Friday, August 7 , 2020
ಇರ್ಫಾನ್ ಖಾನ್, ರಿಷಿ ಕಪೂರ್ ನಿಧನಕ್ಕೆ ಕಂಬನಿ ಮಿಡಿದ WWE ಸೂಪರ್ ಸ್ಟಾರ್ ಜಾನ್ ಸೀನಾ

WWE ಸೂಪರ್ ಸ್ಟಾರ್ ಜಾನ್ ಸೀನಾ ಅವರು ಖ್ಯಾತ ಚಲನ ಚಿತ್ರ ನಟ ಇರ್ಫಾನ್ ಖಾನ್ ಅವರ ನಿಧನಕ್ಕೆ ಹಾಗೂ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರ ನಿಧನಕ್ಕೆ ತಮ್ಮ ಇನ್ಸ್ ಟಾ ಗ್ರಾಮ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ಅವರ ಹಲವು ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ಜಾನ್ ಸೀನಾ ಅಗಲಿದ ನಟರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಬುಧವಾರ ಇರ್ಫಾನ್ ಖಾನ್ ಅವರು ನಿಧನರಾಗಿದ್ದರು. ಜೈಪುರ ಮೂಲದ ಇರ್ಫಾನ್ ಖಾನ್ ಅವರು, ಜುರಾಸಿಕ್ ವಲ್ರ್ಡ್, ಅಮೇಜಿಂಗ್ ಸ್ಪೈಡರ್ ಮೇನ್ ಮತ್ತು ಲೈಫ್ ಆಫ್ ಪೈ ಮೊದಲಾದ ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಅವರ ನಿಧನಕ್ಕೆ ಹಾಲಿವುಡ್ ಕೂಡ ಸಂತಾಪ ಸೂಚಿಸಿದೆ. WWE ಈ ಇತಿಹಾಸದಲ್ಲಿ ಪ್ರಮುಖರೆನಿಸಿರುವ ಜಾನ್ ಸೀನಾ ಅವರು ಇರ್ಫಾನ್ ಖಾನ್ ಅವರಿಗೆ ಇದೀಗ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಶನಿವಾರ ಜಾನ್ ಸೀನಾ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಅಗಲಿದ ಖ್ಯಾತ ನಟರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಭಾರತೀಯ ಅಭಿಮಾನಿಗಳೊಂದಿಗೆ ಆರೋಗ್ಯಕರ ಸಂಬಂಧವನ್ನಿರಿಸಿಕೊಂಡಿರುವ ಜಾನ್ ಸೀನಾ ಅವರು ಭಾರತೀಯ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಸ್ಪಂದಿಸುತ್ತಿದ್ದಾರೆ. ಈ ಹಿಂದೆ ಭಾರತದ ಟಿವಿ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದ ನಟನೋರ್ವನಿಗೆ ಜಾನ್ ಸೀನಾ ಶುಭ ಹಾರೈಸಿದ್ದರು. ಇದೀಗ ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಮಿಂಚಿರುª ಇರ್ಫಾನ್ ಖಾನ್ ಅವರ ನಿಧನಕ್ಕೆ ಹಾಗೂ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನಕ್ಕೆ ಜಾನ್ ಸೀನಾ ಸಂತಾಪ ಸೂಚಿಸಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]