಿ

ಸಿನಿಡೆಸ್ಕ್: ಖರ್ಚೇ ಇಲ್ಲದೇ ಇವರು ಮದುವೆ ಊಟ ಹಾಕಿಸ್ತಾರಂತೆ! ಇವರ ಮದುವೆ ಊಟ ಸಂಪೂರ್ಣವಾಗಿ ಉಚಿತವಾಗಿ ನಡೆದಿದೆಯಂತೆ… ಆದರೆ ವಿಚಿತ್ರ ಅಂದ್ರೆ… ಈ ಮದುವೆ ಊಟ ಹೊಟ್ಟೆ ತುಂಬಿಸಲ್ಲ… ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆಯಂತೆ!

ಹೌದು…! ಮದುವೆ ಊಟ ಎನ್ನೋದು ಹೊಸಬರ ಜೀರೋ ಬಜೆಟ್ ಸಿನಿಮಾ.  ಸಂಶಯ ಎನ್ನುವುದು ಹೇಗೆ ಮನುಷ್ಯನನ್ನು ಕೊಲ್ಲುತ್ತದೆ. ಕೌಟುಂಬಿಕ ಅಶಾಂತಿಯನ್ನು ಹರಡುತ್ತದೆ ಎನ್ನುವ ಕಥೆಯನ್ನಿಟ್ಟುಕೊಂಡು ಚಿತ್ರ ತಂಡ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು. ಜೀರೋ ಬಜೆಟ್ ನಲ್ಲಿ ಸಿನಿಮಾ ನಿರ್ಮಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

 ಇದೊಂದು ವಿಡಂಬನಾತ್ಮಕ ಚಿತ್ರವಾಗಿದೆ. ಸಂಬಂಧದೊಳಗೆ ಸಂಶಯ ನುಸುಳಿ ಹೇಗೆ ಎಲ್ಲವನ್ನು ಕೆಡಿಸುತ್ತದೆ ಎನ್ನುವುದನ್ನು ಚಿತ್ರದ ಕಥೆ ತೋರಿಸುತ್ತದೆ ಎಂದು ಕಥೆ ಬರೆದು ನಿರ್ದೇಶಿಸಿರುವ ನಿರ್ದೇಶಕ ಮಹೇಶ್ ಲೋಣಿ ಹೇಳಿದ್ದಾರೆ. ಚಿತ್ರಕ್ಕೆ ಸ್ನೇಹಿತರಿಂದ ಕ್ಯಾಮರವನ್ನು ಉಚಿತವಾಗಿ ಪಡೆದು ಶೂಟಿಂಗ್ ನಡೆಸಲಾಗಿದೆ. ಕಲಾವಿದರಿಗೆ ಅವರ ಬಿಡುವಿನ ಸಮಯದಲ್ಲಿ ಶೂಟಿಂಗ್ ನಡೆಸಲಾಗಿದೆ.  ಡಬ್ಬಿಂಗ್ ರಾತ್ರಿ ಹೊತ್ತು ಸ್ಟುಡಿಯೋಗಳಲ್ಲಿ ಮಾಡಲಾಗಿದೆ ಎಂದು ಚಿತ್ರ ತಂಡ ಹೇಳಿದೆ.  ಚಿತ್ರದಲ್ಲಿ ಆಕಾಶ್, ಗಾಯತ್ರಿ, ಜೈ ಸಾವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]