Sunday, September 19 , 2021
ಒಂದು ಭಾರತ, ಎರಡು ವೈರಸ್!

ಇಡೀ ಜಗತ್ತು ಇಂದು ಕೊರೊನಾ ವೈರಾಣುವಿನಿಂದ ತತ್ತರಿಸಿ ಹೋಗಿದೆ. ಆದರೆ ನಮ್ಮ ದೇಶ ಮಾತ್ರ ಎರಡು ವೈರಾಣುಗಳಿಂದ ತತ್ತರಿಸಿ ಹೋಗಿದೆ. ಒಂದು ವೈರಾಣು ನಿನ್ನೆ-ಮೊನ್ನೆಯದು,  ಇನ್ನೊಂದು ಬಹಳ ಪ್ರಾಚೀನವಾದದ್ದು.

ಸಮಾಜದ ವಿಕಾಸನದ ಜೊತೆಗೆ ಮನುಷ್ಯನ ಆಲೋಚನೆಗಳು ಮತ್ತು ಆದ್ಯತೆಗಳು ಬದಲಾಗುತ್ತಾ ಹೋದವು ! ಥಾಮಸ್ ಹಾಬ್ಸ್ ಹೇಳುವ ಹಾಗೆ ಅನಾದಿಕಾಲದಲ್ಲಿ ಮೂಲಭೂತವಾಗಿ,  “Human life was solitary, poor, nasty , brutish and short” ಆದರೆ ಇಂದು ಆಧುನಿಕ ಯುಗದಲ್ಲಿ Global Village ಹಾಗೂ world without boundaries ಎನ್ನುವ ಹಂತಕ್ಕೆ ತಲುಪಿದ್ದೇವೆ.  ಜಗತ್ತಿನ ಯಾವುದೇ ಭಾಗದಲ್ಲಿ ಮನುಷ್ಯನು ಜೀವಿಸುತಿದ್ದರೂ ಅವನಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲದ ಬೇರೆ ಯಾವುದೋ ಭಾಗದಲ್ಲಿ ಯಾವುದೋ ವ್ಯಕ್ತಿಗೆ/ ಸಮಾಜಕ್ಕೆ ಸಮಸ್ಯೆಯಾದಾಗ ಆ ಸಮಸ್ಯೆಗೆ ಮಿಡಿಯುವಂತ ಮನಸ್ಸು ಹಾಗು ಮಾನವೀಯತೆಯನ್ನು ಬೆಳಸಿಕೊಂಡಿದ್ದೇವೆ. ರಾಜನ/ರಾಜ್ಯದ ಉದ್ದೇಶವು ಕೇವಲ ತನ್ನ ಸಾಮ್ರಾಜ್ಯ ವಿಸ್ತರಣೆಯ ಜೊತೆಗೆ ತನ್ನ ಹಾಗು ತನ್ನವರ ರಕ್ಷಣೆಯು ಮಾತ್ರವಾಗಿತ್ತು, ಆದರೆ ಸಮಾಜದ ವಿಕಾಸದ ಜೊತೆಗೆ ಸರ್ಕಾರಗಳ ಮಾದರಿಯೂ ಬದಲಾಗುತ್ತಾ ಕೊನೆಗೆ ಸರ್ವರಿಗೂ ಅನಕೂಲವಾಗುವಂತಹ, ಅಂದರೆ ವ್ಯಕ್ತಿಯ ಜೊತೆಗೆ ಸಮಾಜಕ್ಕೂ ಪೂರಕವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಆ ಪ್ರಜಾಪ್ರಭುತ್ವ ಸರ್ಕಾರದ ಮುಖಾಂತರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅನ್ನುವ ರೀತಿಯಲ್ಲಿ ಮನುಷ್ಯನ ಪ್ರತಿಯೊಂದು ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಕಲ್ಯಾಣ ರಾಜ್ಯದ ಪರಿಕಲ್ಪನೆಯ ಜೊತೆಗೆ ವ್ಯಕ್ತಿಯ ಅಭಿವೃದ್ಧಿಯ ಏಕೈಕ ಉದ್ದೇಶವನ್ನು ಇಟ್ಟುಕೊಂಡು ಇಂದು ಸರ್ಕಾರಗಳ ರಚನೆ ಮತ್ತು ಕೆಲಸಗಳು ನಡೆಯತೊಡಗಿದವು.

ಭಾರತದಲ್ಲಿ ಮೊದಲಿನಿಂದಲೂ ಥಾಮಸ್ ಹಾಬ್ಸ್ ಹೇಳುವ ಹಾಗೆ ಇಲ್ಲಿನ ಒಂದಿಷ್ಟು ಮನಸ್ಸುಗಳು ಇಡೀ ಸಮಾಜವನ್ನು ಶ್ರೇಣೀಕೃತ ವ್ಯವಸ್ಥೆಯಾಗಿಸಿ ಬಹಳ brutish ಹಾಗು nasty ಆಗಿ ಸಮಾಜವನ್ನು ನಡೆಸಿಕೊಂಡು ಬಂದ ಪರಿಣಾಮ ಇಡೀ ದೇಶವು ಅನಕ್ಷರತೆ, ಬಡತನ ಮತ್ತು ಮೌಢ್ಯಕ್ಕೆ  ತುತ್ತಾಯಿತು. ಇದರ ಪರಿಣಾಮವಾಗಿ ಒಂದಿಷ್ಟು ಸಮುದಾಯಗಳಿಗೆ ಅನುಕೂಲವಾಯಿತಾದರೂ ಬಹುಸಂಖ್ಯಾತ ಭಾರತೀಯರಿಗೆ ದೊಡ್ಡ ಸಮಸ್ಯೆಯಾಯಿತು. ಜೊತೆಗೆ ಅಸಹಾಯಕ ಮನಸ್ಥಿತಿಯು ಸೃಷ್ಟಿಯಾಗಿ ಕ್ರಿಯಾಶೀಲತೆಯು ನಾಶವಾಯಿತು.  ಹಾಗಾಗಿ ಭಾರತ ದೇಶವು ಶತಮಾನಗಳ ಕಾಲ ಪರಕೀಯರ ಆಡಳಿತಕ್ಕೆ ಒಳಪಟ್ಟಿತು. ಕೊನೆಯದಾಗಿ ಬ್ರಿಟಿಷರ ಕಾಲದಲ್ಲಿ ಸರ್ವ ಭಾರತೀಯರಿಗೆ ಶಿಕ್ಷಣ ಹಾಗ ಉದ್ಯೋಗದ ಹಕ್ಕು ಸಿಕ್ಕಿತು, ಜೊತೆಗೆ ಒಂದಿಷ್ಟು ಜಾಗೃತಿಯೂ ಮೂಡಿತು. ಆದರೆ ಅನಾದಿಕಾಲದಿಂದಲೂ ಈ ಜಾಗೃತಿಯ ಕಡು ವೈರಿಗಳಾದ ಸನಾತನವಾದಿಗಳು ಅದನ್ನು ಸಹಿಸಲಿಲ್ಲ! ಆದರೂ ಜನರ ಜಾಗೃತಿ, ರಾಷ್ಟ್ರಪ್ರೇಮ, ಏಕತಾಭಾವ ಹೆಚ್ಚಾದ ಕಾರಣ ಭಾರತವು ಹಲವು ಹೋರಾಟಗಳ ನಂತರ ಸ್ವಾತಂತ್ರ್ಯವನ್ನು ಗಳಿಸಿತು.

ಸ್ವಾತಂತ್ರ್ಯೋತ್ತರ ಭಾರತವನ್ನು ಆಧುನಿಕತೆ ಮತ್ತು ಮಾನವೀಯತೆಯ ಕಡೆಗೆ ಸಾಗಿಸಲು ಈ ನೆಲಕ್ಕೆ ಒಗ್ಗುವ ಮತ್ತು ಇಲ್ಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಕೊಟ್ಟು ,ನಾವೆ ಆಯ್ಕೆ ಮಾಡುವ ನಮ್ಮ ಸರ್ಕಾರಗಳಿಗೆ ನೀಲಿ ನಕ್ಷೆಯಾಗಬಲ್ಲಂತಹ ಅದ್ಭುತವಾದ ಸಂವಿಧಾನವು ರಚನೆಯಾಯಿತು.  ನಂತರ ಆ ಸಂವಿಧಾನದ ಅಡಿಯಲ್ಲಿಯೇ ಸರ್ಕಾರಗಳು ರಚನೆಯಾದವು. ಆದರೆ ಯಾವ ಬದಲಾವಣೆಗಳನ್ನು ಬಯಸದ ಒಂದಿಷ್ಟು ಯಥಾಸ್ಥಿತಿವಾದಿಗಳು ಮಾತ್ರ ಸಮಾಜವು ಅನಾಗರಿಕವಾಗಿ Brutish and Nasty ಆಗಿಯೇ ಇರಬೇಕು ಎಂದು ಬಯಸುವ ಹೀನ ಮನಸ್ಸುಗಳು ಭಾರತವನ್ನು ಮತ್ತದೇ ಅನಕ್ಷರತೆ, ಬಡತನ ಮತ್ತು ಮೌಢ್ಯದ ಕೂಪಕ್ಕೆ ತಳ್ಳುವ ವಿಕೃತ ಆಲೋಚನೆಗಳೊಂದಿಗೆ ಕಾರ್ಯ ಪ್ರವೃತ್ತರಾಗಿವೆ. ಈ ಮೂಲಕ ವಿಕಸನಗೊಳ್ಳುತ್ತಿರುವ ಮನಸ್ಸು ಮತ್ತು ಮೆದುಳಿಗೆ ಜಾತಿ-ಧರ್ಮವೆಂಬ ವಿಷ ಬೀಜಗಳನ್ನು ಬಿತ್ತಿ ಸಮಾಜ ಮತ್ತು ದೇಶವನ್ನು ಹಿಂದಕ್ಕೆ ಎಳೆಯುವ ಕೆಲಸವನ್ನು ಮಾಡತೊಡಗಿದರು, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಇರುವ ಕಾರಣಕ್ಕಾಗಿ ತಮ್ಮ ಯಥಾಸ್ಥಿತಿವಾದವನ್ನು ಜಾರಿಮಾಡಲು ಜನರ ಮನ್ನಣೆಯ ಜೊತೆಗೆ ಸರ್ಕಾರಗಳ ಅವಶ್ಯಕತೆ ಇರುವ ಕಾರಣಕ್ಕೆ ತಮ್ಮ ಅಮಾನವೀಯ, ಅಪ್ರಬುದ್ಧ ಹಾಗು ಅಸಹಜವಾದ ಆಲೋಚನೆಗಳಿಗೆ ಒಂದು ಸಿದ್ಧಾಂತವನ್ನು ಕೊಟ್ಟು ಆ ಸಿದ್ದಾಂತವನ್ನು ಜನರ ಮನಸ್ಸಿಗೆ ಹಾಕಲು ಒಂದಿಷ್ಟು ಹಿಂಸಾತ್ಮಕ ಕಾರ್ಯಕ್ರಮಗಳ ಜೊತೆಗೆ ವೈಷಮ್ಯ, ದ್ವೇಷ, ಮತ್ತು ಅಸಹನೆಯನ್ನು ಬಿತ್ತ ತೊಡಗಿದರು. ಅದರ ಪರಿಣಾಮವಾಗಿ ಇಂದು ಭಾರತ ದೇಶವು ಮತ್ತೆ ಈ ಯಥಾಸ್ಥಿತಿವಾದಿಗಳ ಕಪಿಮುಷ್ಟಿಗೆ ಸಿಕ್ಕಿ ನಲುಗುವಂತಾಗಿದೆ.

ಈ ಯಥಾಸ್ಥಿತಿವಾದಿಗಳು ಬಹಳ ವಿಚಿತ್ರ ಹಾಗು ವಿಷಕಾರಿಗಳು. ತಾವು ಮಾತ್ರ ತಮ್ಮ ಸಂತತಿಗಳಿಗೆ ಆಧುನಿಕ ಶಿಕ್ಷಣ ಮತ್ತು ಬದುಕನ್ನು ಕೊಟ್ಟು ತಮ್ಮದಲ್ಲದ ಯಾವುದೋ ದೇಶದ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿ ಕೊಂಡು ದೇಶ-ಧರ್ಮ-ಭಾಷೆಗಳನ್ನು ಮರೆತು ಬದುಕೊಂದೇ ತಮ್ಮ ಗುರಿಯನ್ನಾಗಿಸಿಕೊಂಡು ವಿದೇಶಗಳಲ್ಲಿ ಜಂತುಗಳಂತೆ ಜೀವಿಸುತ್ತಾ! ಇತರರ ತಲೆಯೊಳಗೆ ಜಾತಿ-ಧರ್ಮ-ಭಾಷೆ-ಸಂಸ್ಕ್ರತಿ-ಪರಂಪರೆ-ದೇಶ-ಸೈನ್ಯ ಎಂಬ ಇತ್ಯಾದಿಗಳನ್ನು ಭಾವನಾತ್ಮಕವಾಗಿ ತುಂಬಿಸಿ ಇವರನ್ನು ವ್ಯವಸ್ಥಿತವಾಗಿ ಶಿಕ್ಷಣ-ಉದ್ಯೋಗ ಮತ್ತು ಸುಸ್ಥಿರ ಬದುಕಿನಿಂದ ದೂರ ಉಳಿಸಿ ಅವರ ಕಾಲಾಳುಗಳಾಗಿ ಬಳಸಿಕೊಂಡು ದೇಶವನ್ನು ಛಿದ್ರ.. ಛಿದ್ರ ಮಾಡಲೊರಟಿದ್ದಾರೆ. ಇವರಿಗೆ ದೇಶಪ್ರೇಮ, ಧರ್ಮ, ದೇವರು ಮತ್ತು ಸೈನ್ಯ ಕೇವಲ ತಮ್ಮ propaganda ಗಾಗಿ ಉಪಯೋಗಿಸಿಕೊಳ್ಳುವ theme ಅಷ್ಟೇ, ಇವುಗಳ ಮೇಲೆ ಅವರಿಗೆ ಯಾವುದೇ ಭಾವನಾತ್ಮಕ ಸಂಬಂಧವಾಗಲಿ commitment ಆಗಲಿ ಇಲ್ಲಾ !.

‌‌‌‌      ತಮ್ಮ ದೈನಂದಿನ ಬದುಕನ್ನು ನಡೆಸಲು ಕಷ್ಟಸಾಧ್ಯವಾಗಿ ದೇವರು-ಧರ್ಮದ ಮೊರೆ ಹೋಗಿ ನಾಲ್ಕು ಗೋಡೆಗಳ ಮಧ್ಯೆ ಚಿಲ್ಲರೆ ಕಾಸನ್ನು ಆಯ್ದುಕೊಂಡು ಹೋಗುತಿದ್ದವರು, ಇಂದು ದೇಶದ ಎಲ್ಲಾ ಅಧಿಕಾರಿಯುತ ಸ್ಥಾನಗಳನ್ನು, ಹಣಕಾಸಿನ ಸಂಸ್ಥೆಗಳನ್ನು, ವ್ಯಾಪಾರ ವಹಿವಾಟುಗಳನ್ನು ಹಾಗು ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಹೇಗೆ ಸಾಧ್ಯವಾಯಿತು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳನ್ನು ರಚಿಸುವಷ್ಟು ಜನಸಂಖ್ಯೆ ಇಲ್ಲದಿದ್ದರು! ಸರ್ಕಾರಗಳನ್ನು ರಚಿಸಲು ಸಾಧ್ಯವಾಗಿದ್ದಾದರು ಹೇಗೆ ಇವರಿಗೆ? ಇದೆಲ್ಲದಕ್ಕೂ ಉತ್ತರವೇ ಅವರ ಮೇಲಿನ Modus operandi ಅವರ ಸಿದ್ದಾಂತ, ಕಾರ್ಯಕ್ರಮ ಹಾಗು ಅಭಿಪ್ರಾಯಗಳ ಉದ್ದೇಶ ಕೇವಲ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದು! ಏಕೆಂದರೆ ಅಲ್ಪ ಸಂಖ್ಯೆಯಲ್ಲಿ ಇರುವ ಇವರಿಗೆ ಇರುವ ಮಾರ್ಗವಿದೊಂದೆ. ಒಗ್ಗಟ್ಟು, ಸಹೋದರತೆ, ಸಹಬಾಳ್ವೆ  ಇವರ ವೈರಿ, ಇವರ ಅಸ್ತಿತ್ವಕ್ಕೆ ಇರುವ ದಾರಿ ಅಸಹಿಷ್ಣುತೆ, ದ್ವೇಷ ಮತ್ತು ಹಿಂಸೆಯೊಂದೆ!

ಸೈನ್ಯ ಹಾಗು ದೇಶಪ್ರೇಮದ ಬಗ್ಗೆ ಮಾತನಾಡುವ ಇವರೇ ನಮ್ಮ ದೇಶದ ರಹಸ್ಯಗಳನ್ನು ಪಾಕಿಸ್ತಾನ ಸೇರಿದಂತೆ ಬೇರೆ ದೇಶಗಳಿಗೆ ಮಾರಾಟ ಮಾಡಿಕೊಂಡಿದ್ದಾರೆ, ತಮ್ಮ ಮಕ್ಕಳನ್ನು ನಮ್ಮ ಗಡಿ ಕಾಯುವ ಸೈನಿಕರನ್ನಾಗಿಸದೇ ವಿದೇಶದ ಸೇವೆಗಳಿಗೆ ಕಳುಹಿಸಿ, ಇನ್ನು ಇಲ್ಲೆ ಉಳಿದವರು ನಮ್ಮ Brain wash ಮಾಡುತ್ತಾ ತಮ್ಮ Agendaದ ಕಾರ್ಯಾ ಸಾಧನೆಗೆ ನಮ್ಮನ್ನು ಬಳಸಿಕೊಂಡು ದೇಶದ ಎಲ್ಲಾ ಅಧಿಕಾರ, ಸಂಪತ್ತು ಮತ್ತು ಆಸ್ತಿಯನ್ನು ಮಜಾ ಮಾಡುತಿದ್ದಾರೆ.  ಅವರ ವಿಷಕಾರಿ ಮಾತುಗಳನ್ನು ಕೇಳಿಸಿಕೊಂಡು ಅವರ ತಾಳಕ್ಕೆ ಕುಣಿಯುತ್ತಿರುವ ಉಳಿದ ಸತ್ಪ್ರೆಜೆಗಳು ಮಾತ್ರ ಅನಕ್ಷರಸ್ಥರಾಗಿ, ನಿರುದ್ಯೋಗಿಗಳಾಗಿ ಅಸಹಾಯಕರಾಗಿ ಬೀದಿ ಹೆಣಗಳಾಗುತ್ತಿದ್ದಾರೆ!

ಇವರ Agenda ವನ್ನು  ಬಯಲು ಮಾಡಿ ಇವರ ಕುತಂತ್ರಗಳನ್ಮು ಜನರಿಗೆ ತಿಳಿಸಿ ಪ್ರೀತಿ, ಸಹಬಾಳ್ವೆ, ಸಹಿಷ್ಣುತೆ, ಮತ್ತು ಸಹೋದರತೆಯನ್ನು ಸ್ಥಾಪಿಸಲು ಪ್ರಯತ್ನಿಸುವ ವ್ಯಕ್ತಿಗಳನ್ನು ಇವರು ದೇಶದ್ರೋಹಿಗಳಾಗಿ, ಉಗ್ರಗಾಮಿಗಳಾಗಿ  ಅಧರ್ಮಿಗಳಾಗಿ brand ಮಾಡಿ ಇತರರಿಗೂ ಭಯವನ್ನು ಸೃಷ್ಟಿಸಿ ಅವರ ವಿರುದ್ಧ ಯಾರು ನಿಲ್ಲದ ಹಾಗೆ ಮಾಡುವ strategy ಯನ್ನು ಮಾಡುವ ಪ್ರಚಂಡರಿವರು. ನಮ್ಮ ದೇಶಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗು ಚೀನಗಿಂತ ಹೆಚ್ಚು ಅಪಾಯಕಾರಿ ಇವರು ನಮ್ಮ ದೇಶದಲ್ಲಿ ಉಗ್ರಗಾಮಿಗಳ ಅಟ್ಟಹಾಸಕ್ಕೆ ಬಲಿಯಾದ ಜನರಿಗಿಂತ ಇವರ ವಿಷಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು! ಮೇಲಿನ ದೇಶಗಳು ಹಾಗೂ ಉಗ್ರಗಾಮಿಗಳು ನಮ್ಮ ದೇಶದ ಮೇಲೆ ಆಗಾಗ್ಗೆ ದಾಳಿಮಾಡಿದರೆ, ಇವರು ಮಾತ್ರ ನಮ್ಮ ದೇಶವನ್ನು ಪ್ರತೀಕ್ಷಣ ದಾಳಿ ಮಾಡುತಿದ್ದಾರೆ. ಅವರು ನಮ್ಮ ದೇಶದ ಬಾಹ್ಯ ಶತ್ರುಗಳಾದರೆ ಇವರು ಮಾತ್ರ ನಮ್ಮೊಳಗಿನ ಶತ್ರುಗಳು, ಶತ್ರುವಿಗಿಂತ ಅಪ್ರಾಮಾಣಿಕ ಮಿತ್ರ ಬಹಳ ಅಪಾಯಕಾರಿ    ಅಲ್ಲವೆ ?

ಇಂದು ನಮ್ಮ ದೇಶವು ಉಳಿಯಬೇಕಾದರೆ, ಇಲ್ಲಿನ ಪ್ರಜೆಗಳು ಸುಭೀಕ್ಷವಾಗಿ ಬಾಳ ಬೇಕಾದರೆ ನಾವು ಮೊದಲು ಮುಗಿಸಬೇಕಿರುವುದು ಈ ವಿಷಕಾರಿ ಜಂತುಗಳನ್ನು, ಇವರನ್ನು ಮುಗಿಸುವುದೆಂದರೆ ದೈಹಿಕವಾಗಿ ಅಲ್ಲಾ, ಯಾಕೆಂದರೆ ಇವರು ದೈಹಿಕವಾಗಿ ನಿಮ್ಮಷ್ಟು ಶಕ್ತಿವಂತರು ಅಲ್ಲಾ!  ಇವರ ವಾಸಸ್ಥಾನ ಜನರ ಮೆದುಳು ಮತ್ತು ಮನಸ್ಸು , ಇವರು ವಿಷಕಾರಿ ಸಿದ್ಧಾಂತವಾಗಿ, ಆಲೋಚನೆಗಳಾಗಿ ಜನರ ಮನಸ್ಸು ಮತ್ತು ಮೆದುಳಿಗೆ ಹೊಕ್ಕಿವೆ.  ಹಾಗಾಗಿ ನಾವು ಮುಗಿಸಬೇಕಿರುವುದು ಈ ಸಿದ್ದಾಂತ ಮತ್ತು ಆಲೋಚನೆಗಳನ್ನು. ಬುದ್ಧ ಹೇಳಿದ ಹಾಗೆ “ಎಲ್ಲವೂ ಪ್ರಾರಂಭವಾಗುವುದು ಮನಸ್ಸಿನಲ್ಲೇ “,ನಾವು ಜನರ ಮೆದುಳು ಮತ್ತು ಮನಸ್ಸಿನಿಂದ ತೆಗೆದು ಬಿಸಾಡಿದರೆ ಸಾಕು. ಜನರು ಉಳಿಯುತ್ತಾರೆ ನಮ್ಮ ದೇಶವು ಉಳಿಯುತ್ತದೆ. ಹೇಗೆ ಕೊರೋನ ವೈರಾಣು ನಮ್ಮ ಕಣ್ಣಿಗೆ ಕಾಣದೆ ನಮ್ಮನ್ನು ಕಾಡುತ್ತಿದೆಯೋ ಹಾಗೆಯೇ ಇವರು ನಮ್ಮನ್ನು ಮತ್ತು ನಮ್ಮ ದೇಶವನ್ನು ಸಾವಿರಾರು ವರ್ಷಗಳಿಂದ ಕಾಡುತ್ತಿದ್ದಾರೆ. ಕೊರೋನ ವೈರಾಣುವಿನ ಜೊತೆಗೆ ಈ ವೈರಾಣುಗಳನ್ನು ಮುಗಿಸಬೇಕಿದೆ, ಹಾಗಾಗಿ ನಮ್ಮ ಹೋರಾಟ ಎರಡು ವೈರಾಣುಗಳ ಜೊತೆಗೆ . ಸಿದ್ದರಾಗಿ its Do or Die.
-ಹರಿರಾಮ್. ಎ
  ವಕೀಲರು, ರಾಜ್ಯ ನಾಯಕರು BPS

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]